ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಹವಾಮಾನ ಇಲಾಖೆಯಿಂದ ಪಿಒಕೆ ಭಾಗದ ವರದಿ ಬೇಡ ಎಂದ ಪಾಕಿಸ್ತಾನ

|
Google Oneindia Kannada News

ನವದೆಹಲಿ, ಮೇ 9: ಪಾಕ್ ಆಕ್ರಮಿತ ಪ್ರದೇಶದ ಕುರಿತು ಯಾವುದೇ ಹವಾಮಾನ ವರದಿಯನ್ನು ಭಾರತ ನೀಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ನಗರಗಳ ಹವಾಮಾನ ವರದಿಯನ್ನು ನೀಡಲು ಭಾರತೀಯ ಹವಾಮಾನ ಇಲಾಖೆ ಪ್ರಾರಂಭಿಸಿದೆ.

ಈ ಮೂಲಕ ಪಾಕಿಸ್ತಾನದ ಸುಪ್ರೀಂಕೋರ್ಟ್‌ ಗಿಲ್ಗಿಟ್‌ - ಬಾಲ್ಟಿಸ್ತಾನ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಕೊಟ್ಟಿರುವ ಆದೇಶಕ್ಕೆ ಭಾರತ ಸರಿಯಾದ ತಿರುಗೇಟನ್ನು ನೀಡಿದೆ.

ಭಾರತೀಯ ಹವಾಮಾನ ಇಲಾಖೆಯಿಂದ ಪಾಕಿಸ್ತಾನ ಹವಾಮಾನ ವರದಿ ಭಾರತೀಯ ಹವಾಮಾನ ಇಲಾಖೆಯಿಂದ ಪಾಕಿಸ್ತಾನ ಹವಾಮಾನ ವರದಿ

ಮೇ 5ರಿಂದ ಈ ವ್ಯವಸ್ಥೆ ಶುರುವಾಗಿದ್ದು, ಶ್ರೀನಗರದಲ್ಲಿರುವ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಾದೇಶಿಕ ಕಚೇರಿ ಮೂಲಕವೇ ಅದನ್ನು ಪ್ರಕಟಿಸಲಾಗುತ್ತದೆ. ಭಾರತ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರವು ತನ್ನ ಹವಾಮಾನ ಮುನ್ಸೂಚನೆಯಲ್ಲಿ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ಪ್ರದೇಶಗಳನ್ನು ಒಳಗೊಳ್ಳಲು ಪ್ರಾರಂಭಿಸಿದೆ.

Pakistan Rejects IMD’s Inclusion Of PoK Gilgit Baltistan

ಆದರೆ ಪಾಕಿಸ್ತಾನ ಸರ್ಕಾರವು ಭಾರತದ ಈ ನಡೆಯನ್ನು ವಿರೋಧಿಸಿದೆ. ಇದು ಭಾರತದ ಮತ್ತೊಂದು ಚೇಷ್ಟೆ ಎಂದು ಹೇಳಿ ಅಲ್ಲಗಳೆದಿದೆ.

ಭಾರತದ ಯಾವುದೇ ಕಾನೂನುಬಾಹಿರ ಮತ್ತು ಏಕಪಕ್ಷೀಯ ಕ್ರಮಗಳು ಜಮ್ಮು ಮತ್ತು ಕಾಶ್ಮೀರದ 'ವಿವಾದಿತ' ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನಡೆದಿದ್ದೇನು?: ಕಳೆದ ವರ್ಷ ಆಗಸ್ಟ್‌ನಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿದಾಗಿನಿಂದಲೂ ಅವರು ತಮ್ಮ ದೈನಂದಿನ ಹವಾಮಾನ ಬುಲೆಟಿನ್ ಅಡಿಯಲ್ಲಿ ಪಿಒಕೆ ಅಡಿಯಲ್ಲಿರುವ ಪ್ರದೇಶಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಇದನ್ನು ಈಗ ಜಮ್ಮು ಮತ್ತು ಕಾಶ್ಮೀರ ಉಪವಿಭಾಗದ ಅಡಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಈ ಪ್ರದೇಶಗಳು ಈಗ ಭಾರತದ ವಾಯುವ್ಯ ವಿಭಾಗದ ಒಟ್ಟಾರೆ ಮುನ್ಸೂಚನೆಯಲ್ಲಿ ಸ್ಥಾನ ಪಡೆದಿವೆ.

ವಾಯುವ್ಯ ವಿಭಾಗವು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ-ಚಂಡೀಗಢ- ಹರಿಯಾಣ, ಪಂಜಾಬ್, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ರಾಜಸ್ಥಾನ ಎಂಬ ಒಂಬತ್ತು ಉಪವಿಭಾಗಗಳನ್ನು ಒಳಗೊಂಡಿದೆ.

ವಿಶ್ವ ಹವಾಮಾನ ಇಲಾಖೆಯು ಪ್ರಾದೇಶಿಕ ಹವಾಮಾನ ಕೇಂದ್ರವಾಗಿ ನಾಮನಿರ್ದೇಶನಗೊಂಡಿರುವ ಐಎಂಡಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಥೈಲ್ಯಾಂಡ್, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಮುಂದಿನ ಐದು ದಿನಗಳ ಮುನ್ಸೂಚನೆಗಳನ್ನು ವಿವರಿಸುತ್ತದೆ ಎಂದು ಶ್ರೀ ಮೋಹಪಾತ್ರ ಹೇಳಿದರು.

English summary
Pakistan on Friday rejected the Indian Meteorological Department (IMD)’s move to refer to its meteorological sub-division of Jammu and Kashmir as “Jammu & Kashmir, Ladakh, Gilgit-Baltistan and Muzaffarabad”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X