ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಅಧಿವೇಶನ ದಿನ 3: ನಕಲಿ ಸುದ್ದಿ, ಕಲ್ಲಿದ್ದಲು ಕೊರತೆ ಕುರಿತು ಪ್ರಶ್ನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 01: ರಾಜ್ಯಸಭೆಯ 12 ಸಂಸದರ ಅಮಾನತು ಹಿಂಪಡೆಯುವ ಒತ್ತಾಯವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿರುವ ಘಟನೆ ಸಂಸತ್‌ನಲ್ಲಿ ಮಂಗಳವಾರ ನಡೆಯಿತು.

12 ರಾಜ್ಯಸಭಾ ಸಂಸದರ ಅಮಾನತಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದು ನಾಯ್ಡು ಹೇಳಿದ್ದಾರೆ. ಇಂದು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತು ಹಾಗೂ ನಕಲಿ ಸುದ್ದಿಗಳನ್ನು ತಡೆಯುವ ಕುರಿತು ಪ್ರಶ್ನೋತ್ತರ ನಡೆಯಲಿದೆ.

ಲೋಕಸಭೆಯಲ್ಲಿ ಇಂದು: ಅಮೇಜಾನ್, ನೆಟ್‌ಫ್ಲಿಕ್ಸ್‌ ಇತ್ಯಾದಿ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತು ಮೇಲ್ವಿಚಾರಣೆ ಕುರಿತು ಚರ್ಚೆ ನಡೆಯಲಿದೆ.

Parliament Winter Session Day 3: Questions On Curbing Fake News And Coal Shortage

ಕಲ್ಲಿದ್ದಲು ಕೊರತೆ ಬಗ್ಗೆ, ದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಎದುರಿಸುತ್ತಿರುವ ಕಲ್ಲಿದ್ದಲು ಕೊರತೆ ಬಗ್ಗೆ ಗಮನ ಸೆಳೆಯಲಾಗಿದೆಯೇ ಎಂದು ಕೇಳಲಾಗುತ್ತದೆ.

ಇನ್ನು ನಕಲಿ ಸುದ್ದಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳು, ಚಾನೆಲ್‌ಗಳು ಹಾಗೂ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ಗುರುತಿಸಲು ಹಾಗೂ ತಡೆಯಲು ಸರ್ಕಾರವು ಯಾವುದಾದರೂ ಕಾರ್ಯ ವಿಧಾನ ಹೊಂದಿದೆಯೇ ಎಂದು ಪ್ರಶ್ನಿಸಲಾಗುತ್ತದೆ.

ಜಾರಿಯಲ್ಲಿರುವ ಯಾವುದೇ ಕಾರ್ಯವಿಧಾನದ ವಿವರಗಳನ್ನು ಕೇಳಲಾಗುತ್ತದೆ. ರಾಜ್ಯಸಭೆಯಲ್ಲಿ ಇಂದು: ಸಂಸತ್ತಿನ ಮೇಲ್ಮನೆಯಲ್ಲಿ ಇಂದು ಸರಣಿ ವರದಿಗಳನ್ನು ಮಂಡಿಸಲಾಗುತ್ತದೆ. ಅವುಗಳಲ್ಲಿ ಟೆಲಿಕಾಂ ಸೇವೆಗಳು, ಇಂಟರ್‌ನೆಟ್‌ನ ಅಮಾನತು ಮತ್ತು ಅದರ ಪ್ರಭಾವ ಕುರಿತ 26ನೇ ವರದಿಗೆ ಸಂಬಂಧಿಸಿದಂತೆ ಇರುತ್ತದೆ.

ಅಣೆಕಟ್ಟುಗಳಿಗೆ ಸಂಬಂಧಿಸಿದ ವಿಪತ್ತುಗಳನ್ನು ತಡೆಯಲು ಮತ್ತು ಅವುಗಳ ಸುರಕ್ಷಿತ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸಲು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಅನುಮೋದನೆ ನೀಡಲು ಸರ್ಕಾರವು ಸಣೆಕಟ್ಟಿನ ಕಣ್ಗಾವಲು, ತಪಾಸಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಮಸೂದೆಯನ್ನು ಮಂಡಿಸಲಿದೆ.

ಸಂಸತ್‌ನ ಚಳಿಗಾಲದ ಅಧಿವೇಶನದ ಲೋಕಸಭೆ ಕಲಾಪದಲ್ಲಿ ಡಿ.1 ರಂದು ಹೊಸ ಕೋವಿಡ್-19 ರೂಪಾಂತರಿ ವೈರಾಣು ಒಮಿಕ್ರೋನ್ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ರೂಲ್ 193 ಅಡಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಚಳಿಗಾಲದ ಅಧಿವೇಶನಕ್ಕೆ ಕಾರ್ಯತಂತ್ರ ರೂಪಿಸುವುದಕ್ಕಾಗಿ ಹಿರಿಯ ಸಚಿವರೊಂದಿಗೆ ಚರ್ಚಿಸಿದ್ದರು.

ಕೋವಿಡ್-19 ಹೊಸ ತಳಿ ಪತ್ತೆಯಾಗಿದ್ದು ಅದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನ.27 ರಂದು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು.

Recommended Video

ಈ ವೈರಸ್ ಅಂದ್ರೆ ಸಾಮಾನ್ಯ ಅಲ್ಲ!! | Oneindia Kannada

English summary
The Parliament was stalled on Tuesday as Rajya Sabha Chairman and Vice President of India refused to stall the suspension of 12 MPs who had created a ruckus in the last session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X