ಮೋದಿ ಫೋಟೋ ಹಾಕಿ ಟ್ವಿಟ್ಟಿಗರಿಂದ ಸರಿಯಾಗಿ ಕಾಲೆಳೆಸಿಕೊಂಡ ಕಾಂಗ್ರೆಸ್

Posted By:
Subscribe to Oneindia Kannada
   ಟ್ವಿಟ್ಟರ್ ನಲ್ಲಿ ಮೋದಿ ಫೋಟೋ ಹಾಕಿ ನಗೆಪಾಟಲಿಗೀಡಾದ ಕಾಂಗ್ರೆಸ್ | Oneindia Kannada

   ಟ್ವಿಟ್ಟರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ಮುಖಂಡರ ಫೋಟೋ ಹಾಕಿ, ಬಿಜೆಪಿಯ ಕಾಲೆಳೆಯಲು ಹೋದ ಕಾಂಗ್ರೆಸ್ ಅನ್ನು ಟ್ವಿಟ್ಟಿಗರು ಸರಿಯಾಗಿ ಲೇವಡಿ ಮಾಡುತ್ತಿದ್ದಾರೆ.

   ಮೋದಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ರಾಜನಾಥ್ ಸಿಂಗ್ ಅವರ ಮುಂದೆ ರಾಹುಲ್ ಗತ್ತಿನಿಂದ ಹಾದು ಹೋಗುತ್ತಿರುವ ಮತ್ತು ರಾಹುಲ್ ಜೊತೆ ಅಡ್ವಾಣಿ ಭಾವೋದ್ವೇಗಕ್ಕೆ ಒಳಗಾಗಿ ಕುಳಿತಿರುವಂತಹ ಭಂಗಿಯ ಫೋಟೋ ಹಾಕಿ, ' The Past and future' ಎಂದು ಅದಕ್ಕೆ ಟೈಟಲ್ ನೀಡಿ @IncIndia ಅಕೌಂಟಿನಿಂದ ಟ್ವೀಟ್ ಮಾಡಲಾಗಿತ್ತು.

   ಟ್ವಿಟ್ಟಿಗರಿಗೆ ಕಾಂಗ್ರೆಸ್ಸಿನ ಈ ಟ್ವೀಟ್ ಹಾಸ್ಯದ ವಸ್ತುವಂತಾಗಿ ವಿಧವಿಧವಾಗಿ ಅಣಕವಾಡಲು ಆರಂಭಿಸಿದ್ದಾರೆ. ಕಾಂಗ್ರೆಸ್ಸಿನ ಈ ಟ್ವೀಟಿಗೆ 411ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದು, 970ಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ.

   ರಾಹುಲ್ ಪಟ್ಟಾಭಿಷೇಕಕ್ಕೆ ವಿಘ್ನತಂದೊಡ್ಡಿತೇ ಸರ್ವೇ

   ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣ, ರಾಹುಲ್ ಗಾಂಧಿ ಮನೆಯ ನಾಯಿ, ಇಂದಿರಾ ಗಾಂಧಿ ಹತ್ಯೆಯ ನಂತರದ ಸಿಖ್ ಹತ್ಯಾಕಾಂಡ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಟ್ವಿಟ್ಟಿಗರು ಕಾಂಗ್ರೆಸ್ ಅನ್ನು ಅಣಕವಾಡುತ್ತಿರುವುದರ ಜೊತೆಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

   ಕೆಲವು ದಿನಗಳ ಹಿಂದೆ, ಇತ್ತೀಚೆಗೆ ನನ್ನ ಎಲ್ಲಾ ಟ್ವೀಟ್ ಅನ್ನು ನೋಡಿಕೊಳ್ಳುತ್ತಿರುವುದು ನನ್ನ ನಾಯಿ 'ಪಿಡಿ' ಎಂದು ಟ್ವೀಟ್ ಮಾಡಿ ರಾಹುಲ್ ಗಾಂಧಿ ಟ್ವಿಟ್ಟಿಗರ ನಗೆಪಟಾಲಿಗೆ ಗುರಿಯಾಗಿದ್ದರು. ಕಾಂಗ್ರೆಸ್ಸಿನ ' The Past and future' ಟ್ವೀಟಿಗೆ ಬಂದಂತಹ ಕೆಲವೊಂದು ಹಾಸ್ಯಾಸ್ಪದ ಟ್ವೀಟುಗಳು ಮುಂದಿದೆ..

   ದಿ ಪಾಸ್ಟ್ ಎಂಡ್ ಫ್ಯೂಚರ್ ಎನ್ನುವ ಕಾಂಗ್ರೆಸ್ಸಿನ ಟ್ವೀಟ್

   ದಿ ಪಾಸ್ಟ್ ಎಂಡ್ ಫ್ಯೂಚರ್ ಎನ್ನುವ ಕಾಂಗ್ರೆಸ್ಸಿನ ಟ್ವೀಟ್

   ಮೋದಿ, ರಾಜನಾಥ್ ಸಿಂಗ್, ಸುಮಿತ್ರಾ ಮಹಾಜನ್, ಎಲ್ ಕೆ ಅಡ್ವಾಣಿಯವರ ಫೋಟೋ ಜೊತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಫೋಟೋ ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಅದರಲ್ಲಿ ರಾಹುಲ್ ಗರ್ವದಿಂದ ನಡೆದುಕೊಂಡು ಬರುತ್ತಿರುವಾಗ ಮೋದಿ, ರಾಜನಾಥ್, ಸುಮಿತ್ರಾ ಮಹಾಜನ್ ಅಸಾಹಯಕತೆಯಿಂದ ನಿಂತಿರುವುದು, ಇನ್ನೊಂದು ರಾಹುಲ್ ಜೊತೆ ಅಡ್ವಾಣಿಯಿರುವ ಫೋಟೋ ಕೂಡಾ ಹಾಕಿ ಟ್ವೀಟ್ ಮಾಡಿತ್ತು.

   ಕಪಿಲ್ ಶರ್ಮಾಗೆ ರಾಹುಲ್ ಗಾಂಧಿ ಒಳ್ಳೆ ಬದಲಿ ಆಯ್ಕೆ

   ಕಪಿಲ್ ಶರ್ಮಾಗೆ ರಾಹುಲ್ ಗಾಂಧಿ ಒಳ್ಳೆ ಬದಲಿ ಆಯ್ಕೆ

   ಕಪಿಲ್ ಶರ್ಮಾಗೆ ರಾಹುಲ್ ಗಾಂಧಿ ಒಳ್ಳೆ ಬದಲಿ ಆಯ್ಕೆ, ರಾಹುಲ್ ಗಾಂಧಿಯಿಂದಲೇ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಜಯಭೇರಿ ಬಾರಿಸುತ್ತಿರುವುದು ಎನ್ನುವ ಟ್ವೀಟ್. ಜೊತೆಗೆ, ದೆಹಲಿ ಸಿಎಂ ಕೇಜ್ರಿವಾಲ್ ಬಾಯಾಕಳಿಸುತ್ತಿರುವ ಇಮೇಜ್.

   ರಾಹುಲ್ - ಗತಕಾಲ ಎನ್ನುವ ಒಕ್ಕಣೆ

   ರಾಹುಲ್ - ಗತಕಾಲ ಎನ್ನುವ ಒಕ್ಕಣೆ

   ಕಾಂಗ್ರೆಸ್ ಟ್ವೀಟ್ ನಲ್ಲಿ ಬಳಸಿಕೊಂಡಿರುವ ಫೋಟೋದ ಮೇಲೆ ಮೋದಿ - ಭವಿಷ್ಯ, ರಾಹುಲ್ - ಗತಕಾಲ ಎನ್ನುವ ಒಕ್ಕಣೆ, ಗತಕಾಲ ಎನ್ನುವುದಕ್ಕೆ ಮೊದಲು ರಾಹುಲ್ ಗಾಂಧಿ ಅಸ್ತಿತ್ವದಲ್ಲಿದ್ದರೆ ತಾನೇ ಎನ್ನುವ ಟ್ವೀಟ್.

   ಕಾಂಗ್ರೆಸ್ ನಲ್ಲಿ ಏನಿದ್ದರೂ ವಂಶಪಾರಂಪರ್ಯ ರಾಜಕಾರಣ

   ಕಾಂಗ್ರೆಸ್ ನಲ್ಲಿ ಏನಿದ್ದರೂ ವಂಶಪಾರಂಪರ್ಯ ರಾಜಕಾರಣ

   ಬಂಗಾರು ಲಕ್ಷಣ್ ಅವರಿಂದ ಹಿಡಿದು ಈಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರು, ಜೊತೆಗೆ ಏಳು ಬಿಜೆಪಿ ಅಧ್ಯಕ್ಷರು ಬದಲಾದರೂ ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಇರುವ ಟ್ವೀಟ್, ಜೊತೆಗೆ ಮೋದಿ ನಮ್ಮ ಹೆಮ್ಮೆ ಎನ್ನುವ ಮತ್ತೊಂದು ಟ್ವೀಟ್.

   ಅಡ್ವಾಣಿಯವರಿಂದ ರಾಹುಲ್ ಟಿಪ್ಸ್

   ಅಡ್ವಾಣಿಯವರಿಂದ ರಾಹುಲ್ ಟಿಪ್ಸ್

   ಪ್ರಧಾನಮಂತ್ರಿ ಆಗುವುದು ಹೇಗೆ ಎಂದು ಅಡ್ವಾಣಿಯವರಿಂದ ರಾಹುಲ್ ಟಿಪ್ಸ್ ತೆಗೆದುಕೊಳ್ಳುತ್ತಿರಬಹುದು. ಕಾಂಗ್ರೆಸ್ಸಿನವರೂ ಒಳ್ಳೊಳ್ಳೆ ಜೋಕ್ಸ್ ಮಾಡ್ತಾರೆ ಎನ್ನುವ ಟ್ವೀಟ್. ನೆಹರೂ ಅವರಿಗೆ ಮುತ್ತು ಕೊಡುವ ಇಮೇಜ್ ಹಾಕಿ, ಸ್ವಾತಂತ್ರ್ಯ ಪಡೆಯಲು ಯತ್ನಿಸುತ್ತಿರುವ ನೆಹರೂ.

   ಮೋದಿಯವರು ರಾಹುಲ್ ಜೊತೆ ಮಾತನಾಡದೇ ಇದ್ದದ್ದು ಒಳ್ಳೆದಾಯಿತು

   ಮೋದಿಯವರು ರಾಹುಲ್ ಜೊತೆ ಮಾತನಾಡದೇ ಇದ್ದದ್ದು ಒಳ್ಳೆದಾಯಿತು

   ಮೋದಿಯವರು ರಾಹುಲ್ ಜೊತೆ ಮಾತನಾಡದೇ ಇದ್ದದ್ದು ಒಳ್ಳೆದಾಯಿತು, ಮಾತಾಡಿದ್ದರೆ ತಮ್ಮ ವಿಷನ್ ಅನ್ನೇ ಕಳೆದುಕೊಳ್ಳುತ್ತಿದ್ದರು. ಡೋರೇಮನ್ ನೋಡುವುದನ್ನು ಮೊದಲು ಬಿಡಿ ಎಂದು ರಾಹುಲ್ ಗಾಂಧಿಯವರನ್ನು ಅಣಕವಾಡುವ ಟ್ವೀಟ್.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Past and future tweet by @IncIndia (official twitter handle of Congress) on Prime Minister Narendra Modi and BJP leaders becomes mockery subject for twitterites.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ