ಸಂಸದ ಪ್ರತಾಪ್ ಸಿಂಹ ವಿರುದ್ಧ ಭುಗಿಲೆದ್ದ ಆಕ್ರೋಶ, ಎಲ್ಲೆಲ್ಲೂ ಹೋರಾಟ!

ಪಾರ್ಲಿಮೆಂಟ್ ಒಳಗಡೆ ಇಂದು ನಡೆದ ಘಟನೆ ಆಕ್ರೋಶದ ಕಿಚ್ಚು ಹೊತ್ತಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ 8ನೇ ದಿನ ಭದ್ರತೆಯ ಉಲ್ಲಂಘನೆ ಆಗಿದೆ. ಯುವಕರು ಲೋಕಸಭೆ ಸಂದರ್ಶಕರ ಗ್ಯಾಲರಿಯಿಂದ ಕೆಳಗೆ ಜಿಗಿದು ಸಂಸತ್ತಿನ ಭದ್ರತಾ ನಿಯಮ ಛಿದ್ರಗೊಳಿಸಿರುವುದು, ಎಲ್ಲೆಲ್ಲೂ ಆಕ್ರೋಶ ಮೊಳಗುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ಕರ್ನಾಟಕದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೂಡ ಆಕ್ರೋಶ ಮೊಳಗಿದೆ.

ಹೌದು, ಆರೋಪಿಗಳು ಕರ್ನಾಟಕ ಸಂಸದರಾದ ಪ್ರತಾಪ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಿ ವಿಸಿಟರ್ ಪಾಸ್‌ ಪಡೆದು ಸಂಸತ್ತಿಗೆ ಪ್ರವೇಶಿಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಹೀಗೆ ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳು ಈಗ ಬಿಜೆಪಿ ವಿರುದ್ದವೂ ಹೋರಾಟ ಆರಂಭಿಸಿವೆ. ಇದರ ಜೊತೆ, ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಪ್ರತಿಭಟನೆಯ ಬಿರುಗಾಳಿ ಸೃಷ್ಟಿಯಾಗಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಅವರ ಹೆಸರು ಟ್ರೆಂಡ್ ಆಗುತ್ತಿದೆ.

Parliament Incident Created Storm Against BJP MP Pratap Simha

ಎಲ್ಲೆಲ್ಲೂ ಸಿಂಹ.. ಸಿಂಹ..!

ಅಂದಹಾಗೆ ಸೋಷಿಯಲ್ ಮೀಡಿಯಾದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶದ ಬಿರುಗಾಳಿ ಎದ್ದಿದೆ. ಹೀಗೆ ಅಪರಿಚಿತರು ಸಂಸತ್ ಭವನದ ಒಳಗೆ ನುಗ್ಗಲು ಪ್ರತಾಪ್ ಸಿಂಹ ಅವರೇ ಪ್ರಮುಖ ಕಾರಣ ಅಂತಾ ಆರೋಪ ಮಾಡಲಾಗುತ್ತಿದೆ. ಈ ಮೂಲಕ ಮಾಜಿ ಪತ್ರಕರ್ತ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಕೆಲವರು ಸಂಸದ ಪ್ರತಾಪ್ ಸಿಂಹ ವಿರುದ್ಧ, ಇಂದಿನ ಘಟನೆ ಆಧಾರದಲ್ಲಿ ಆರೋಪ ಮಾಡುತ್ತಿದ್ದರೆ ಇದೇ ವೇಳೆ ಇನ್ನೂ ಕೆಲವರು ಪ್ರತಾಪ್ ಸಿಂಹ ಪರ ನಿಂತಿದ್ದಾರೆ.

ಎಲ್ಲೆಲ್ಲೂ ಭಯದ ವಾತಾವರಣ

ಪ್ರಜಾಪ್ರಭುತ್ವದ ತವರು ಭಾರತ ದೇಶದ ಹೃದಯ ಅಂತಾನೆ ಕರೆಯುವ ಸಂಸತ್ ಭವನದ ಒಳಗೆ ಇಂತಹ ಘಟನೆ ನಡೆದಿರುವುದು ಸಹಜವಾಗಿ ಆತಂಕ ಸೃಷ್ಟಿ ಮಾಡಿದೆ. ಇದರ ಜತೆಗೆ ಪ್ರತಿಭಟನೆಗಳು ಕೂಡ ಆರಂಭವಾಗಿವೆ. ಇನ್ನು ಸಮಗ್ರ ತನಿಖೆ ನಡೆಯಲಿ ಎಂಬ ಮಾತನ್ನ ಕೂಡ ಹೇಳುತ್ತಿದ್ದಾರೆ ಸೋಷಿಯಲ್ ಮೀಡಿಯಾ ಬಳಕೆದಾರರು. ಇಷ್ಟೆಲ್ಲದರ ನಡುವೆ ಈ ಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ದೊಡ್ಡ ಸದ್ದು ಮಾಡುತ್ತಿದೆ. ಹಾಗೇ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ವಿಚಾರವಾಗಿ ಚರ್ಚೆ ಆರಂಭಿಸಿವೆ.

Parliament Incident Created Storm Against BJP MP Pratap Simha

ಒಟ್ನಲ್ಲಿ ಇಂದು ಸಂಸತ್ ಭವನದಲ್ಲಿ ನಡೆದ ಘಟನೆ ಖಂಡನೀಯ. ಅಲ್ಲದೆ ಭಾರತ ದೇಶದ ಹೃದಯ ಎಂದೇ ಕರೆಯಲಾಗುವ ಸಂಸತ್ ಭವನದ ಒಳಗೆ ಅಪರಿಚಿತ ವ್ಯಕ್ತಿಗಳು ನಡೆಸಿದ ಕೃತ್ಯ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿದೆ. ಹಾಗೇ ಅವರ ವಿರುದ್ಧ ಕಠಿಣ ಕ್ರಮಕ್ಕಾಗಿ, ರಣಕಹಳೆ ಮೊಳಗಿದೆ. ಹೀಗಾಗಿ ಈ ವಿಚಾರ ದೇಶಾದ್ಯಂತ ರಾಜಕೀಯದ ಕಿಡಿ ಹೊತ್ತಿಸುವ ಮುನ್ಸೂಚನೆ ಕೂಡ ಗೋಚರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+