ಪಠಾಣ್ ಕೋಟ್‌ ದಾಳಿ : ಪಾಕ್ ಜೊತೆ ಶಾಂತಿ ಮಾತುಕತೆ ಇಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 11 : 'ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲಾಗುತ್ತದೆ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಹೇಳಿದ್ದಾರೆ.

ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅಜಿತ್ ಡೋವಲ್ ಅವರು, 'ಜನವರಿ 15ರಂದು ನಿಗದಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಸಭೆಯನ್ನು ರದ್ದುಗೊಳಿಸಲಾಗಿದೆ. ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಶಾಂತಿ ಮಾತುಕತೆ ನಡೆಸಲಾಗುತ್ತದೆ' ಎಂದು ತಿಳಿಸಿದ್ದಾರೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

Ajit Doval

'ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಪಾಕ್ ಕ್ರಮ ಕೈಗೊಂಡ ನಂತರ ಶಾಂತಿ ಮಾತುಕತೆಯನ್ನು ಮುಂದುವರೆಸಲಾಗುತ್ತದೆ. ಪಾಕ್ ಕೈಗೊಳ್ಳುವ ಕ್ರಮಗಳು ತೃಪ್ತಿದಾಯಕವಾಗಿರಬೇಕು' ಎಂದು ಡೋವಲ್ ಸ್ಪಷ್ಟಪಡಿಸಿದ್ದಾರೆ. [ವಾಕಿಟಾಕಿ ಮರೆತು ದಾರಿ ತಪ್ಪಿದ ಉಗ್ರರು!]

'ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ಅಚ್ಚರಿಯ ಭೇಟಿ ನೀಡಿದ್ದರು. ಮೋದಿ ಅವರ ಭೇಟಿಯ ಉದ್ದೇಶ ನಾವು ಶಾಂತಿ ಮಾತುಕತೆಯನ್ನು ಬಯಸುತ್ತಿದ್ದೇವೆ ಎಂಬುದಾಗಿತ್ತು. ಆದರೆ, ಜೈಷ್ ಇ ಮೊಹಮ್ಮದ್ ಸಂಘಟನೆ ಪಠಾಣ್ ಕೋಟ್ ಮೇಲೆ ದಾಳಿ ಮಾಡುವ ಮೂಲಕ ಅದನ್ನು ಮುರಿದಿದೆ' ಎಂದು ಡೋವಲ್ ಹೇಳಿದ್ದಾರೆ.[ಚಿತ್ರಗಳು : ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ]

'ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಹಲವು ಸಾಕ್ಷಿಗಳನ್ನು ಕಳುಹಿಸಿಕೊಟ್ಟಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕ್ರಮ ಕೈಗೊಂಡರೆ ಮಾತ್ರ ಶಾಂತಿ ಮಾತುಕತೆ ಮುಂದುವರೆಸುತ್ತೇವೆ' ಎಂದು ಡೋವಲ್ ತಿಳಿಸಿದ್ದಾರೆ. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The foreign secretary level talks between India and Pakistan to be held on January 15th has been cancelled. The National Security Adviser of India, Ajit Doval said in an interview to a newspaper that the talks had been cancelled.
Please Wait while comments are loading...