ನೆಹರೂ ಸ್ವಂತ ಲಾಭಕ್ಕಾಗಿ ದೇಶ ಇಬ್ಭಾಗವಾಯ್ತೆಂದ ದಲೈಲಾಮ
Recommended Video

ಪಣಜಿ, ಆಗಸ್ಟ್ 8: ಮಹಾತ್ಮ ಗಾಂಧಿ ಅವರಿಗೆ ಮಹ್ಮದ್ ಅಲಿ ಜಿನ್ನಾರನ್ನು ದೇಶದ ಪ್ರಧಾನಿ ಮಾಡುವ ಇಚ್ಛೆಯಿತ್ತು. ಆದರೆ ತನ್ನ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದ ಜವಾಹರ್ ಲಾಲ್ ನೆಹರೂ ಅದಕ್ಕೆ ಅವಕಾಶ ಕೊಡಲಿಲ್ಲ. ಒಂದು ವೇಳೆ ಗಾಂಧೀಜಿ ಆಶಯದಂತೆ ಮಹ್ಮದ್ ಅಲಿ ಜಿನ್ನಾ ಪ್ರಧಾನಿಯಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ.
-ಈ ಮಾತನ್ನು ಟಿಬೆಟನ್ ಧರ್ಮಗುರು ದಲೈಲಾಮ ಬುಧವಾರ ಗೋವಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಹೇಳಿದ್ದಾರೆ. ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಫ್ಯೂಡಲ್ ವ್ಯವಸ್ಥೆಗಿಂತ ಪ್ರಜಾಪ್ರಭುತ್ವ ಉತ್ತಮವಾದದ್ದು. ಫ್ಯೂಡಲ್ ವ್ಯವಸ್ಥೆಯಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಕೆಲವೇ ಜನರ ಬಳಿ ಉಳಿಯುತ್ತದೆ ಎಂದಿದ್ದಾರೆ.
ಈಗ ಭಾರತ ನೋಡಿ. ನನಗೆ ಅನಿಸುತ್ತದೆ ಜಿನ್ನಾ ಅವರನ್ನು ಪ್ರಧಾನಿ ಮಾಡುವ ಮನಸ್ಸು ಹೊಂದಿದ್ದರು. ಆದರೆ ನೆಹರೂ ನಿರಾಕರಿಸಿದರು. ನೆಹರೂ ಅವರಿಗೆ ತಾವೇ ಪ್ರಧಾನಿ ಆಗಬೇಕು ಎಂದಿತ್ತು. ಗಾಂಧೀಜಿ ಯೋಚನೆ ಸಾಕಾರ ಆಗಿಬಿಟ್ಟಿದ್ದರೆ ಭಾರತ ಹಾಗೂ ಪಾಕಿಸ್ತಾನ ಇಂದು ಒಂದಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಆದ್ದರಿಂದ ಪಂಡಿತ್ ನೆಹರೂ ಬಹಳ ಅನುಭವಸ್ಥ ವ್ಯಕ್ತಿ. ಬಹಳ ಬುದ್ಧಿವಂತರು. ಆದರೆ ಕೆಲವು ಸಲ ತಪ್ಪುಗಳಾಗುತ್ತವೆ ಎಂದು ಸೇರಿಸಿದ್ದಾರೆ.












Click it and Unblock the Notifications