• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಹೃದಯ ಚಿಕಿತ್ಸೆ ಅಮೆರಿಕಕ್ಕಿಂತಲೂ ದುಬಾರಿ

|

ಹೊಸದೆಹಲಿ, ಸೆ.15 : ಹೃದಯ ಸಂಬಂಧಿ ತೊಂದರೆಯಿದ್ದವರಿಗೆ ಮತ್ತೊಂದು ಶಾಕಿಂಗ್ ನ್ಯೂಸ್‌ ಎದುರಾಗಿದೆ. ಅಗತ್ಯವಾಗಿ ಬೇಕಾಗುವ 'ಸ್ಟೆಂಟ್ಸ್‌' ಅಳವಡಿಕೆಗೆ ಮೂರು ಪಟ್ಟು ಹೆಚ್ಚು ಬೆಲೆ ತೆರಬೇಕಾಗಿದೆ.

ಇದು ಸರ್ಕಾರದ ಆದೇಶವಲ್ಲ. ಬದಲಾಗಿ ಈ ರೀತಿಯ ಮೆಡಿಕಲ್ ಡಿವೈಸ್ ತಯಾರಿಕಾ ಕಂಪನಿಗಳು ಕಂಡುಕೊಂಡ ಹೊಸ ರೀತಿಯ ದರೋಡೆ ನೀತಿ. ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥರ್ಟಿ ಆಫ್ ಇಂಡಿಯಾ ಈ ರೀತಿಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದರೂ ಜಾಣ ಕಂಪನಿಗಳು ಚಾಪೆ ಕೆಳಗೆ ನುಸುಳುವ ಕೆಲಸ ಮಾಡುತ್ತಿವೆ.(ಉಭಯ ರಾಜ್ಯಗಳ ಹೃದಯ ಸಾಗಣೆ ಸಾಹಸ ಯಶಸ್ವಿ)

ಬಹಳಷ್ಟು ರೋಗಿಗಳಿಂದ ಒತ್ತಾಯ ಪೂರ್ವಕವಾಗಿ ಹಣ ಕೀಳಲಾಗುತ್ತಿದೆ. 28 ಸಾವಿರ ರೂ. ನಿಂದ 48 ಸಾವಿರ ರೂ. ನೀಡಬೇಕಿದ್ದ ಜಾಗದಲ್ಲಿ 60 ಸಾವಿರದಿಂದ ಒಂದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗುತ್ತಿದೆ. ಅಮೆರಿಕ ಮತ್ತು ಇಂಗ್ಲೆಂಡ್‌ಗೆ ಹೋಲಿಸಿದರೂ ನಮ್ಮಲ್ಲಿ ಚಿಕಿತ್ಸೆ ದುಬಾರಿಯಾಗಿದೆ. ಕಾರಣ ಅಲ್ಲಿ ಈ ತರಹದ ವಸ್ತುಗಳ ದರ ನಿಯಂತ್ರಣಕ್ಕೆ ವ್ಯವಸ್ಥಿತ ರೂಪುರೇಷೆಯಿದೆ.

ಹಿರಿಯ ವೈದ್ಯರೊಬ್ಬರು ಹೇಳುವಂತೆ, ಈ ರೀತಿ ಹೆಚ್ಚಿನ ಬೆಲೆ ಕೇಳುವ ಸ್ಟೆಂಟ್ಸ್‌ಗಳೆಲ್ಲ ಬೇರೆಡೆಯಿಂದ ತರಿಸಿಕೊಂಡಂತವು. ಸರ್ಕಾರಕ್ಕೆ ಮಾಹಿತಿಯಿಲ್ಲದೇ ಇವು ದೇಶದ ಒಳಕ್ಕೆ ಬಂದಿಲ್ಲ. ಅನಿವಾರ್ಯವಾಗಿ ಕಂಪನಿಗಳು ರೋಗಿಗಳಿಂದ ಹಣ ತೆಗೆದುಕೊಳ್ಳಲೇಬೇಕಾಗುತ್ತದೆ. ಸರ್ಕಾರಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿರುವುದು ಕಂಪನಿಗಳಿಗೆ ವರವಾಗಿ ಪರಿಣಮಿಸಿದೆ ಎನ್ನುತ್ತಾರೆ.(ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!)

ಮಹಾರಾಷ್ಟ್ರದ ಆಹಾರ ಮತ್ತು ಔಷಧ ನಿಯಂಯತ್ರಣ ಸಮಿತಿ ಈ ಬಗ್ಗೆ ವಿವರವಾದ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಔಷಧ ನಿಯಂತ್ರಣ ಮಂಡಳಿ(ಎನ್‌ಪಿಪಿಎ)ಗೆ ವರ್ಷದ ಹಿಂದೆಯೇ ಸಲ್ಲಿಸಿತ್ತು. ಬೆಲೆ ನಿಯಂತ್ರಣ ಕಾನೂನಿನ ಅಡಿ 'ಸ್ಟೆಂಟ್ಸ್‌' ಮತ್ತಿತರ ವಸ್ತು ಕೊಳ್ಳುವಂತೆ ಸಲಹೆ ನೀಡಿತ್ತು. ಅಲ್ಲದೇ ಉಳಿದ ಮೆಡಿಕಲ್‌ ಡಿವೈಸ್‌ಗಳು ಸಹ ಶೇ. 100 ಕ್ಕಿಂತ ಹೆಚ್ಚಿನ ಏರಿಕೆ ಕಂಡಿವೆ ಎಂದು ಹೇಳಿತ್ತು.

English summary
Indian heart patients are forced to pay anything between Rs 60,000 and Rs 1 lakh or more for cardiac drug eluting stents (DES) though the same stents cost Rs 28,000-Rs 48,000 even in rich European countries and the UK. India has no body to ensure that medical device companies do not overcharge patients. The result is loot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X