ಹೊಸ ವರ್ಷಕ್ಕೆ ಮತ್ತಷ್ಟು ಅಗ್ಗವಾಯ್ತು ಪೆಟ್ರೋಲ್, ಡೀಸೆಲ್
ನವದೆಹಲಿ, ಜ. 1: ಹೊಸ ವರ್ಷದ ಆರಂಭದ ದಿನವೇ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದ್ದು ಗ್ರಾಹಕರ ಖುಷಿ ಹೆಚ್ಚಿಸಿದೆ. ಪೆಟ್ರೋಲ್, ಡೀಸೆಲ್ ದರ ಲೀಟರ್ ಗೆ 2 ರೂ. ಕಡಿಮೆಯಾಗಿದ್ದು ಜನವರಿ 1 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ತೈಲ ಬೆಲೆ ಇಳಿಕೆಯಾಗುತ್ತಿರುವುದರ ಲಾಭ ಭಾರತದ ಗ್ರಾಹಕರಿಗೆ ದೊರೆತಿದೆ. ಭಾರತೀಯ ರೂಪಾಯಿ ಸಹ ಮೌಲ್ಯ ಕಾಯ್ದುಕೊಂಡಿರುವುದು ಇಳಿಕೆಗೆ ಕಾರಣವಾಗಿದೆ. ಬ್ಯಾರಲ್ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 55 ಡಾಲರ್ ಗಿಂತ ಕಡಿಮೆಯಾಗಿದೆ.[ಹೊಸ ವರ್ಷಕ್ಕೆ ಪೆಟ್ರೋಲ್, ಡಿಸೇಲ್ ಮತ್ತಷ್ಟು ಸೋವಿ]

ಕೇಂದ್ರ ಸರ್ಕಾರದ ಅಧಿಕಾರಿಗಳು ಡಿಸೆಂಬರ್ 31 ರಂದೇ ಇಳಿಕೆಯ ಸೂಚನೆ ನೀಡಿದ್ದರು. ಅದರಂತೆ ಹೊಸ ವರ್ಷದ ಕೊಡುಗೆ ಎಂಬಂತೆ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಬೆಲೆ ಎಷ್ಟಾಗುತ್ತೆ?
ಕಳೆದ ಬಾರಿ ಅಂದರೆ ಡಿಸೆಂಬರ್ 16 ರಂದು ಕೊನೆಯದಾಗಿ ತೈಲ ಬೆಲೆ ಇಳಿಕೆ ಮಾಡಲಾಗಿತ್ತು. ಅದರಂತೆ ಬೆಂಗಳುರಿಗರು ಪೆಟ್ರೋಲ್‌ಗೆ 67.27 ರೂ. ನೀಡಬೇಕಾಗಿತ್ತು. ಅಂತೆಯೇ ಡಿಸೇಲ್‌ಗೆ 54.88 ರೂ. ನೀಡಬೇಕಿತ್ತು. ಆದರೆ ಈಗ ತಲಾ 2 ಇಳಿಕೆಯ ನಂತರ ಬೆಂಗಳೂರಿಗರು ಪೆಟ್ರೋಲ್ ಗೆ 65.27 ರೂ. ಮತ್ತು ಡಿಸೇಲ್ ಗೆ 52.88 ನೀಡಿದರೆ ಸಾಕು.












Click it and Unblock the Notifications