ಭಾರತದ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದ ಪ್ರಕರಣಗಳು ಎಷ್ಟು ಗೊತ್ತಾ?
ನವದೆಹಲಿ: ಭಾರತದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾದಂತೆ, ಕೋರ್ಟ್‌ಗಳಲ್ಲಿ ಪೆಂಡಿಂಗ್ ಕೇಸ್‌ಗಳು ಕೂಡ ಏರಿಕೆ ಕಾಣುತ್ತಿವೆ. ಅದರಲ್ಲೂ ಭಾರತದ ಹೈಕೋರ್ಟ್‌ಗಳಲ್ಲಿ ಪ್ರಮುಖ ಪ್ರಕರಣಗಳನ್ನ ಇತ್ಯರ್ಥ ಮಾಡಲಾಗುತ್ತದೆ. ಆದರೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಪೆಂಡಿಂಗ್ ಇರುವ ಕೇಸ್‌ಗಳ ಸಂಖ್ಯೆ ಎಷ್ಟು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನ ಖುದ್ದು ಕೇಂದ್ರ ಸರ್ಕಾರವೇ ನೀಡಿದೆ ಬನ್ನಿ ತಿಳಿಯೋಣ.
ಹೌದು, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಕೇಸ್‌ಗಳು ಬಾಕಿ ಇವೆ. ಹೀಗೆ ಕಳೆದ 30 ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 71,000ಕ್ಕೂ ಅಧಿಕ ಕೇಸ್ ಇತ್ಯರ್ಥವಾಗದೆ ಬಾಕಿ ಉಳಿದಿವೆ ಅಂತೆ. ಈ ಕುರಿತು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಜೊತೆಗೆ 1.01 ಲಕ್ಷ ಕೇಸ್‌ಗಳು 30ಕ್ಕೂ ಹೆಚ್ಚು ವರ್ಷದಿಂದ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಕುರಿತಾಗಿ ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ವಿಚಾರಣೆ ಹಂತದಲ್ಲಿವೆ 5 ಕೋಟಿ ಕೇಸ್!
ಅಷ್ಟಕ್ಕೂ ಈ ವರ್ಷದ ಜುಲೈ 24ರವರೆಗೆ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 30 ವರ್ಷಕ್ಕೂ ಹಳೆಯದಾದ 71,204 ಪ್ರಕರಣ ಬಾಕಿ ಇವೆ ಎನ್ನಲಾಗಿದೆ. 1.01 ಲಕ್ಷ ಪ್ರಕರಣಗಳು ಜಿಲ್ಲಾ ಹಾಗೂ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್. ಇದರ ಜೊತೆಗೆ ಸುಪ್ರೀಂ ಕೋರ್ಟ್, 25 ಹೈಕೋರ್ಟ್‌ಗಳು ಸೇರಿದಂತೆ ಇನ್ನಿತರ ಕೆಳ ನ್ಯಾಯಾಲಯಗಳಲ್ಲಿ ಒಟ್ಟಾರೆ ಸುಮಾರು 5.02 ಕೋಟಿ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಹಾಗಾದರೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತಾ? ಬನ್ನಿ ಅದರ ಮಾಹಿತಿ ಮುಂದೆ ತಿಳಿಯೋಣ.
69,766 ಪ್ರಕರಣಗಳು ಬಾಕಿ!
ಸುಪ್ರೀಂಕೋರ್ಟ್ ಅನ್ನ ದೇಶದ ನ್ಯಾಯಾಂಗದ ಹೃದಯ ಎಂದು ಕರೆಯಲಾಗುತ್ತೆ. ಇನ್ನು ಈ ಹಿನ್ನೆಲೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ನೋಡೋದಾದರೆ, ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಂದರೆ ಐಸಿಎಂಐಎಸ್ ದತ್ತಾಂಶದ ಮಾಹಿತಿ ಪ್ರಕಾರ, ಜುಲೈ 1ರ ವೇಳೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 69,766 ಪ್ರಕರಣಗಳು ಬಾಕಿ ಇವೆ ಎನ್ನಲಾಗಿದೆ. ಹಾಗೇ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದಲ್ಲಿ ಇರುವ ಮಾಹಿತಿ ಪ್ರಕಾರ, ಹೈಕೋರ್ಟ್‌ಗಳಲ್ಲಿ ಮತ್ತು ಜಿಲ್ಲಾ ಹಾಗೂ ಕೆಳ ನ್ಯಾಯಾಲಯಗಳಲ್ಲಿ ಜುಲೈ 14ರ ವೇಳೆಗೆ ಕ್ರಮವಾಗಿ 60.62 ಲಕ್ಷ ಹಾಗೂ 4.41 ಕೋಟಿ ಕೇಸ್‌ಗಳು ಬಾಕಿ ಇವೆಯಂತೆ.

ಹಾಗೇ ನ್ಯಾಯಾಧೀಶರ ಹುದ್ದೆ ಖಾಲಿ ಇರುವುದು ಮಾತ್ರ ಪ್ರಕರಣ ಇತ್ಯರ್ಥವಾಗದೆ ಉಳಿಯಲು ಕಾರಣವಲ್ಲ ಎಂದು ಕಾನೂನು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳ ಪೈಕಿ, ಮೂಲ ಸೌಕರ್ಯ ಮತ್ತು ಸಿಬ್ಬಂದಿ ಕೊರತೆ ಕೂಡ ಸೇರಿದೆ. ಕೇಸ್‌ಗಳ ಸಂಕೀರ್ಣತೆ, ಸಾಕ್ಷ್ಯ ವಿಧ, ತನಿಖಾ ಸಂಸ್ಥೆ, ಸಾಕ್ಷಿಗಳು ಸೇರಿ ಸಂಬಂಧಪಟ್ಟವರ ಸಹಕಾರ ಹಾಗೂ ಅರ್ಜಿ ಸಲ್ಲಿಸುವ ನಿಯಮಾವಳಿ ಇತರ ಕಾರಣಗಳಿಂದ ಪ್ರಕರಣಗಳ ಇತ್ಯರ್ಥ ತಡವಾಗುತ್ತಿದೆ ಎಂದು ಮಾಹಿತಿಯನ್ನ ನೀಡಿಲಾಗಿದೆ. ಈ ಮೂಲಕ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಬಾಕಿ ಇರುವ ಪ್ರಕರಣಗಳ ಸಂಖ್ಯೆ ಇಳಿಕೆಗೆ ಅಗತ್ಯ ಇರುವ ಸೌಕರ್ಯ ಒದಗಿಸಲು ಚರ್ಚೆ ಕೂಡ ನಡೆಯುತ್ತಿದೆ. ಅಲ್ಲದೆ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಬೇಕಾದ ಕ್ರಮಗಳನ್ನು ಕೂಡ ಈಗಾಗಲೇ ಕೈಗೊಳ್ಳಲಾಗಿದೆ. ಆದರೂ ಹೆಚ್ಚುತ್ತಿರುವ ಕೇಸ್‌ಗಳ ಸಂಖ್ಯೆ ಹೊರೆಯನ್ನ ದಿನ ದಿನಕ್ಕೂ ಹೆಚ್ಚು ಮಾಡುತ್ತಿದೆ.












Click it and Unblock the Notifications