ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್

|
Google Oneindia Kannada News

ಪಠಾಣ್‌ಕೋಟ್, ಜನವರಿ, 08: ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾರೆ. ಮೈ ಕೈ ಎಲ್ಲಾ ಬ್ಯಾಂಡೇಜ್ ಸುತ್ತಿಕೊಂಡಿದೆ. ಆರು ಗುಂಡುಗಳನ್ನು ಹೊರತೆಗೆದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಚೀತ್ಕರಿಸಬೇಕು ಎನ್ನುವ ನೋವಲ್ಲೂ ಅವರು ವಿಜಯದ ಸಂಕೇತ ತೋರಿಸುತ್ತಿದ್ದಾರೆ.

ಹೌದು.. ಇದು ನಮ್ಮ ಸೈನಿಕರ ಶಕ್ತಿ, ಆತ್ಮ ಸ್ಥೈರ್ಯ.. ಉಗ್ರರ ಆರು ಗುಂಡುಗಳು ಮೈ ಯಲ್ಲಿ ಹೊಕ್ಕಿದ್ದರೂ ಗಟ್ಟಿ ಗುಂಡಿಗೆಯ ಯೋಧ ಮತ್ತೆ ದೇಶಕ್ಕೆ ಹೋರಾಡಲು ಎದ್ದು ನಿಲ್ಲುತ್ತಿದ್ದಾನೆ. ಪಠಾಣ್‌ಕೋಟ್ ದಾಳಿಯಲ್ಲಿ ಗುಂಡೇಟು ತಿಂದ ಶೈಲೇಶ್ ಗೌರ್ ಕಣ್ಣಲ್ಲಿ ಇಂದು ದೇಶಕ್ಕಾಗಿ ಹೋರಾಡಿದ ಪುಳಕ.[ಜನವರಿ 1ರಂದೇ ಇಬ್ಬರು ಉಗ್ರರು ದೇಶದ ಒಳಕ್ಕೆ ನುಗ್ಗಿದ್ದರು]

india

ನಿರಂಜನ್ ಅವರಂಥ ವೀರರನ್ನು ಕಳೆದುಕೊಂಡ ದೇಶ ಒಂದೆಡೆ ಮರುಗುತ್ತಿದ್ದರೆ. ಅಬ್ಬಾ ಶೈಲೇಶ್ ಅಂಥವರ ಜೀವ ಉಳಿಯಿತಲ್ಲಾ ಎಂದು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವುದೊಂದೆ ಉಳಿದಿರುವ ದಾರಿ.

ಉಗ್ರರೊಂದಿಗೆ ಕಾದಾಟಕ್ಕಿಳಿದು ತಮ್ಮ ಕೊನೆ ಉಸಿರಿನವರೆಗೂ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿ ಗುರುಸೇವಕ್ ಸಿಂಗ್ ಹುತಾತ್ಮರಾದರು. ಇತ್ತ ಶೈಲೇಶ್ ದೇಹಕ್ಕೆ 6 ಗುಂಡುಗಳು ತಾಗಿದ್ದವು. ಶೈಲೇಶ್ ಈಗ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.[ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]

india

24 ವರ್ಷದ ಶೈಲೇಶ್ 6 ಬುಲೆಟ್ ಮೈಯಲ್ಲಿ ನುಗ್ಗಿಸಿಕೊಂಡ ಮೇಲೂ ಹೋರಾಟ ಮಾಡುತ್ತಲೇ ಇದ್ದರು. ಫೈಟರ್ ಜೆಟ್ ಇರುವ ಜಾಗಕ್ಕೆ ಉಗ್ರರಿಗೆ ಹೋಗಲು ಬಿಡದೇ, ಕೊನೆಗೆ ರಕ್ತದ ಮಡುವಿನಲ್ಲಿಯೇ ಬಿದ್ದಿದ್ದರು. ಶೈಲೇಶ್ ಬೇಗ ಗುಣಮುಖವಾಗಲಿ ಎಂಬುದೇ ಎಲ್ಲರ ಹಾರೈಕೆ. ಯೋಧರಿಗೊಂದು ಸಲಾಂ.

india
English summary
The Real Hero's. One of the commandos of Garud team that was deployed at the Mechanical Transport Wing when Pakistani terrorists attacked the Pathankot airbase on January 2 kept on fighting even after he was hit by as many as six bullets. Sailesh Gaur was shot by the terrorists six times in his lower abdomen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X