Corruption: ಪದೇ ಪದೇ ಲಂಚ ಕೇಳುತ್ತಿದ್ದ ಅಧಿಕಾರಿಗೆ ವಿಚಿತ್ರ ಶಿಕ್ಷೆ ಕೊಟ್ಟ ಜನ
ಭ್ರಷ್ಟಾಚಾರ ಎನ್ನುವುದು ಭಾರತೀಯರ ಜೀವನದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಯಾವುದೇ ಸರ್ಕಾರಿ ಕೆಲಸ ಆಗಬೇಕಾದರೂ ಲಂಚ ಕೊಡಲೇಬೇಕು ಎನ್ನುವಂತ ಸ್ಥಿತಿ ಎನ್ನುವುದು ಜನರ ಆರೋಪ. ಹಲವು ಸರ್ಕಾರಿ ಕಚೇರಿಗಳು ಲಂಚದ ಕೂಪಗಳಾಗಿದೆ. ಲೋಕಾಯುಕ್ತ, ಐಟಿ ದಾಳಿ ವೇಳೆ ಸಾವಿರದಲ್ಲಿ ಸಂಬಳ ಪಡೆಯುವ ಸರ್ಕಾರಿ ನೌಕರರ ಬಳಿ ಕೋಟಿಗಟ್ಟಲೆ ಆಸ್ತಿಯಿರುವುದರಲ್ಲೇ ಭ್ರಷ್ಟಾಚಾರ ಯಾವ ಮಟ್ಟದಲ್ಲಿದೆ ಎನ್ನುವುದು ತಿಳಿಯುತ್ತದೆ.
ಲಂಚ ಪಡೆಯುವುದು ಎಷ್ಟು ತಪ್ಪೋ ಲಂಚ ನೀಡುವುದು ಕೂಡ ಅಷ್ಟೇ ತಪ್ಪು. ಜನರಿಗೂ ತಮ್ಮ ಕೆಲಸ ಆದರೆ ಸಾಕು ಎನ್ನುವಂತೆ ಒಂದಷ್ಟು ಹಣ ಕೊಟ್ಟು ಸುಮ್ಮನಾಗುತ್ತಾರೆ. ಆದರೆ ಗುಜರಾತ್‌ನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಭ್ರಷ್ಟಾಚಾರಕ್ಕೆ ಬೇಸತ್ತ ಜನ ವಿಚಿತ್ರವಾದ ಶಿಕ್ಷೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Kingdom of corruption, Modi’s vibrant Gujarat Model..!!
— mads@madhuri (@madshumanbeing1) January 17, 2025
Kuch Din to Gujaro Gujarat Mein pic.twitter.com/tRHBgdtXtc
ಗಮನ ಸೆಳೆದ ವಿಭಿನ್ನ ಪ್ರತಿಭಟನೆ
ಗುಜರಾತ್‌ನಲ್ಲಿ ಪದೇ ಪದೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಸರ್ಕಾರಿ ಅಧಿಕಾರಿ ಮೇಲೆ ಸಿಟ್ಟಿಗೆದ್ದ ಜನ ಕುತ್ತಿಗೆಗೆ ಫಲಕಗಳನ್ನು ನೇತು ಹಾಕಿಕೊಂಡು ಘೋಷಣೆ ಕೂಗಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ. ಸರ್ಕಾರಿ ಅಧಿಕಾರಿ ತಮ್ಮ ಕುರ್ಚಿಯ ಮೇಲೆ ಪ್ರತಿಭಟನಾಕಾರರಿಗೆ ಕೈಮುಗಿಯುತ್ತಿದ್ದು, ಜನ ತಮ್ಮ ಸಿಟ್ಟು ತೋರಿಸಲು ನೋಟುಗಳನ್ನು ಅಧಿಕಾರ ಮೇಲೆ ಎರಚಿದ್ದಾರೆ.

"ತಗೊಳಿ, ಅಕ್ರಮವಾಗಿ ಗಳಿಸಿದ ಹಣವನ್ನು ಎಷ್ಟು ತಿನ್ನುತ್ತೀರಾ? ಎಂದು ಪ್ರತಿಭಟನಾಕಾರರು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳು ಜನರ ಕೆಲಸ ಮಾಡಿಕೊಡಲು ಎಷ್ಟು ಲಂಚ ಕೊಡುತ್ತಿದ್ದರು, ಅದರಲ್ಲಿ ಮೇಲಿನ ಅಧಿಕಾರಿಗಳಿಗೆ ಎಷ್ಟು ನೀಡುತ್ತಿದ್ದರು" ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈವರೆಗೂ 5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದ್ದು, ವಿಡಿಯೋ ನೋಡಿದವರು ಲಂಚ ಪಡೆಯುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಹೀಗೆ ಮಾಡಬೇಕು ಎಂದ ನೆಟ್ಟಿಗರು
ವಿಡಿಯೋ ನೋಡಿದ ನೆಟ್ಟಿಗರು ಲಂಚ ಕೇಳುವ ಎಲ್ಲರಿಗೂ ಕಠಿಣವಾದ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಭ್ರಷ್ಟಾಚಾರ ಇಲ್ಲದೇ ಇದ್ದರೆ ಭಾರತ ಇನ್ನಷ್ಟು ಅಭಿವೃದ್ಧಿಯಾಗಿರುತ್ತಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಲಂಚ ಪಡೆಯುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.












Click it and Unblock the Notifications