ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು

Subscribe to Oneindia Kannada

ಬೆಂಗಳೂರು, ಜನವರಿ , 06: ಪಠಾಣ್ ಕೋಟ್ ನಲ್ಲಿ ದೇಶಕ್ಕೆ ಪ್ರಾಣ ತೆತ್ತ ಸೈನಿಕರ ಕುಟುಂಬದ ನೋವಿಗೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಕರೆ ಮಾಡುತ್ತೇನೆ ಎಂದು ಹೇಳಿದ್ದ ಮನೆ ಮಗ ಬಾರದ ಲೋಕಕ್ಕೆ ತೆರಳಿದ್ದ.

ಕೇರಳದ ಮಣ್ಣಲ್ಲಿ ನಿರಂಜನ್ ಮಣ್ಣಾಗಿ ಹೋಗಿದ್ದಾರೆ. ಆದರೆ ಅವರ ನೆನಪು ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿ. ದೇಶ ವಾಸಿಗಳ ರಕ್ಷಣೆಗೆ ತಮ್ಮ ಎಲ್ಲ ಸುಖ-ಸಂತೋಷಗಳನ್ನು ಸೈನಿಕರು ಧಾರೆ ಎರೆಯುತ್ತಾರೆ. ಕುತಂತ್ರಿಗಳ ವಿರುದ್ಧ ಪ್ರಾಣಕ್ಕೂ ಅಂಜದೇ ಹೋರಾಡುತ್ತಾರೆ.[ಪಠಾಣ್ ಕೋಟ್ ವಾಯು ನೆಲೆ ವಿಶೇಷಗಳೇನು?]

ನಿರಂಜನ್ ಅವರ ಆಪ್ತ ಸ್ನೇಹಿತರೊಬ್ಬರು ನಿರಂಜನ್ ಸಾವಿನ ನಂತರ ಬರೆದ ಬಹಿರಂಗ ಪತ್ರವನ್ನು ಓದಲೇಬೇಕು. ಫೇಸ್ ಬುಕ್ ನಲ್ಲಿ ದೇಶ ಭಕ್ತಿಯ ಫೋಟೋ ಹಾಕಿದ ಮಾತ್ರಕ್ಕೆ ಎಲ್ಲ ಮುಗಿಯುವುದಿಲ್ಲ. ನಾವೆಲ್ಲ ಇಂಥ ಕುತಂತ್ರಿಗಳ ವಿರುದ್ಧ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಅವರು ಹೇಳಲು ಮರೆತಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಪತ್ರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

 ಗಡಿಯಾರ ಹಿಂದಕ್ಕೆ ಹೋಗಲ್ಲ

ಗಡಿಯಾರ ಹಿಂದಕ್ಕೆ ಹೋಗಲ್ಲ

ಗೆಳೆಯ ಗಡಿಯಾರವನ್ನು ಹಿಂದಕ್ಕೆ ಸರಿಸಲು ಸಾಧ್ಯವಿಲ್ಲ. ನನಗೆ ಗೊತ್ತು ನೀನು ಸಿಡಿಎಸ್ ಇ ಪರೀಕ್ಷೆ ಬದಲು ಸಿವಿಲ್ ಸೇವೆಗಳಲ್ಲಿ ಉತ್ತೀರ್ಣನಾಗಿದ್ದೀಯ. ನಿನ್ನ ತಂಗಿಯ ಮೆಲೆ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಬಿಟ್ಟಿದ್ದೀಯ.

ನಿನ್ನ ಹೆಂಡತಿಗೆ ಏನು ಉಡುಗೊರೆ ಕೊಟ್ಟೆ?

ನಿನ್ನ ಹೆಂಡತಿಗೆ ಏನು ಉಡುಗೊರೆ ಕೊಟ್ಟೆ?

ನನಗೆ ಗೊತ್ತು, ನಿನ್ನ ಹೆಂಡತಿಗೆ ನೀನು ಯಾವುದೇ ಅತ್ಯಮೂಲ್ಯ ಉಡುಗೊರೆಯನ್ನು ಇಲ್ಲಿವರೆಗೆ ಕೊಟ್ಟಿಲ್ಲ. ದೇಶಕ್ಕೆ ಹೋರಾಡುವ ನಿನಗೆ ಅಂಥ ಸಂಬಳವೇನು ಇಲ್ಲ ಬಿಡು.

ನೀನು ಸೈನಿಕನೇ ಅಲ್ಲ!

ನೀನು ಸೈನಿಕನೇ ಅಲ್ಲ!

ನೀನು ಸೈನಿನೇ ಅಲ್ಲ, ನೀನೊಬ್ಬ ನಾಯಕ, ಆ ದೇವರೇ ನಿನ್ನನ್ನು ದೇಶ ಕಾಯಲು ಕಳಿಸಿದ್ದಾನೆ ಎನ್ನುವುದನ್ನು ಬಿಟ್ಟು ನಮ್ಮಿಂದ ಬೇರೆ ಏನು ಹೇಳಲು ಸಾಧ್ಯ?

ಸಿಯಾಚಿನ್ ನಿನಗೆ ಸ್ವರ್ಗ

ಸಿಯಾಚಿನ್ ನಿನಗೆ ಸ್ವರ್ಗ

ತಿಂಗಳಿಗೆ 32 ಸಾವಿರ ರು. ತಗೆದುಕೊಳ್ಳುವ ನಿನಗೆ ಮೈ ಕೊರೆಯುವ ಹಿಮಾಲಯ, ಉರಿ ಬಿಸಿಲಿನ ಮರುಭೂಮಿಯೇ ಸ್ವರ್ಗ. 70 ಸಾವಿರ ಸಂಬಳದ ನಮಗೆ ಇಲ್ಲಿ ನಿತ್ಯವೂ ನರಕ!

ಕಾರ್ಪೋರೇಟ್ ಲೋಕ

ಕಾರ್ಪೋರೇಟ್ ಲೋಕ

ಕಾರ್ಪೋರೇಟ್ ಲೋಕದ ಪುಣ್ಯಾತ್ಮ ಗಾಜಿನ ಕಚೇರಿಯಲ್ಲಿ ಕುಳಿತು ನಿನಗಿಂತ ಮೂರು ಪಟ್ಟು ಸಂಬಳ ತೆಗೆದುಕೊಳ್ಳುತ್ತಾನೆ. ಹೊಸ ಮೊಬೈಲ್ ಮಾರುಕಟ್ಟೆಗೆ ಬಂದರೆ ನಿನಗೆಲ್ಲಿ ಗೊತ್ತಾಗಬೇಕು ಹೇಳು?

ನಿನಗೇನು ಹೇಳಲಿ

ನಿನಗೇನು ಹೇಳಲಿ

ಸೈನಿಕ, ನಿಜ ನಾಯಕ, ಹೋರಾಟಗಾರ, ದೇಶದ ಮಗ ಈ ಎಲ್ಲ ಶಬ್ದಗಳನ್ನು ನಿನ್ನ ಉದ್ದೇಶಿಸಿ ಹೇಳಲು ಸಾಧ್ಯವಿಲ್ಲ. ಇವೆಲ್ಲ ನಿನ್ನ ತೂಕಕ್ಕೆ ಸರಿ ಹೊಂದಲ್ಲ ಬಿಡು.

ಶಾಂತಿ ಸಿಗಲಿ

ಶಾಂತಿ ಸಿಗಲಿ

ಸೈನಿಕನೊಬ್ಬನ ಪ್ರತಿ ದಿನದ ಜೀವನವನ್ನು ಕಟ್ಟಿಕೊಡುವ ಪತ್ರ ನಿರಂಜನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಸಾಲುಗಳಿಂದ ಮುಕ್ತಾಯವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A day after Martyr Lt Col Niranjan, who sacrificed his life fighting against terrorists in Pathankot, was laid to rest his close friend has written an open letter to remind the citizens of India about the scarifies made by soldiers towards their nation. The open letter aims at making the people of this country to realise the pain and loss to solider's families and also a slap on the face of those who who tried to malign Lt Col Niranjan' s sacrifice.
Please Wait while comments are loading...