ಪೆಟ್ರೋಲ್ 2.25 ರು. ಅಗ್ಗ, ಡಿಸೇಲ್ ದರವೂ ಇಳಿಕೆ
ನವದೆಹಲಿ, ಜುಲೈ, 15: ಕೇಂದ್ರ ಸರ್ಕಾರ ವಾಹನ ಸವಾರರಿಗೆ ಜುಲೈ ಮಧ್ಯಂತರದಲ್ಲಿ ಸಿಹಿಸುದ್ದಿ ನೀಡಿದೆ. ಶುಕ್ರವಾರ (ಜುಲೈ 15) ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ 2.25 ರು. ಕಡಿಮೆಯಾಗಿದ್ದರೆ ಡೀಸೆಲ್ ದರವನ್ನು 42 ಪೈಸೆ ಕಡಿತ ಮಾಡಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗಳು ಇಳಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕಳೆದ ಎರಡು ತಿಂಗಳಿನಿಂದ ತೈಲ ದರ ಏರಿಕೆಯ ಹಾದಿಯಲ್ಲೇ ಸಾಗಿತ್ತು. ಜುಲೈ ಆರಂಭದಲ್ಲಿ ಕೊಂಚ ಇಳಿಕೆ ಮಾಡಲಾಗಿತ್ತು.[ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

ಪ್ರತಿ 15 ದಿನಗಳಿಗೆ ಒಮ್ಮೆ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಜುನ್ 30 ರಂದು ಪೆಟ್ರೋಲ್ 89 ಪೈಸೆ ಕಡಿಮೆಯಾಗಿದ್ದರೆ ಡೀಸೆಲ್ ದರವನ್ನು 49 ಪೈಸೆ ಕಡಿತ ಮಾಡಲಾಗಿತ್ತು.[ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]
ಬೆಂಗಳೂರಲ್ಲಿ ಎಷ್ಟು ನೀಡಬೇಕು? ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ನಂತರ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಗೆ 67. 31 ರು. ನೀಡಬೇಕು ಮತ್ತು ಡೀಸೆಲ್ ಗೆ 58. 09 ರು. ನೀಡಬೇಕಾಗಿದೆ.












Click it and Unblock the Notifications