ಹೊಸ ದಾಖಲೆ ಬರೆದ ಪೆಟ್ರೋಲ್, ಡೀಸೆಲ್ ಬೆಲೆ!
ನವದೆಹಲಿ, ಜನವರಿ 16: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೂರು ವರ್ಷಗಳ ನಂತರ ಗರಿಷ್ಠ ಮಟ್ಟ ತಲುಪಿ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ!
ಜ.15 ರಂದು ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 61.74 ರೂ. ಇದ್ದರೆ, ಪೆಟ್ರೋಲ್ ಬೆಲೆ 71.18 ರೂ. ತಲುಪಿತ್ತು. ಕೋಲ್ಕತ್ತಾದಲ್ಲಿ ಡೀಸೆಲ್ 64.40 ರೂ. ಇದ್ದರೆ, ಪೆಟ್ರೋಲ್ ಬೆಲೆ 73.91, ಮುಂಬೈಯಲ್ಲಿಡೀಸೆಲ್ ಮತ್ತು ಪೆಟ್ರೋಲ್ ತಲಾ 65.74ರೂ. ಮತ್ತು 79.06ರೂ. ದಾಖಲಾಗಿದ್ದರೆ, ಚೆನ್ನೈನಲ್ಲಿ ಡೀಸೆಲ್ 65.08 ರೂ. ಮತ್ತು ಪೆಟ್ರೋಲ್ ದರ ಲೀ.ಗೆ 73.80 ರೂ. ದಾಖಲಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ರೂ.71.06 ಇದ್ದರೆ, ಡೀಸೆಲ್ ದರ ಲೀಟರ್ ಗೆ 60.89 ರೂ. ಇತ್ತು. ಇಂದು(ಜ.15) ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಜಾಸ್ತಿಯಾಗುವ ಸಂಭವವಿದೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳು, ಉತ್ಪಾದನೆಯನ್ನು ಕಡಿತಗೊಳಿಸಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.












Click it and Unblock the Notifications