Tirumala Laddu: ಕಲಬೆರೆಕೆ ತುಪ್ಪ ಬಳಸಲಾಗಿಲ್ಲ ಎಂದ ಇಒ ಹೇಳಿಕೆಗೆ ಸ್ಪಷ್ಟನೆ ನೀಡಿದ ಪವನ್ ಕಲ್ಯಾಣ್
ಅತ್ಯಂತ ಶ್ರೀಮಂತ ದೇವರುಗಳಲ್ಲಿ ಒಂದಾದ ತಿರುಪತಿ ತಿರುಮಲದಲ್ಲಿ ಅಪವಿತ್ರ ಘಟನೆಯೊಂದು ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ತಿರುಪತಿಯ ಪವಿತ್ರ ಪ್ರಸಾದ ಎಂದು ಪರಿಗಣಿಸುವ ಲಡ್ಡು ತಯಾರಿಕೆಗೆ ಬಳಸಲಾಗುವ ತುಪ್ಪದಲ್ಲಿ ಪ್ರಾಣಿಕೊಬ್ಬನ್ನು ಬಳಸಲಾಗಿದೆ ಎಂಬ ಹೇಳಿಕೆ ಲಕ್ಷಾಂತರ ವೆಂಕಟೇಶ್ವರ ಭಕ್ತರನ್ನು ಬೆಚ್ಚಿಬೀಳಿಸಿದೆ. ಆದರೆ ಟಿಟಿಡಿ ಇಒ ಮಾತ್ರ 'ತುಪ್ಪದಲ್ಲಿ ಕಲಬೆರಿಕೆ ಇಲ್ಲ' ಎಂಬ ಹೇಳಿಕೆ ಸಾಕಷ್ಟು ಗೊಂದಲ ಸೃಷ್ಟಿಸಿದ್ದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಲಡ್ಡುಗಳನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಪರೀಕ್ಷಾ ವರದಿಗಳು ದೃಢಪಡಿಸಿವೆ. ಸದ್ಯ ಈ ವಿವಾದ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶ ಸರ್ಕಾರದ ಕೆಲವು ಹೇಳಿಕೆಗಳು ಅನೇಕ ಸಂದರ್ಭಗಳಲ್ಲಿ ಕಲಬೆರಕೆ ತುಪ್ಪದ ಬಳಕೆಯನ್ನು ದೃಢಪಡಿಸಿದರೆ, ಇತ್ತ ಮಾಧ್ಯಮಗಳು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ (ಇಒ) ಅವರು "ಕಲಬೆರಕೆ ತುಪ್ಪವನ್ನು ಎಂದಿಗೂ ಬಳಸಲಿಲ್ಲ" ಎಂದು ಹೇಳಿದ್ದನ್ನು ಬಿತ್ತರಿಸಿವೆ. ಇದು ಭಕ್ತರಲ್ಲಿ ಗೊಂದಲವನ್ನು ಹೆಚ್ಚಿಸಿದೆ.

OneIndiaದ ಆಕಾಶ್ ಕೊಲ್ಲೂರು ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಗೊಂದಲವನ್ನು ನಿವಾರಿಸಿದ್ದಾರೆ. ''ಕಲಬೆರಕೆ ತುಪ್ಪವನ್ನು ಎಂದಿಗೂ ಬಳಸದಿದ್ದರೆ ಸಮಸ್ಯೆ ಈ ಹಂತಕ್ಕೆ ಹೋಗುತ್ತಿರಲಿಲ್ಲ. ಯಾವುದೇ ಹೇಳಿಕೆ ನೀಡುವ ಮೊದಲು ನಾವು ಯಾವಾಗಲೂ ಎಚ್ಚರಿಕೆ ವಹಿಸುತ್ತೇವೆ. ಇಒ ಅವರು ಹೇಳಿದ್ದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಲ್ಲ. ಹಿಂದಿನ ಪರಿಸ್ಥಿತಿ ಬಗ್ಗೆ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇಒ ಅವರು ಅಧಿಕಾರ ವಹಿಸಿಕೊಂಡ ನಂತರದ ಅವಧಿಯಲ್ಲಿ ಇಂಥಹ ಘಟನೆ ನಡೆದಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ಪವನ್ ಕಲ್ಯಾಣ್ ವಿವರಿಸಿದ್ದಾರೆ. ಇಒ ಅವರು ಅಧಿಕಾರ ವಹಿಸಿಕೊಂಡ ನಂತರ ಸಮಸ್ಯೆ ಪರಿಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ''ಹೊಸ ಇಒ ಬಂದಾಗ, ಅವರು ಕಲಬೆರಕೆ ತುಪ್ಪವನ್ನು ಪೂರೈಸುವ ಕಂಪನಿಯಿಂದ ತುಪ್ಪ ಖರೀದಿ ಮಾಡುವುದನ್ನು ನಿಲ್ಲಿಸಿ, ಸರಿಯಾಗಿ ಪರೀಕ್ಷಿಸಿದ ತುಪ್ಪವನ್ನು ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವರು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ (ಇಒ)ಯ ಮಾತನ್ನು ತಿರುಚಲು ಆಯ್ಕೆ ಮಾಡಿದ್ದಾರೆ" ಎಂದು ಪವನ್ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ.
ಪ್ರಸಾದದ ಗುಣಮಟ್ಟದ ಬಗ್ಗೆ ನಾವು ಬಹಳ ದಿನಗಳಿಂದ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ಇಒ ಅವರ ಹೇಳಿಕೆಯನ್ನು ಅನುವಾದದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ. ಅವರು ಅದನ್ನು ತೆಲುಗಿನಲ್ಲಿ ಉತ್ತಮವಾಗಿ ವ್ಯಕ್ತಪಡಿಸಿರಬಹುದು. ಆದರೆ ಇಂಗ್ಲಿಷ್‌ನಲ್ಲಿ, ಅದು ವಿಭಿನ್ನ ಅರ್ಥ ನೀಡುತ್ತದೆ ಎಂದರು.
ನಾನು ಅವರನ್ನು ವೈಯಕ್ತಿಕವಾಗಿ ಕೇಳಿದಾಗ, ಅವರು ಕಲಬೆರಿಕೆ ತುಪ್ಪ ಖರೀದಿ ಮಾಡುವುದನ್ನು ನಿಲ್ಲಿಸಿದ ಬಳಿಕ ತುಪ್ಪವನ್ನು ಪರೀಕ್ಷಿಸಲಾಗಿದೆ ಮತ್ತು ಉತ್ತಮ ಗುಣಮಟ್ಟದ ತುಪ್ಪು ಬಳಕೆ ಮಾಡಲಾಗುತ್ತಿದೆ, ಈ ವಿಚಾರವನ್ನು ನಾನು ಹೇಳಿದ್ದು ಎಂದು ಅವರು ಖಚಿತಪಡಿಸಿದರು. ಆದರೆ ಕೆಲವು ಗುಂಪುಗಳು ಬೇರೆ ಏನನ್ನೋ ಸೂಚಿಸಲು ಅವರ ಮಾತುಗಳನ್ನು ತಿರುಚುತ್ತಿದ್ದಾರೆ ಎಂದು ಪವನ್ ಕಲ್ಯಾನ್ ಆರೋಪಿಸಿದರು.
ಮಾಧ್ಯಮಗಳು ಇಒ ಹೇಳಿಕೆಯನ್ನು ವರದಿ ಮಾಡಿದ ಕೆಲವೇ ದಿನಗಳಲ್ಲಿ ಪವನ್ ಕಲ್ಯಾಣ್ ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ. ತಿರುಚಿದ ಹೇಳಿಕೆ ಭಕ್ತರಲ್ಲಿ ವ್ಯಾಪಕ ಗೊಂದಲವನ್ನು ಉಂಟುಮಾಡಿದೆ. ಕಲಬೆರಕೆ ತುಪ್ಪದ ಬಳಕೆಯನ್ನು ಇಒ ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎಂದು ಕೆಲ ವರದಿಗಳು ಸೂಚಿಸಿವೆ. ಇದು ಆಂಧ್ರಪ್ರದೇಶದ ಆಡಳಿತಾರೂಢ ಮೈತ್ರಿಕೂಟದ ಹೇಳಿಕೆಗಳಿಗೆ ವಿರುದ್ಧವಾಗಿದೆ. ಆಹಾರ ಕಲಬೆರಕೆಯ ಸಣ್ಣ ಪ್ರಕರಣಕ್ಕಿಂತ ಈ ವಿಷಯವು ಹೆಚ್ಚು ಮಹತ್ವದ್ದಾಗಿದೆ ಎಂದು ಪವನ್ ಕಲ್ಯಾಣ್ ಒತ್ತಿ ಹೇಳಿದರು.
ಇಂತಹ ಘಟನೆಗಳು ಟಿಟಿಡಿಯಂತಹ ಧಾರ್ಮಿಕ ಸಂಸ್ಥೆಗಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಸಹ ಪ್ರತಿಬಿಂಬಿಸುತ್ತವೆ. ಇಂತಹ ಪೂಜ್ಯನೀಯ ಸ್ಥಳಗಳಲ್ಲಿ ಪಾವಿತ್ರ್ಯತೆ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಪುನರುಚ್ಚರಿಸಿದರು. ಲಕ್ಷಾಂತರ ಭಕ್ತರ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿದೆ. ಸದ್ಯ ನಾವು ಪರಿಸ್ಥಿತಿಗೆ ಸ್ಪಷ್ಟತೆ ತಂದಿದ್ದೇವೆ. ಹಿಂದೆ ಏನಾಗಿದೆ ಎಂಬುದರ ಬಗ್ಗೆ ಈಗ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications