• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜಕ್ಕೆ ಅವಮಾನ ದುರದೃಷ್ಟಕರ: ರಾಷ್ಟ್ರಪತಿ ಕೋವಿಂದ್

|
Google Oneindia Kannada News

ನವದೆಹಲಿ, ಜನವರಿ 29: ಸಂಸತ್ತಿನ ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಶುಕ್ರವಾರ ಭಾಷಣ ಮಾಡಿದರು. ಕಳೆದ ವರ್ಷ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ನೆನೆದ ಕೋವಿಂದ್, ಭಾರತ ನಡೆಸುತ್ತಿರುವ ಬೃಹತ್ ಲಸಿಕೆ ಕಾರ್ಯಕ್ರಮವನ್ನು ಶ್ಲಾಘಿಸಿದರು.

'ಜಗತ್ತಿನಲ್ಲಿಯೇ ಅತಿ ದೊಡ್ಡ ಲಸಿಕೆ ಕಾರ್ಯಕ್ರಮವನ್ನು ಭಾರತ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮದಲ್ಲಿನ ಎರಡೂ ಲಸಿಕೆಗಳು ಭಾರತದಲ್ಲಿಯೇ ತಯಾರಾಗಿವೆ. ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮನುಕುಲದೆಡೆಗಿನ ತನ್ನ ಹೊಣೆಗಾರಿಕೆಗೆ ಭಾರತ ಹೆಗಲು ನೀಡಿದೆ ಮತ್ತು ಅನೇಕ ದೇಶಗಳಿಗೆ ಲಕ್ಷಾಂತರ ಡೋಸ್‌ಗಳಷ್ಟು ಲಸಿಕೆಯನ್ನು ಒದಗಿಸಿದೆ' ಎಂದರು.

ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?

'ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ನಾವು ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿದ್ದೇವೆ. ನಾವೀಗ ಹನಿ ನೀರಾವರಿ ಕಡೆಗೆ ಗಮನ ಹರಿಸುತ್ತಿದ್ದೇವೆ. ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳಿಂದ ರೈತರಿಗೆ ಲಾಭವಾಗುತ್ತಿರುವುದು ನಮಗೆ ಸಂತಸ ತಂದಿದೆ. ದೇಶವು ದಾಖಲೆ ಪ್ರಮಾಣದಲ್ಲಿ ಬೆಳೆ, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯನ್ನು ಕಂಡಿದೆ. ಸಣ್ಣ ರೈತರಿಗಾಗಿ ಸರ್ಕಾರ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದೆ' ಎಂದು ಹೇಳಿದರು. ಮುಂದೆ ಓದಿ.

ಅವಮಾನ ದುರದೃಷ್ಟಕರ

ಅವಮಾನ ದುರದೃಷ್ಟಕರ

'ಗಣರಾಜ್ಯೋತ್ಸವ ದಿನದಂದು ನಮ್ಮ ತ್ರಿವರ್ಣ ಧ್ವಜವನ್ನು ಅವಮಾನಿಸಿರುವುದು ಬಹಳ ದುರದೃಷ್ಟಕರ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಅದೇ ಸಂವಿಧಾನ ನಮಗೆ ಅಷ್ಟೇ ಸಮನಾಗಿ ಗಂಭೀರ ರೀತಿಯಲ್ಲಿ ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದನ್ನು ಕೂಡ ಕಲಿಸಿಕೊಟ್ಟಿದೆ' ಎಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಹೊಸ ಹಕ್ಕುಗಳು

ರೈತರಿಗೆ ಹೊಸ ಹಕ್ಕುಗಳು

'ನನ್ನ ಸರ್ಕಾರವು ಮೂರು ಹೊಸ ಕೃಷಿ ಕಾಯ್ದೆಗಳನ್ನು ರೂಪಿಸುವ ಮುನ್ನ, ಹಳೆಯ ವ್ಯವಸ್ಥೆಯಲ್ಲಿನ ಹಕ್ಕುಗಳು ಮತ್ತು ಸೌಲಭ್ಯಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಕೃಷಿ ಸುಧಾರಣೆಗಳ ಮೂಲಕ ಸರ್ಕಾರವು ರೈತರಿಗೆ ಹೊಸ ಹಕ್ಕುಗಳನ್ನು ಕೂಡ ಒದಗಿಸಿದೆ' ಎಂದು ತಿಳಿಸಿದರು.

ಹೊಸ ದಶಕದಲ್ಲಿ ಭಾರತದ ಉಜ್ವಲ ಭವಿಷ್ಯದ ಆರಂಭ: ನರೇಂದ್ರ ಮೋದಿಹೊಸ ದಶಕದಲ್ಲಿ ಭಾರತದ ಉಜ್ವಲ ಭವಿಷ್ಯದ ಆರಂಭ: ನರೇಂದ್ರ ಮೋದಿ

ಕೃಷಿ ಕಾಯ್ದೆ ಬಗ್ಗೆ ಸಮಗ್ರ ಚರ್ಚೆಯಾಗಿತ್ತು

ಕೃಷಿ ಕಾಯ್ದೆ ಬಗ್ಗೆ ಸಮಗ್ರ ಚರ್ಚೆಯಾಗಿತ್ತು

'ಕೇಂದ್ರ ಸರ್ಕಾರವು ಏಳು ತಿಂಗಳ ಹಿಂದೆ ಸೂಕ್ತ ಸಲಹೆ ಅಭಿಪ್ರಾಯಗಳನ್ನು ಪಡೆದ ಬಳಿಕ ಕೃಷಿ ಮಸೂದೆಗಳನ್ನು ಅಂಗೀಕರಿಸಿತ್ತು. ಇದು ಹತ್ತು ಕೋಟಿ ಸಣ್ಣ ರೈತರಿಗೆ ಪ್ರಯೋಜನ ಉಂಟುಮಾಡಲಿದೆ. ಈಹಿಂದೆ ಅನೇಕ ರಾಜಕೀಯ ಪಕ್ಷಗಳು ಇದಕ್ಕೆ ಬೆಂಬಲ ನೀಡಿದ್ದವು. ಸಂಸತ್ತಿನಲ್ಲಿ ಕೂಡ ಈ ಮಸೂದೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆ. ಆದರೆ ಸುಪ್ರೀಂಕೋರ್ಟ್ ನಿರ್ಧಾರದ ಬಳಿಕ ತಡೆಹಿಡಿಯಲಾಗಿದೆ' ಎಂದರು.

ಬದಲಾದ ಜಮ್ಮು ಮತ್ತು ಕಾಶ್ಮೀರ

ಬದಲಾದ ಜಮ್ಮು ಮತ್ತು ಕಾಶ್ಮೀರ

'ಜಮ್ಮು ಮತ್ತು ಕಾಶ್ಮೀರದ ಜನತೆ ನನ್ನ ಸರ್ಕಾರದ ಅಭಿವೃದ್ಧಿ ನೀತಿಗಳನ್ನು ಬೆಂಬಲಿಸಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ಸ್ವಾತಂತ್ರ್ಯಾನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಪರಿಷದ್ ಚುನಾವಣೆ ಯಶಸ್ವಿಯಾಗಿ ನಡೆಯಿತು. ಭಾರಿ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿದ್ದು, ಜಮ್ಮು ಮತ್ತು ಕಾಶ್ಮೀರವು ಹೊಸ ಪ್ರಜಾಸತ್ತಾತ್ಮಕ ಭವಿಷ್ಯದ ಕಡೆಗೆ ವೇಗವಾಗಿ ಸಾಗುತ್ತಿದೆ ಎಂಬುದನ್ನು ತೋರಿಸಿದೆ. ಹೊಸ ಹಕ್ಕುಗಳನನ್ನು ಪಡೆದುಕೊಂಡು ರಾಜ್ಯದ ಜನರು ಸಬಲರಾಗುತ್ತಿದ್ದಾರೆ' ಎಂದು ಹೇಳಿದರು.

Union Budget 2021; ರೈತರು ತಿಂದ ಪೆಟ್ಟಿಗೆ ಮದ್ದಾಗಬಹುದೇ ಈ ಬಾರಿಯ ಬಜೆಟ್?Union Budget 2021; ರೈತರು ತಿಂದ ಪೆಟ್ಟಿಗೆ ಮದ್ದಾಗಬಹುದೇ ಈ ಬಾರಿಯ ಬಜೆಟ್?

ಸಾರ್ವಭೌಮತೆ ರಕ್ಷಿಸಲು ಬದ್ಧ

ಸಾರ್ವಭೌಮತೆ ರಕ್ಷಿಸಲು ಬದ್ಧ

'2020ರ ಜೂನ್ ತಿಂಗಳಲ್ಲಿ ಭಾರತದ 20 ಯೋಧರು ದೇಶ ರಕ್ಷಣೆಯ ಹೋರಾಟದಲ್ಲಿ ಗಲ್ವಾನ್ ಕಣಿವೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಸೈನಿಕರಿಗೆ ದೇಶದ ಪ್ರತಿಯೊಬ್ಬರೂ ಕೃತಜ್ಞರಾಗಿರುತ್ತಾರೆ. ದೇಶದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಎಲ್‌ಎಸಿಯಲ್ಲಿ ಭಾರತದ ಸಾರ್ವಭೌಮತೆ ರಕ್ಷಿಸಲು ಹೆಚ್ಚುವರಿ ಪಡೆಗಳನ್ನು ಕೂಡ ನಿಯೋಜಿಸಲಾಗಿದೆ' ಎಂದರು.

English summary
President Ram Nath Kovind in his address at a joint session of the parliament on Friday said, insult to the tricolour on Republic Day during protest was unfortunate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X