Karnataka Police: "ಬಂಧನ ವಿಚಾರ"ದಲ್ಲಿ ಕರ್ನಾಟಕ ಪೊಲೀಸರ ಕಾರ್ಯವೈಖರಿ ಓಕೆ.. ಓಕೆ ಅಷ್ಟೇ ?!
Karnataka Police: ದೇಶದ ವಿವಿಧ ಭಾಗದಲ್ಲಿ ಪೊಲೀಸರ ಕಾರ್ಯವೈಖರಿ ಹೇಗಿದೆ ಹಾಗೂ ಅಪರಾಧಿಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆಯುವುದು ಹಾಗೂ ಬಂಧಿಸುವ ಕಾರ್ಯ ವಿಧಾನ ಯಾವ ರೀತಿ ಇದೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು. ಇದರಲ್ಲಿ ಕರ್ನಾಟಕದ ಪೊಲೀಸರ ಬಗ್ಗೆಯೂ ವಿವರ ನೀಡಲಾಗಿದೆ. ಆದರೆ ಕರ್ನಾಟಕದ ಪೊಲೀಸರು ಬಂಧನದ ವಿಚಾರದಲ್ಲಿ ಹಿಂದುಳಿದಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಪೊಲೀಸರು ಬಂಧಿಸುವ ಪ್ರಮಾಣ ಹಾಗೂ ಅದರಲ್ಲಿ ಕಾನೂನು ವಿಧಾನಗಳನ್ನು ಅನುಸರಿಸುವುದು ಕಡಿಮೆ. ಆದರೆ, ಕೇರಳದಲ್ಲಿ ಪೊಲೀಸರು ಬಂಧನದ ವಿಧಾನವನ್ನು ಅನುಸರಿಸುವುದು ಹೆಚ್ಚಾಗಿ ಇದೆ ಎಂದು Torture in Custody / ಕಸ್ಟಡಿಯಲ್ಲಿ ಚಿತ್ರಹಿಂಸೆ ಅಧ್ಯಯನ ವರದಿಯಲ್ಲಿ ಈ ವಿಷಯಗಳನ್ನು ಉಲ್ಲೇಖ ಮಾಡಲಾಗಿದೆ.

ಕರ್ನಾಟಕದಲ್ಲಿ ಪೊಲೀಸರು ಬಂಧನದ ಕೆಲವೊಂದು ಕಾರ್ಯವಿಧಾನಗಳನ್ನು ಅನುಸರಿಸುವ ಸಾಧ್ಯತೆ ಕಡಿಮೆ ಇದ್ದು. ಕೇರಳದಲ್ಲಿ ಪೊಲೀಸರು ಇದನ್ನು ಫಾಲೋ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. "ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿ ಅಧ್ಯಯನ ವರದಿ 2025" ಪೊಲೀಸ್ ಕಸ್ಟಡಿ ಹಿಂಸೆ ಹಾಗೂ (ಅನ್) ಅಕೌಂಟೆಬಿಲಿಟಿ" ಎನ್ನುವ ಅಧ್ಯಯನ ವರದಿಯಲ್ಲಿ ಈ ವಿಷಯಗಳನ್ನು ಉಲ್ಲೇಖ ಮಾಡಲಾಗಿದೆ.
ಕೇರಳದ ಪೊಲೀಸರು ಯಾವಾಗಲೂ ನಿಯಮಗಳನ್ನು ಅನುಸರಿಸುತ್ತಾರೆ. ಇದರ ಪ್ರಮಾಣ ಹೆಚ್ಚಾಗಿದೆ ಎಂದು ಶೇಕಡಾ 94ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಶೇ 94ರಷ್ಟು ಜನ ಯಾವಾಗಲೂ ಕಾರ್ಯ ವಿಧಾನವನ್ನು ಅನುಸರಿಸುತ್ತಾರೆ ಎಂದು ಹೇಳಿದರೂ ಶೇ 6ರಷ್ಟು ಜನ ಕೆಲವೊಮ್ಮೆ ಮಾತ್ರ ಕೇರಳ ಪೊಲೀಸರು ಈ ವಿಧಾನವನ್ನು ಅನುಸರಿಸುತ್ತಾರೆ ಎಂದು ಹೇಳಿದ್ದಾರೆ.
ಕರ್ನಾಟಕದಂತಹ ಪ್ರಮುಖ ಹಾಗೂ ಮುಂದುವರಿದ ರಾಜ್ಯದಲ್ಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ ಹಾಗೂ ಕರ್ನಾಟಕದಂತಹ ರಾಜ್ಯಗಳಲ್ಲಿ ಈ ವಿಧಾನವು ತುಂಬಾನೇ ಕಡಿಮೆ ಇದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಬಂಧನಕ್ಕೆ ಸಂಬಂಧಿಸಿದ ನಿಯಮಗಳನ್ನು ವಿರಳವಾಗಿ ಅಥವಾ ತುಂಬಾ ಕಡಿಮೆ ಎಂದು ಶೇ 70 ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಶೇ13 ರಷ್ಟು ಜನ ಯಾವಾಗಲೂ ನಿಮಯಗಳನ್ನು ಅನುಸರಿಸಲಾಗುತ್ತದೆ ಎಂದೂ, ಇನ್ನು ಶೇ17 ರಷ್ಟು ಜನರು ಕೆಲವೊಮ್ಮೆ ಪಾಲಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೇರಳ ಹಾಗೂ ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಜಾರ್ಖಂಡ್ ರಾಜ್ಯದಲ್ಲಿ ಪೊಲೀಸರ ಕಾರ್ಯ ವಿಧಾನವು ಅತ್ಯಂತ ಕಳೆಪಯಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ಶೇ. 43 ರಷ್ಟು ಜನರು ಬಂಧನದ ಸಂದರ್ಭದಲ್ಲಿ ನಿಯಮಗಳನ್ನು ಪಾಲನೆ ಮಾಡುವುದು ವಿರಳ ಎಂದಿದ್ದಾರೆ. ಬಿಹಾರದಲ್ಲಿ ಇದು ಶೇ. 51 ರಷ್ಟು ಮಾತ್ರ ಇದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ವಿಷಯಗಳು ಕಾಮನ್ ಕಾಸ್ / Common Cause ಎನ್ನುವ ಎನ್‌ಜಿಒ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಇನ್ನು ಜಾರ್ಖಂಡ್, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿರುವ ಅರ್ಧಕ್ಕಿಂತ ಹೆಚ್ಚು ಪೊಲೀಸರು ಕಾನೂನು ವಿಚಾರಣೆಗಿಂಗ ಸಣ್ಣ ಶಿಕ್ಷೆ ನೀಡುವುದು ಉತ್ತಮ ಎಂದು ಭಾವಿಸಿದ್ದಾರೆ ಎಂದು ಅಭಿಪ್ರಾಯಪಡುತ್ತಾರೆ ಎಂದು ಹೇಳಲಾಗಿದೆ.












Click it and Unblock the Notifications