Rameshwaram Pamban Bridge: ಕರ್ನಾಟಕ & ಚೆನ್ನೈನಿಂದ ರಾಮೇಶ್ವರಂ ರೈಲು ಸೇವೆ, ವೇಳಾಪಟ್ಟಿ
Pamban Railway Bridge: ರಾಮೇಶ್ವರಂ ದ್ವೀಪ ಹಾಗೂ ಮುಖ್ಯ ಭೂಭಾಗಕ್ಕೆ ಸಂಪರ್ಕ ಕಲ್ಪಿಸುವ ತಮಿಳುನಾಡಿನಲ್ಲಿ ಪ್ರಧಾನಿ ಪ್ರಧಾನಿ ಮೋದಿ ಅವರು ಪಾಂಬನ್ ರೈಲ್ವೆ ಬ್ರಿಡ್ಜ್‌ಗೆ ಹಸಿರು ನಿಶಾನೆ ತೋರಿಸದ್ದಾರೆ. ಇದರ ಬೆನ್ನಲ್ಲೆ ವಿವಿಧ ನಗರಗಳಿಂದ ಸ್ಥಗಿತಗೊಂಡಿದ್ದ ರೈಲುಗಳ ಸೇವೆ ಪುನಾರಂಭಗೊಂಡಿದೆ. ಚೆನ್ನೈ ಹಾಗೂ ಉತ್ತರ ಕರ್ನಾಟಕದ ಭಾಗ ಸೇರಿದಂತೆ ವಿವಿಧ ಕಡೆಗಳಿಂದ ರಾಮೇಶ್ವರಂಗೆ ರೈಲು ಸೇವೆ ಆರಂಭವಾಗಲಿದೆ. ಮಾರ್ಗ ರೈಲು ಸಂಖ್ಯೆ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ತಮಿಳುನಾಡಿನ ಚೈನ್ನನಿಂದ ಹೋಗುವ 'ರಾಮೇಶ್ವರಂ - ಚೆನ್ನೈ ಎಕ್ಸ್‌ಪ್ರೆಸ್ ರೈಲು' (16104) ಸೇವೆ ಮೊದಲ ಸಂಚಾರ ಆರಂಭಿಸಿದೆ. ದೇಶದ ಮೊದಲ ಲಂಬ ಸಮುದ್ರ ಸೇತುವೆಯ ಮೂಲಕ ಹಾದುಹೋಗುವ ದೃಶ್ಯ ಮನಸೋರೆಗೊಳ್ಳುವಂತಿದೆ. ಬ್ರಿಡ್ಜ್ ಉದ್ಘಾಟನೆ ಬೆನ್ನಲ್ಲೆ ಮತ್ತೆ ರಾಮೇಶ್ವರಂಗೆ ರೈಲು ರೈಲು ಸಂಚಾರ ಕಂಡು ರೈಲ್ವೆ ಪ್ರಯಾಣಿಕರು ಖುಷ್ ಆಗಿದ್ದಾರೆ.

ಈ ಮೊದಲು ಕಾರ್ಯಾಚರಣೆಯ ಕಾರಣಾಂತರಗಳಿಂದ ರದ್ದುಗೊಳಿಸಲಾಗಿತ್ತು. ಬ್ರಿಡ್ಜ್ ಸರಿ ಇಲ್ಲದ ಕಾರಣ ವಿವಿಧ ಭಾಗಗಳಿಂದ ಬರಬೇಕಿದ್ದ ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಇದೀಗ ಚೆನ್ನೈ ಮತ್ತು ಕರ್ನಾಟಕ ಭಾಗದಿಂದ ರೈಲುಗಳು ಆಗಮಿಸುತ್ತಿವೆ. ಸಂಚಾರ ಎಂದಿನಂತೆ ಆರಂಭವಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಹುಬ್ಬಳ್ಳಿ-ರಾಮೇಶ್ವರಂ ರೈಲು ಸಂಚಾರ ಆರಂಭ
ಚೆನ್ನೈ-ರಾಮೇಶ್ವರಂ ಬೆನ್ನಲ್ಲೆ. ಉತ್ತರ ಕರ್ನಾಟಕದ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮೀ ರೈಲು ನಿಲ್ದಾಣ (ಜಂಕ್ಷನ್)ನಿಂದ ರಾಮೇಶ್ವರಂಗೆ ಸಾಪ್ತಾಹಿಕ ವಿಶೇಷ ರೈಲು ಸೇವೆ ಜನರಿಗೆ ಲಭ್ಯವಾಗಿದೆ.
* ಎಸ್‌ಎಸ್‌ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (07355) ಮೊದಲು ಏಪ್ರಿಲ್ 26ರವರೆಗೆ ರದ್ದುಗೊಳಿಸಲಾಗಿತ್ತು. ಈಗ ಏಪ್ರಿಲ್ 12 ರಿಂದ ಜೂನ್ 28ರವರೆಗೆ ಪುನರಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.

* ರಾಮೇಶ್ವರಂ-ಎಸ್‌ಎಸ್‌ಎಸ್ ಹುಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ (07356) ಏಪ್ರಿಲ್ 13 ರಿಂದ ಜೂನ್ 29ರವರೆಗೆ ಪುನರಾರಂಭಿಸಲಾಗಿದೆ. ಈ ಮೊದಲು ಇದೇ ಏಪ್ರಿಲ್ 27ರವರೆಗೆ ಈ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
Train No. 16104 Rameswaram - Chennai Express, hauled by GOC WDP4D 40338, passing through India's first vertical sea bridge. #SouthernRailway #NewPambanBridge #IndianRailways #Rameswaram pic.twitter.com/QGN19aCMsS
— Southern Railway (@GMSRailway) April 7, 2025
ಪಾಂಬನ್ ಬ್ರಿಡ್ಜ್ ಕುರಿತು...
ತಮಿಳುನಾಡಿನ ರಾಮೇಶ್ವರಂ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ನಿರ್ಮಿಸಿರುವ ಲಂಬ ರೈಲ್ವೆ ಬ್ರಿಡ್ಜ್ ಭಾರತದ ಮೊದಲ ವರ್ಟಿಕಲ್ ಬ್ರಿಡ್ಜ್ ಆಗಿದೆ. ಸಮುದ್ರ ಮಾರ್ಗದಲ್ಲಿ ಹಡುಗುಗಳು ಬಂದಾಗ ಈ ಬ್ರಿಡ್ಜ್ ನ ಭಾಗವು ತಾನಾಗಿಯೇ ಗೇಟಿನಂತೆ ತೆರೆದುಕೊಳ್ಳುತ್ತದೆ. ಹಡುಗು ಸಾಗಿದ ಬಳಿಕ ಮತ್ತೆ ಯಥಾಸ್ಥಿತಿಗೆ ಬರುತ್ತದೆ. ಆಗ ರೈಲುಗಳು ಬ್ರಿಡ್ಜ್ ಮೂಲಕ ಸಾಗಬಹುದಾಗಿದೆ. ಇಂತಹ ತಂತ್ರಜ್ಞಾನ ಅಳವಡಿಕೆ ಮಾಡಿ ನಿರ್ಮಿಸಿದ ಈ ಬ್ರಿಡ್ಜ್‌ಗೆ ಶ್ಘಾಘನೆ ವ್ಯಕ್ತವಾಗಿದೆ. ಪ್ರಧಾನಿ ಮೋದಿಯವರು ರೈಲು, ರಕ್ಷಣಾ ಇಲಾಖೆ ಹಡಗಿಗೆ ಭಾನುವಾರ ಚಾಲನೆ ನೀಡಿ, ತಂತ್ರಜ್ಞಾನ ಬಳಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು..
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications