ಪಠಾಣ್ ಕೋಟ್ : ಉಗ್ರರು ಕರೆ ಮಾಡಿದ 3 ನಂಬರ್ ಪಾಕ್‌ನದ್ದು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 13 : ಪಠಾಣ್ ಕೋಟ್ ದಾಳಿಯ ಬಗ್ಗೆ ಹೆಚ್ಚಿನ ಸಾಕ್ಷಿಗಳು ಬೇಕು ಎಂದು ಪಾಕಿಸ್ತಾನ ಬೇಡಿಕೆ ಇಟ್ಟಿದೆ. ಆದರೆ, ಎನ್‌ಐಎ ವಾಯುನೆಲೆಗೆ ನುಗ್ಗಿದ ಉಗ್ರರು ಕರೆ ಮಾಡಿದ್ದ 3 ಮೊಬೈಲ್‌ ನಂಬರ್‌ಗಳನ್ನು ಪತ್ತೆ ಹಚ್ಚಿದೆ. ಈ ಎಲ್ಲಾ ನಂಬರ್‌ಗಳು ಪಾಕಿಸ್ತಾನಕ್ಕೆ ಸೇರಿದವು.

ಭಾರತ ಪಠಾಣ್ ಕೋಟ್ ದಾಳಿಯ ಬಗ್ಗೆ ಪಾಕ್‌ಗೆ ಕೆಲವು ಸಾಕ್ಷಿಗಳನ್ನು ನೀಡಿತ್ತು. ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟಿತ್ತು. 5 ಮೊಬೈಲ್ ನಂಬರ್‌ಗಳನ್ನು ನೀಡಲಾಗಿತ್ತು. ಆದರೆ, ಪಾಕ್ ಈ ನಂಬರ್‌ಗಳು ನಮ್ಮ ದೇಶದ್ದಲ್ಲ ಎಂದು ಹೇಳಿತ್ತು. [ಟ್ಯಾಕ್ಸಿ ಚಾಲಕನ ಕೊಂದು ಪಾಕಿಸ್ತಾನಕ್ಕೆ ಕರೆ ಮಾಡಿದ ಉಗ್ರರು]

pathankot

ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ದಾಳಿಯ ಸಂಚನ್ನು ಪಾಕಿಸ್ತಾನದಲ್ಲೇ ರೂಪಿಸಲಾಗಿತ್ತು ಎಂಬುದಕ್ಕೆ ಸಾಕ್ಷಿಗಳನ್ನು ಕಲೆ ಹಾಕಿದೆ. ಭಾರತಕ್ಕೆ ನುಸುಳಿ ಬಂದ ಉಗ್ರರು ಪಾಕಿಸ್ತಾನಕ್ಕೆ ಕರೆ ಮಾಡಿದ್ದರು ಎಂಬ ಮಾಹಿತಿಗಳನ್ನು ಸಂಗ್ರಹಣೆ ಮಾಡಿದೆ. ಪಾಕಿಸ್ತಾನದ 3 ನಂಬರ್‌ಗಳಿಗೆ ಉಗ್ರರು ಕರೆ ಮಾಡಿದ್ದಾರೆ. [ಪಠಾಣ್ ಕೋಟ್ ದಾಳಿ : ಭಾರತವನ್ನು ಲೇವಡಿ ಮಾಡಿದ ಮಸೂದ್]

ನಂಬರ್ ಯಾರಿಗೆ ಸೇರಿದ್ದು? : ಒಬ್ಬ ಉಗ್ರ ದೇರಾ ಇಸ್ಮಾಮಿ ಖಾನ್ ಎಂಬುವವರಿಗೆ ಕರೆ ಮಾಡಿದ್ದಾನೆ. ಖಾನ್ ಜೈಷ್-ಎ-ಮೊಹಮದ್ ಉಗ್ರ ಸಂಘಟನೆಯ ಪ್ರಮುಖ ಕಚೇರಿ ಇರುವ ಬಹಲ್ವಾಪುರ್‌ ನಿವಾಸಿಯಾಗಿದ್ದಾನೆ. ಮತ್ತೊಂದು ಕರೆಯನ್ನು ನುಸ್ರತ್ ಎಂಬ ಮಹಿಳೆಗೆ ಮಾಡಿದ್ದು, ಆಕೆ ಉಗ್ರನ ತಾಯಿ ಎಂದು ಎನ್‌ಐಎ ಶಂಕಿಸಿದೆ.[ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

5 ಸಿಮ್ ಕಾರ್ಡ್‌ಗಳ ಪೈಕಿ ಒಂದು ನಂಬರ್‌ ಪಡೆಯಲು ಅಲ್ ರೆಹಮತ್ ಟ್ರಸ್ಟ್ ಕಚೇರಿಯ ವಿಳಾಸವನ್ನು ನೀಡಲಾಗಿದೆ. ಅಲ್ ರೆಹಮತ್ ಟ್ರಸ್ಟ್ ಜೈಷ್ ಏ ಮೊಹಮದ್ ಉಗ್ರ ಸಂಘಟನೆಗೆ ಹಣಕಾಸಿನ ಬೆಂಬಲವನ್ನು ನೀಡುತ್ತದೆ. ಉಳಿದ 2 ನಂಬರ್‌ಗಳು ಕರಾಚಿ ಮತ್ತು ಲಾಹೋರ್‌ಗೆ ಸೇರಿದವು ಎಂದು ಎನ್‌ಐಎ ಶಂಕಿಸಿದ್ದು, ತನಿಖೆ ಮುಂದುವರೆಸಿದೆ.

ಈ ಎಲ್ಲಾ ನಂಬರ್‌ಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ. ದಾಳಿ ನಡೆದ ತಕ್ಷಣ ಎಲ್ಲಾ ನಂಬರ್‌ಗಳ ಸೇವೆಯನ್ನು ಸ್ಥಗಿತಗೊಳಿಸಿರಬಹುದು ಎಂದು ಶಂಕಿಸಲಾಗಿದೆ. ಉದಾಮ್‌ಪುರದಲ್ಲಿನ ಸೇನಾ ಶಿಬಿರದ ಮೇಲೆ ದಾಳಿ ನಡೆದಾಗಲೂ ಹೀಗೆಯೇ ಆಗಿತ್ತು. ಸೆರೆ ಸಿಕ್ಕ ಉಗ್ರ ಮೊಹಮದ್ ನವೀದ್ ನೀಡಿದ್ದ ನಂಬರ್ ಕೆಲವೇ ಕ್ಷಣಗಳಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as Pakistan sought more evidence on the Pathankot attack, India has managed to identify the phone numbers which were contacted by the terrorists. India has so far managed to identify three of the numbers that the terrorists called prior to launching the Pathankot attack.
Please Wait while comments are loading...