ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

Posted By:
Subscribe to Oneindia Kannada

ಜಮ್ಮು ಕಾಶ್ಮೀರ, ನವೆಂಬರ್ 29 : ಪಾಕಿಸ್ತಾನ ಸತತ ಮೂರನೇ ದಿನವೂ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಭಂಡತನ ಮೆರೆದಿದೆ.

ಅಮರನಾಥ ಯಾತ್ರೆಗೆ ಭಯೋತ್ಪಾದಕರ ಬೆದರಿಕೆ: ಆತಂಕದ ಅಗತ್ಯವಿಲ್ಲ

ಭಾರತದ ಸೇನಾ ನೆಲೆಯನ್ನು ಗುರಿಯಾಗಿರಿಸಿಕೊಂಡು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಳಿ ಅಪ್ರಚೋದಿತ ಗುಂಡಿನ ದಾಳಿಯನ್ನು ಪಾಕಿಸ್ತಾನ ಸೇನೆ ನಡೆಸಿದೆ.

https://kannada.oneindia.com/news/india/amarnath-yatra-threat-high-but-don-t-panic-as-high-security-is-in-place-120676.html

ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ಭಾರತದ ಸೇನೆ ನೀಡಿದೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್ ಪಿಎಫ್ ಯೋಧರಿಗೆ ಗಾಯ

ಬುಧವಾರ (ನವೆಂಬರ್ 29)ರಂದು ಮಧ್ಯಾಹ್ನ 2.30ಗೆ ಲಘು ಆಯುಧಗಳನ್ನು ಬಳಸಿ ದಾಳಿಯನ್ನು ಪಾಕಿಸ್ತಾನ ಸೇನೆಯು ಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು 3.45ಕ್ಕೆ ಪ್ರ್ತತಿದಾಳಿ ನಡೆಸಿದೆ.

ಪಾಕಿಸ್ತಾನ ಸೇನೆಯು ನಿನ್ನೆ (ನವೆಂಬರ್ 28)ರಂದು ಸುಂದರ್ ಬನಿ ಪ್ರದೇಶದಲ್ಲಿ ದಾಳಿ ನಡೆಸಿತ್ತು. ಮೊನ್ನೆ (ನವೆಂಬರ್ 27)ರಂದು ರಾಜೌರಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಯಾವುದೇ ಸಯನಿಕರ ಜೀವಕ್ಕೆ ಹಾನಿ ಆಗಿಲ್ಲ. ಈ ಮುಂಚೆ ನವೆಂಬರ್ 15 ರಿಂದ 17ರ ವರೆಗೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistani troops violated ceasefire for the third consecutive day today by targeting Indian posts along the Line of Control (LoC) in Jammu and Kashmir's Poonch district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ