ಪಠಾಣ್ ಕೋಟ್ ದಾಳಿ : ಎಸ್‌ಪಿ ಸಲ್ಪಿಂದರ್ ಸಿಂಗ್ ಸೇವೆಯಿಂದ ನಿವೃತ್ತಿ
ನವದೆಹಲಿ, ಅ.17 : ಪಂಜಾಬ್‌ನ ಗುರುದಾಸ್ ಪುರದ ಎಸ್‌ಪಿ ಸಲ್ವಿಂದರ್ ಸಿಂಗ್ ಅವರನ್ನು ಅವಧಿಗೆ ಮೊದಲೇ ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ಸಲ್ವಿಂದರ್ ಸಿಂಗ್ ವಿಚಾರಣೆ ನಡೆಸಲಾಗಿತ್ತು.
ಪಂಬಾಜ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಲ್ವಿಂದರ್ ಸಿಂಗ್ ಅವರನ್ನು ಅವಧಿಗೆ ಮೊದಲೇ ನಿವೃತ್ತಿಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಶಿಸ್ತು, ಪಂಬಾಜ್ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದ ಆಧಾರದ ಮೇಲೆ ನಿವೃತ್ತಿಗೊಳಿಸಲಾಗಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ನಡೆದಾಗ ಸ್ವಲಿಂದರ್ ಸಿಂಗ್ ಅವರನ್ನು ಉಗ್ರರು ಅಪಹರಿಸಿದ್ದರು. ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅವರ ವಿಚಾರಣೆ ನಡೆಸಿತ್ತು. ಸುಳ್ಳುಪತ್ತೆ ಪರೀಕ್ಷೆ ನಡೆಸಿದ ಬಳಿಕ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಸಲ್ವಿಂದರ್ ಸಿಂಗ್ ವಿರುದ್ಧ ಅಶ್ಲೀಲವಾಗಿ ನಿಂದಿಸಿದ ಆರೋಪದ ಮೇಲೆಯೂ ಬಂಧನದ ವಾರೆಂಟ್ ಜಾರಿಯಾಗಿತ್ತು. ಅವರ ವಿರುದ್ಧ ಎರಡು ಕೇಸುಗಳು ದಾಖಲಾದ ಹಿನ್ನಲೆಯಲ್ಲಿ ಸೇವೆಯಿಂದ ನಿವೃತ್ತಿಗೊಳಿಸಿ ಅಮೃತಸರ ಜೈಲಿಗೆ ಕಳುಹಿಸಲಾಗಿದೆ.
2015ರ ಡಿಸೆಂಬರ್ ನಲ್ಲಿ ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ನಾಲ್ವರು ಉಗ್ರರನ್ನು ಭದ್ರತಾಪಡೆಗಳು ಕೊಂದು ಹಾಕಿದ್ದವು. ಏಳು ಮಂದಿ ಯೋಧರು ಈ ದಾಳಿಯಲ್ಲಿ ಹುತಾತ್ಮರಾಗಿದ್ದರು.












Click it and Unblock the Notifications