ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧಕ್ಕೆ ಸನ್ನದ್ಧವಾಯಿತೆ ಪಾಕಿಸ್ತಾನ, ವಾಯುಸೇನೆಯಲ್ಲಿ ಭಾರೀ ಚಟುವಟಿಕೆ

ಪಾಕಿಸ್ತಾನದಲ್ಲಿ ವಾಯು ಸೇನೆ ಬಹಳ ಚಟುವಟಿಕೆಯಿಂದ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬುದನ್ನು ಅಲ್ಲಿನ ಮಾಧ್ಯಮಗಳು ಹೇಳಿರುವುದರ ವರದಿ ಇಲ್ಲಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಪಾಕಿಸ್ತಾನವು ಯುದ್ಧ ಸನ್ನದ್ಧ ಸ್ಥಿತಿಯಲ್ಲಿದೆಯಾ? ಅಲ್ಲಿನ ಮಾಧ್ಯಮಗಳ ವರದಿಗಳನ್ನೇ ನಂಬುವುದಾದರೆ ಹೌದು. ಪಾಕಿಸ್ತಾನಿ ಫೈಟರ್ ಜೆಟ್ ಗಳು ಸಿಯಾಚಿನ್ ವರೆಗೆ ಹಾರಾಡಿವೆ ಮತ್ತು ಮುಂಚೂಣಿಯಲ್ಲಿರುವ ನೆಲೆಗಳಲ್ಲಿ ಚಟುವಟಿಕೆ ಆರಂಭಿಸಿವೆ. ಯುದ್ಧ ತಾಲೀಮಿನ ಭಾಗವಾಗಿ ಆ ದೇಶದ ವಾಯು ಸೇನೆಯ ಮಿರೇಜ್ ಫೈಟರ್ ಜೆಟ್ ಗಳು ಸಿಯಾಚಿನ್ ವರೆಗೆ ಹಾರಾಟ ನಡೆಸಿವೆ.

ಸದ್ಯಕ್ಕೆ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪಾಕ್ ನ ವಾಯು ಸೇನೆಯ ಮುಖ್ಯಸ್ಥ ಸೊಹೇಲ್ ಅಮಾನ್ ಪರಿಶೀಲನೆ ನಡೆಸಿದ್ದು, ಸ್ಕರ್ದುನಲ್ಲಿರುವ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಲಾಗಿದೆ. ಅಮಾನ್ ಜತೆಗೆ ವಾಯುಸೇನೆಯ ಉನ್ನತ ಅಧಿಕಾರಿಗಳು ಸಹ ಇದ್ದರು. ಯುದ್ಧ ವಿಮಾನವನ್ನು ಸಿಯಾಚಿನ್ ನ ಬಳಿ ಹಾರಾಟ ನಡೆಸಲಾಗಿದೆ.[ತೇಜ್ ಪುರ್ ಬಳಿ ಸುಖೋಯ್ 30 ಯುದ್ಧ ವಿಮಾನ ನಾಪತ್ತೆ]

Pakistan in war mode: Flies jets over Siachen, activates forward bases

ಭಾರತವು ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ವಿಡಿಯೋ ಬಿಡುಗಡೆ ಮಾಡಿದ ಒಂದು ದಿನದ ನಂತರ ಪಾಕ್ ಸೇನೆಯು ಹೀಗೆ ನಡೆದುಕೊಂಡಿದೆ. ಸಮಾ ಟಿವಿಯ ವರದಿ ಪ್ರಕಾರ ಮುಂಚೂಣಿ ನೆಲೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ತಿಳಿಸಲಾಗಿದೆ. ಇನ್ನು ಪಾಕ್ ನ ವಾಯು ಸೇನೆಯ ಮೂಲಗಳ ಪ್ರಕಾರ ಇದು ಸಮರಾಭ್ಯಾಸ ಅಷ್ಟೇ.[ಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವು]

ಅಮಾನ್ ಪೈಲಟ್ ಗಳನ್ನು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಭೇಟಿ ಮಾಡಿದ್ದಾರೆ. ತಾವೇ ಸ್ವತಃ ಮಿರೇಜ್ ಜೆಟ್ ನ ಚಾಲನೆ ಮಾಡಿದ್ದಾರೆ ಎಂದು ವರದಿಯಾಗಿದೆ.

English summary
Pakistani fighter jets have flown close to the Siachen glacier and forward bases have been activated, reports in the Pakistan media claim. Reports also stated that the Mirage fighter jets of country's air force flew over Siachen as part of a war exercise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X