ಶಂಕಾಸ್ಪದ ಬ್ಯಾಗ್ ಪತ್ತೆ, ಪಠಾಣ್ಕೋಟ್ ನಲ್ಲಿ ಹೈಅಲರ್ಟ್

ಪಠಾಣ್ ಕೋಟ್ (ಪಂಜಾಬ್), ಮೇ 29 : ಸೈನಿಕರ ಸಮವಸ್ತ್ರವಿರುವ ಬ್ಯಾಗ್ ದೊರೆತಿರುವ ಹಿನ್ನೆಲೆಯಲ್ಲಿ ಪಠಾಣ್ ಕೋಟ್ ನಲ್ಲಿ ಸೋಮವಾರ ಹೈ ಅಲರ್ಟ್ ಘೋಷಿಸಲಾಗಿದೆ. ಕಳೆದ ರಾತ್ರಿ ಮಾಮುನ್ ಮಿಲಿಟರಿ ಸ್ಟೇಷನ್ ಬಳಿ ಈ ಬ್ಯಾಗ್ ದೊರೆತಿದೆ.

ಕೂಡಲೆ ಕಾರ್ಯತತ್ಪರರಾಗಿರುವ ಸೈನಿಕರು ಆ ಬ್ಯಾಗ್ ಯಾರಿಗೆ ಸೇರಿದ್ದು, ಅದರಲ್ಲಿ ಮತ್ತೇನಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಂತಹ ಆತಂಕಕಾರಿ ಘಟನೆ ಅಲ್ಲದಿದ್ದರೂ, ಸೈನಿಕರು ಯಾವುದೇ ಚಾನ್ಸ್ ತೆಗೆದುಕೊಳ್ಳಲು ಸಿದ್ಧರಿಲ್ಲ.

Pathankot on high alert after suspicious bag found

ಕಳೆದ ವರ್ಷ ಜನವರಿ 2ರಂದು ಪಠಾಣ್ ಕೋಟ್ ನಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ, ಉಗ್ರರು ಭಾರತದೊಳಗೆ ನುಸುಳಿ ಬಂದು ಭಾರತೀಯರ ಸೈನಿಕರ ಸಮವಸ್ತ್ರ ಧರಿಸಿ ದಾಳಿ ನಡೆಸಿದ್ದರು.

ಇಂಥದೇ ಘಟನೆಗಳು ಕಳೆದೆರಡು ತಿಂಗಳಲ್ಲಿ ಹಲವಾರು ಬಾರಿ ನಡೆದಿವೆ. ಹಿಂದೆಂದಿಗಿಂತಲೂ ಭಾರತದಲ್ಲಿ ನುಸುಳುವಿಕೆ ಹೆಚ್ಚಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಪಾಕಿಸ್ತಾನದಲ್ಲಿ ಬಂದಿರುವ ಈ ಉಗ್ರರು ಸೇನಾ ನೆಲೆಗಳ ಮೇಲೆ ಭಾರೀ ದಾಳಿ ನಡೆಸಬಹುದು ಎಂದೂ ಇಲಾಖೆ ಎಚ್ಚರಿಸಿದೆ.

2016ರ ಜನವರಿ 2ರಂದು ನಡೆದ ಘಟನೆ ಮತ್ತೆ ಮರುಕಳಿಸಬಾರದೆಂದು ಈ ಮುನ್ನೆಚ್ಚರಿಕೆಗಳನ್ನು ಸೇನೆ ತೆಗೆದುಕೊಂಡಿದೆ. ಅಂದು ನಡೆಸಲಾಗಿದ್ದ ಭೀಕರ ದಾಳಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದರು. ಆದರೆ, ಆ ದಾಳಿಯಲ್ಲಿ ಸೇನೆಯ ಏಳು ಸಿಬ್ಬಂದಿಗಳು ಕೂಡ ಹುತಾತ್ಮರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+