Palestine Row: ಪ್ಯಾಲೆಸ್ತೀನ್‌ಗೆ ಬೆಂಬಲ; ಪ್ರಿಯಾಂಕಾ ಗಾಂಧಿ ವಾದ್ರಾಗೆ ಪಾಕಿಸ್ತಾನದಿಂದ ಮೆಚ್ಚುಗೆ!
ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಇದೀಗ ಈ ವಿಚಾರ ಅಂತರರಾಷ್ಟ್ರೀಯ ಚರ್ಚೆಗೆ ನಾಂದಿ ಹಾಡಿದೆ. ಸೋಮವಾರ ಸಂಸತ್‌ಗೆ ಬಂದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಪ್ಯಾಲೆಸ್ತೀನ್ ಎಂದು ಬರೆಯಲಾಗಿರುವ ಬ್ಯಾಗ್ ಹಿಡಿದುಕೊಂಡು ಸಂಸತ್ ಪ್ರವೇಶ ಮಾಡಿದ್ದರು. ಇದಕ್ಕೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಇದರ ನಡುವೆಯೇ ಪ್ರಿಯಾಂಕಾ ಗಾಂಧಿ ಅವರಿಗೆ ಪಾಕಿಸ್ತಾನದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೌದು ಪ್ರಿಯಾಂಕಾ ಗಾಂಧಿ ಅವರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವುದನ್ನು ಪರೋಕ್ಷವಾಗಿ ತೋರಿಸಿದ್ದರು. ಆದರೆ, ಅವರು ಎಲ್ಲೂ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದೇನೆ ಎಂದಿರಲಿಲ್ಲ. ಆದರೆ, ಅವರು ತೆಗೆದುಕೊಂಡ ಬ್ಯಾಗ್‌ನ ಮೂಲಕವೇ ಸೂಚಕವಾಗಿ ಅದನ್ನು ಹೇಳಿದ್ದರು. ಇದೀಗ ಇದಕ್ಕೆ ಪಾಕ್‌ನಿಂದ ಬೆಂಬಲ ವ್ಯಕ್ತವಾಗಿದೆ.

ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡೆಯನ್ನು ಪಾಕಿಸ್ತಾನ ಮೆಚ್ಚುಕೊಂಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರಾಜಕಾರಣಿ ಫವಾದ್ ಚೌಧರಿ ಅವರು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಹೊಗಳಿದ್ದಾರೆ. ಇದು ವಿವಾದಕ್ಕೆ ತುಪ್ಪ ಸುರಿದಂತೆ ಆಗಿದೆ. ಸೋಮವಾರದ ಬೆಳವಣಿಗೆಗೆ ಇದೀಗ ಬಿಜೆಪಿ ನಾಯಕರು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಪ್ರಿಯಾಂಕಾ ಅವರು ರಾಹುಲ್‌ಗಾಂಧಿಗಿಂತಲೂ ಡೈಂಜರ್ ಎಂದು ಬಿಜೆಪಿ ನಾಯಕರು ದೂರಿದ್ದಾರೆ. ಇದೀಗ ಪಾಕಿಸ್ತಾನವೂ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿರುವ ಕೆಲಸಕ್ಕೆ ಮೆಚ್ಚುಗೆ ಸೂಚಿಸಿರುವುದು ಈ ವಿವಾದ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.
ಪ್ರಿಯಾಂಕಾ ಅವರು ಇದೇ ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ. ಇದು ಅವರ ಮೊದಲ ಸಂಸತ್ ಅಧಿವೇಶನ ಆಗಿದೆ. ಆದರೆ, ಮೊದಲ ಅಧಿವೇಶನದಲ್ಲೇ ಅವರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕೇರಳದ ವಯನಾಡ್‌ನ ನೂತನ ಸಂಸದೆ ಗೆದ್ದ ಒಂದೇ ವಾರದಲ್ಲಿ ಕರ್ನಾಟಕಕ್ಕೂ ಶಾಕ್ ಕೊಟ್ಟಿದ್ದರು. ಕರ್ನಾಟಕ ಹಾಗೂ ಕೇರಳದ ಗಡಿ ಭಾಗದ ವಿವಾದವನ್ನು ಮತ್ತೆ ಮುನ್ನಲೆಗೆ ತರುವ ಪ್ರಯತ್ನವನ್ನು ಅವರು ಮಾಡಿದ್ದರು. ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದೇ ನನ್ನ ಪ್ರಥಮ ಆದ್ಯತೆ ಎಂದು ಅವರು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕನ್ನಡಿಗರು ಹಾಗೂ ಇಲ್ಲಿನ ಸಂಸದರು ಪ್ರಿಯಾಂಕ ಮೇಲೆ ವಾಗ್ದಾಳಿ ನಡೆಸಿದ್ದರು.

ಇದೀಗ ಪ್ರಿಯಾಂಕ ಸಂಸತ್ ಪ್ರವೇಶ ಮಾಡಿದ ಬೆನ್ನಲ್ಲೇ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ನಾಯಕ ಈ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಅವರಿಗೆ ಮೆಚ್ಚುಗೆ ಸೂಚಿಸಿದ್ದು, ಪಾಕಿಸ್ತಾನ್‌ನ ರಾಜಕಾರಣಿಗಳು ಈ ರೀತಿಯ ಧೈರ್ಯ ಪ್ರದರ್ಶಿಸಬೇಕು. ಇಂತಹ ಧೈರ್ಯ ಪ್ರದರ್ಶನ ಮಾಡದೆ ಇರುವುದಕ್ಕೆ ಪಾಕಿಸ್ತಾನಿ ರಾಜಕಾರಣಿಗಳನ್ನು ಅವರು ಟೀಕೆ ಮಾಡಿದ್ದಾರೆ.
ಜವಾಹರಲಾಲ್ ನೆಹರೂ ಅವರಂತಹ ಅತ್ಯುತ್ತಮ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗಳಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯವಿದೆ. ಪ್ರಿಯಾಂಕಾ ಗಾಂಧಿ ಕೆಲವು ಸಂಕುಚಿತ ಮನಸ್ಸುಗಳಿರುವವರ ನಡುವೆ ಭಿನ್ನವಾಗಿ ನಿಂತಿದ್ದಾರೆ. ಇಲ್ಲಿಯವರೆಗೆ ಯಾವುದೇ ಪಾಕಿಸ್ತಾನಿ ಸಂಸತ್ ಸದಸ್ಯರು ಅಂತಹ ಧೈರ್ಯವನ್ನು ಪ್ರದರ್ಶಿಸಿಲ್ಲ. ಥ್ಯಾಂಕ್ಯೂ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅಭಿನಂದನೆ ಸೂಚಿಸಿದ್ದಾರೆ.












Click it and Unblock the Notifications