ಪಠಾಣ್ ವಿವಾದ: 'ಕೇಸರಿ ಅಪಮಾನ ಮಾಡುವವರ ಸಿನಿಮಾ ನೋಡಬೇಡಿ'- ಸಾರ್ವಜನಿಕರಿಗೆ ಸಾಧ್ವಿ ಮನವಿ
ಭೋಪಾಲ್
ಡಿಸೆಂಬರ್ 17: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದಲ್ಲಿನ ಬೇಷರಂ ರಂಗ್ ಹಾಡಿನ ಕುರಿತು ನಡೆಯುತ್ತಿರುವ ವಿವಾದ ಸದ್ಯ ಕೊನೆಗೊಳಿಸುವಂತೆ ಕಾಣುತ್ತಿಲ್ಲ. ಭಾರತೀಯ ಜನತಾ ಪಕ್ಷದ ಸಂಸದೆ ಸಾಧ್ವಿ ಪ್ರಜ್ಞಾ ಚಿತ್ರಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು, ಯಾರೇ ಕೇಸರಿ ಅವಮಾನ ಮಾಡಿದರೂ ಬಾಯಿ ಮುರಿದು ಕೈಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. id="toptextpromo"> id='are-slot-1' class='oiad oi-axt oiadv'>ಮಾದ್ಯಮದ
ಮುಂದೆ ಮಾತನಾಡಿದ ಸಾಧ್ವಿ, 'ಜನರಿಗೆ ವಾಕ್ ಸ್ವಾತಂತ್ರ್ಯವಿಲ್ಲ, ಮೋದಿಯವರ ಆಡಳಿತ ಬಂದಾಗಿನಿಂದ, ಹಿಂದೂಗಳು ಸ್ವಲ್ಪವಾದರೂ ಜೀವಂತವಾಗಿದ್ದಾರೆ. ಆದರೆ ಇನ್ನೂ ಅವರಿಗೆ ಪ್ರತೀಕಾರ ತೀರಿಸುವ ಧೈರ್ಯವಿಲ್ಲ. ಆದರೆ ನಾನು ಇದನ್ನು ಖಡಾಖಂಡಿತವಾಗಿ ಹೇಳುತ್ತೇನೆ- ಕೇಸರಿ ಬಣ್ಣವನ್ನು ಅವಮಾನಿಸಿದವನಿಗೆ ಭಾರತೀಯ ಜನತಾ ಪಕ್ಷ ಮತ್ತು ನಮ್ಮ ಜನರು ತಕ್ಕ ಉತ್ತರ ನೀಡಿದ್ದಾರೆ. ಯಾರಾದರೂ ಕೇಸರಿಯನ್ನು ನಿಂದಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡುವ ಬದಲು ಬಾಯಿ ಮುರಿದು ಕೈಗೆ ಕೊಡುವ ಧೈರ್ಯವಿದೆ' ಎಂದಿದ್ದಾರೆ. id='are-slot-2' class='oiad oi-axt oiadv'>
ಬೇಷರಂ ರಂಗ್ ಹಾಡಿನ ವಿರುದ್ಧ ಸಾಧ್ವಿ ಪ್ರಜ್ಞಾ ಕಿಡಿ
ನಾವು ನಮ್ಮ ದೇಶದ ಧ್ವಜದ ಬಣ್ಣವನ್ನು ಅವಮಾನಿಸುವವರ ವಿರುದ್ಧ ಮಾತನಾಡುವ ಧೈರ್ಯವನ್ನು ಉಳಿಸಿಕೊಂಡಿದ್ದೇವೆ. ಏಕೆಂದರೆ ಸನಾತನ ಜೀವಂತವಾಗಿದೆ. ಸನಾತನಿಯು ಜೀವಂತವಾಗಿದೆ. ನಾವು ಯತಿಗಳು ಇದಕ್ಕಾಗಿ ಎಂದಿಗೂ ಹಿಂದೆ ಸರಿಯುವುದಿಲ್ಲ. ಕೇಸರಿ ನಮ್ಮ ದೇಶದ ಹೆಮ್ಮೆ. ನಮ್ಮ ಧ್ವಜವು ಕೇಸರಿ ಬಣ್ಣವನ್ನು ಹೊಂದಿದೆ. ಏಕೆಂದರೆ ಇದು ತ್ಯಾಗದ ಸಂಕೇತವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

'ಕೇಸರಿಯನ್ನು ಅವಮಾನಿಸಿದರೆ ನಾನು ಬಿಡಲಾರೆ'
ನಮ್ಮ ದೇಶ, ನಮ್ಮ ಸನ್ಯಾಸಿಗಳು, ನಮ್ಮ ಕೇಸರಿ, ನಮ್ಮ ಸಂಸ್ಕೃತಿಯನ್ನು ಅವಮಾನಿಸುವ ಪ್ರಯತ್ನ ನಡೆದರೆ ಯಾರನ್ನೂ ಬಿಡುವುದಿಲ್ಲ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ. ನಾನು ಸಾಧ್ಯವಾದಷ್ಟು ಕಾನೂನಿನ ಸಹಾಯವನ್ನು ತೆಗೆದುಕೊಳ್ಳುತ್ತೇನೆ. ನಾನು ಅಂತವರಿಗೆ ಛೀಮಾರಿ ಹಾಕುತ್ತೇನೆ. ಅಂಥವರ ವಿರುದ್ಧ ಹೋರಾಡಲು ನಾನು ತಯಾರಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಗಳು ಹಿಂದಿನಿಂದಲೂ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದಾರೆ. ಹಲವರು ಕೇಸರಿಯನ್ನು ಅವಮಾನಿಸಿದ್ದಾರೆ. ಅದಕ್ಕೆ ನಾನೇ ಜೀವಂತ ಸಾಕ್ಷಿ. ನಮ್ಮ ಮೋದಿಯವರ ಆಡಳಿತದಲ್ಲಿ ಕೇಸರಿ, ನಮ್ಮ ಸಂಸ್ಕೃತಿ, ವೇದಗಳು ಮತ್ತು ಪುರಾಣಗಳಿಗೆ ಎಂದಿಗೂ ಅವಮಾನವಾಗುವುದಿಲ್ಲ.

ಸಾರ್ವಜನಿಕರಿಗೆ ಸಾಧ್ವಿ ಮನವಿ
ಈ ಸಿನಿಮಾ ಮಾಡಿದವರು ಯಾರೇ ಆಗಿರಲಿ, ಈ ನಾಯಕ, ನಾಯಕಿ ಯಾರೇ ಆಗಿರಲಿ, ಕೇಸರಿ ಬಣ್ಣವನ್ನು ನಾಚಿಕೆಯಿಲ್ಲದ ರೀತಿಯಲ್ಲಿ ಬಳಸಿದರೆ ನಾನು ಸಹಿದುವುದಿಲ್ಲ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ. ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಅವರ ಹೊಟ್ಟೆಗೆ ಒದೆಯಬೇಡಿ, ಅವರ ವ್ಯವಹಾರಗಳನ್ನು ನಾಶಪಡಿಸಬೇಡಿ. ಆದರೆ ಅಂಥವರ ಯಾವುದೇ ಚಲನಚಿತ್ರವನ್ನು ಎಂದಿಗೂ ನೋಡಬೇಡಿ.

'ಹಿಂದೂ ರಕ್ತ ಇದ್ದರೆ ಸಿನಿಮಾ ನೋಡಬೇಡಿ'
ಏಕೆಂದರೆ ಅಂತಹ ಜನರು ಚಲನಚಿತ್ರಗಳನ್ನು ನಿರ್ಮಿಸಿ ಇಲ್ಲಿ ಬೆಳೆಯುತ್ತಾರೆ, ಇಲ್ಲಿ ತಿನ್ನುತ್ತಾರೆ, ಇಲ್ಲಿ ಮಲಗುತ್ತಾರೆ ಮತ್ತು ನಮ್ಮನ್ನು ಅವಮಾನಿಸುತ್ತಾರೆ. ಅವರು ಸನಾತನ ಸಂಸ್ಥೆಯನ್ನು ಅವಮಾನಿಸುತ್ತಲೇ ಬಂದಿದ್ದಾರೆ. ಈಗ ಈ ಜನರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಈ ಜನರನ್ನು ಬಿಡುವುದಿಲ್ಲ. ಅವರ ಯಾವುದೇ ಚಲನಚಿತ್ರಗಳನ್ನು ನೋಡುವುದಿಲ್ಲ ಪ್ರತಿಜ್ಞೆ ಮಾಡಿ. ಅಂಥವರ ಚಿತ್ರಗಳನ್ನು ನೊಡಬೇಡಿ ಎಂದು ನಾನು ಹಿಂದೂಗಳಲ್ಲಿ ನಾನು ಮನವಿ ಮಾಡುತ್ತೇನೆ. ನಿಮ್ಮಲ್ಲಿ ನಿಜವಾದ ಹಿಂದೂ ರಕ್ತ ಇದ್ದರೆ ನೀವು ಅವರ ಚಿತ್ರವನ್ನು ನೋಡುವುದಿಲ್ಲ ಎಂದು ಸಾಧ್ವಿ ಹೇಳಿದ್ದಾರೆ.
ಬಹುನಿರೀಕ್ಷಿತ ಪಠಾಣ್ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕಾಣಿಸಿಕೊಂಡಿರುವುದು ಒಂದು ವರ್ಗದ ಆಕ್ರೋಶಕ್ಕೆ ಗುರಿಯಾಗಿದ್ದು, ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.












Click it and Unblock the Notifications