ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 50 ರು ಗಿಂತ ಕಡಿಮೆ!
ನವದೆಹಲಿ, ಫೆ.3: ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜನವರಿ ತಿಂಗಳಿನಲ್ಲಿ ಎರಡು ಬಾರಿ ಇಳಿಕೆಯಾಗಿದ್ದ ಇಂಧನ ದರ ಈಗ ಮತ್ತೊಮ್ಮೆ ಕಡಿಮೆಯಾಗಿದೆ. ಡಿಸೇಲ್ ದರ ಪ್ರತಿ ಲೀಟರ್ ಗೆ 50 ರು ಗಿಂತ ಕಡಿಮೆ ದರಕ್ಕೆ ಕುಸಿದಿದೆ.
ಜನವರಿ 16 ರಂದು ಪೆಟ್ರೋಲ್ ಲೀಟರ್ ಗೆ 2.42 ರೂ. ಕಡಿಮೆಯಾಗಿದ್ದು, ಡೀಸೆಲ್ 2.25 ರೂ. ಕಡಿಮೆಯಾಗಿತ್ತು. ಜನವರಿ 15 ರಂದು ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು 2 ರೂ. ಹೆಚ್ಚಿಸಿತ್ತು. ಅದರೂ ಇಂಧನ ದರದಲ್ಲಿ ಇಳಿಮುಖವಾಗಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿರುವುದು ಕಾರಣವಾಗಿದೆ.

ಕಳೆದ ಬಾರಿ ಅಂದರೆ ಜನವರಿ 16ರ ಇಳಿಕೆ ನಂತರ ಬೆಂಗಳೂರಿಗರು ಪೆಟ್ರೋಲ್ ಗೆ 62.82 ರೂ. ಮತ್ತು ಡಿಸೇಲ್ ಗೆ 50.63 ರೂ. ನೀಡಬೇಕಿತ್ತು. ಈಗ ಇನ್ನಷ್ಟು ಕಡಿಮೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 60.4 ರು, ಡಿಸೇಲ್ 48.38 ರು ಗೆ ಇಳಿದಿದೆ.
ಯಾವುದೇ ವಸ್ತುವಿನ ಪೂರೈಕೆ ಹೆಚ್ಚಾದರೆ ಬೇಡಿಕೆ ಮತ್ತು ಬೆಲೆ ಕಡಿಮೆಯಾತ್ತದೆ ಎಂಬುದು ಅರ್ಥ ವ್ಯವಸ್ಥೆಯ ಮೂಲ ಅಂಶ. ಅಮೆರಿಕ ಸಂಯುಕ್ತ ಸಂಸ್ಥಾನ ಹೊಂದಿರುವ ತೈಲ ಆಸ್ತಿ ಕಳೆದ ಎರಡು ವರ್ಷದಲ್ಲಿ ದ್ವಿಗುಣವಾಗಿದೆ. ಸೌದಿ, ನೈಜೀರಿಯಾ ಮತ್ತು ಅಲ್ಜೇರಿಯನ್ ದೇಶಗಳು ಅಮೆರಿಕದ ಮಾರುಕಟ್ಟೆ ತೊರೆದು ಏಷಿಯಾದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಇಳಿಕೆಗೆ ಪ್ರಮುಖ ಕಾರಣ.[ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]












Click it and Unblock the Notifications