Pariksha Pe Charcha 2026: ನೋಂದಣಿಯಲ್ಲಿ ಭಾರೀ ದಾಖಲೆ ಬರೆದ ಪರೀಕ್ಷಾ ಪೇ ಚರ್ಚಾ, ಇನ್ನೊಂದೇ ದಿನ ಬಾಕಿ
ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಜನಪ್ರಿಯ "ಪರೀಕ್ಷಾ ಪೇ ಚರ್ಚಾ" (ಪಿಪಿಸಿ) ಸಂವಾದ ಕಾರ್ಯಕ್ರಮವು ಈ ವರ್ಷ ಇತಿಹಾಸ ಸೃಷ್ಟಿಸಲು ಮುಂದಾಗಿದೆ ಸಜ್ಜಾಗಿದೆ. ಪರೀಕ್ಷಾ ಒತ್ತಡವನ್ನು ಒಂದು ಆಚರಣೆಯಾಗಿ ಪರಿವರ್ತಿಸುವ ಗುರಿಯೊಂದಿಗೆ ಪ್ರಾರಂಭಿಸಲಾದ ಈ ಉಪಕ್ರಮವು ಈಗ ವಿಶ್ವದ ಅತಿದೊಡ್ಡ ಶೈಕ್ಷಣಿಕ ಸಂವಾದ ವೇದಿಕೆಯಾಗಿ ಹೊರಹೊಮ್ಮಿದೆ. 2026ರ ಆವೃತ್ತಿಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಅಭೂತಪೂರ್ವ ಉತ್ಸಾಹಕ್ಕೆ ಸಾಕ್ಷಿಯಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿ ಇದ್ದು, ಈವರೆಗೆ 4.30 ಕೋಟಿಗೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷಾ ಪೆ ಚರ್ಚಾ 2026 ನೋಂದಣಿಯು ಜನವರಿ 11ರಂದು (ಭಾನುವಾರ) ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ ಪರೀಕ್ಷಾ ಪೆ ಚರ್ಚಾಗೆ ಇಲ್ಲಿಯವರೆಗೆ 4.30 ಕೋಟಿಗೂ ಹೆಚ್ಚು (4,30,18,173) ಭಾಗವಹಿಸುವವರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 4 ಕೋಟಿಗೂ ಹೆಚ್ಚು (4,00,41,236) ವಿದ್ಯಾರ್ಥಿಗಳು, ಶಿಕ್ಷಕರು-24.03 ಲಕ್ಷ (24,03,234), ಪೋಷಕರು-5.73 ಲಕ್ಷ (5,73,703) ಸೇರಿದ್ದಾರೆ.

ಕಳೆದ ವರ್ಷವೇ ಗಿನ್ನಿಸ್ ದಾಖಲೆ
ಕಳೆದ ವರ್ಷ, ಪರೀಕ್ಷಾ ಪೆ ಚರ್ಚಾ 2025ರಲ್ಲಿ 3.53 ಕೋಟಿ ನೋಂದಣಿಗಳೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತು. "ಒಂದು ತಿಂಗಳಲ್ಲಿ ಅತಿ ಹೆಚ್ಚು ಜನರನ್ನು" ನೋಂದಾಯಿಸಿದ್ದಕ್ಕಾಗಿ ಪರೀಕ್ಷಾ ಪೆ ಚರ್ಚಾ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮಾನಸಿಕ ಶಕ್ತಿಯನ್ನು ಒದಗಿಸುವುದಲ್ಲದೆ, ಭಾರತದ ಪ್ರಧಾನ ಮಂತ್ರಿಗಳಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಲು ಮತ್ತು ಅವರ ಅನುಭವಗಳಿಂದ ಕಲಿಯಲು ಅಪರೂಪದ ಅವಕಾಶವನ್ನು ಒದಗಿಸುತ್ತದೆ. ಈ ಕಾರ್ಯಕ್ರಮದ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು.
ಈ ಬಾರಿಯ ಪರೀಕ್ಷಾ ಪೆ ಚರ್ಚಾದಲ್ಲಿ ಲೆಜೆಂಡರಿ ಪರೀಕ್ಷಾ ಯೋಧರಿಗೆ ಪ್ರಧಾನಿ ನಿವಾಸಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ. ಈ ಬಾರಿ ಸ್ಪರ್ಧೆಯು ಕೇವಲ ಸಂವಾದಕ್ಕೆ ಸೀಮಿತವಾಗಿಲ್ಲ, ವಿಜೇತರಿಗೆ ಅದ್ಭುತ ಬಹುಮಾನಗಳನ್ನು ಸಹ ಘೋಷಿಸಲಾಗಿದೆ. ಇದರಲ್ಲಿ ವಿಜೇತರಾಗುವ ಟಾಪ್ 10 "ಲೆಜೆಂಡರಿ ಪರೀಕ್ಷಾ ಯೋಧರು" ಪ್ರಧಾನ ಮಂತ್ರಿ ನಿವಾಸಕ್ಕೆ ನೇರವಾಗಿ ಭೇಟಿ ನೀಡಿ ಸಮಯ ಕಳೆಯುವ ಅವಕಾಶ ಪಡೆಯಲಿದ್ದಾರೆ.
Pariksha Pe Charcha 2026 crosses 4 crore registrations, marking a significant milestone in nationwide engagement. Led by Hon’ble Prime Minister Shri @narendramodi, Pariksha Pe Charcha continues to connect with students, parents, and teachers across the country, encouraging… pic.twitter.com/JgnekPeEcD
— Ministry of Education (@EduMinOfIndia) January 9, 2026
ಆಯ್ಕೆಯಾದ ಸುಮಾರು 2,500 ಮಂದಿಗೆ ಶಿಕ್ಷಣ ಸಚಿವಾಲಯದಿಂದ ವಿಶೇಷ 'ಪರೀಕ್ಷಾ ಪೆ ಚರ್ಚಾ' ಕಿಟ್ ಮತ್ತು ಪ್ರಮಾಣಪತ್ರ ಸಿಗಲಿದೆ. ಅದೃಷ್ಟಶಾಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಮಯದಲ್ಲಿ ಪ್ರಧಾನಿ ಮೋದಿಯವರಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳುವ ಅವಕಾಶ ಪಡೆಯಲಿದ್ದಾರೆ.
ಅರ್ಹತೆ ಏನು?
ಈ ಸ್ಪರ್ಧೆಯನ್ನು MyGov ಇನ್ನೋವೇಟ್ ವೇದಿಕೆಯಲ್ಲಿ ನಡೆಸಲಾಗುತ್ತಿದೆ. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳು, ಅವರ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಬಹುದು. ಸಮಯ ನಿರ್ವಹಣೆ, ಸಕಾರಾತ್ಮಕ ಚಿಂತನೆ ಮತ್ತು ಒತ್ತಡ-ಮುಕ್ತ ಕಲಿಕೆಯಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶ.
ನೋಂದಣಿ ಹೇಗೆ?
* PPC 2026ಕ್ಕೆ ನೋಂದಣಿಯಾಗಲು innovateindia.mygov.in/ppc-2026 ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* PPC-2026 ಸ್ಪರ್ಧೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ವರ್ಗವನ್ನು (ವಿದ್ಯಾರ್ಥಿ/ಶಿಕ್ಷಕ/ಪೋಷಕರು) ಆಯ್ಕೆಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ಲಾಗಿನ್ ಮಾಡಿ.
* ನೀಡಿರುವ ವಿಷಯಗಳ ಕುರಿತು ನಿಮ್ಮ ಚಟುವಟಿಕೆಯನ್ನು ಪೂರ್ಣಗೊಳಿಸಿ ಮತ್ತು ಪ್ರಧಾನ ಮಂತ್ರಿಗಳಿಗೆ ನಿಮ್ಮ ಪ್ರಶ್ನೆಯನ್ನು ಗರಿಷ್ಠ 500 ಅಕ್ಷರಗಳಲ್ಲಿ ಬರೆಯಿರಿ.
* ಸಲ್ಲಿಸಿದ ನಂತರ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಮತ್ತು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಿ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
CTET ಫೆಬ್ರವರಿ 2026ರ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟ: ಸ್ಕೋರ್ಕಾರ್ಡ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ











Click it and Unblock the Notifications