ತೇಜ್ ಪುರ್ ಬಳಿ ಸುಖೋಯ್ 30 ಯುದ್ಧ ವಿಮಾನ ನಾಪತ್ತೆ
ಭಾರತ ಹಾಗೂ ಚೀನಾ ಗಡಿಭಾಗದ ತೇಜ್ ಪುರ್ ಬಳಿ ಹಾರಾಟ ನಡೆಸಿದ್ದ ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಸುಖೋಯ್ 30 ಮಂಗಳವಾರದಂದು ಕಣ್ಮರೆಯಾಗಿದೆ.
ತೇಜ್ ಪುರ್(ಅಸ್ಸಾಂ), ಮೇ 23: ಭಾರತ ಹಾಗೂ ಚೀನಾ ಗಡಿಭಾಗದ ತೇಜ್ ಪುರ್ ಬಳಿ ಹಾರಾಟ ನಡೆಸಿದ್ದ ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಸುಖೋಯ್ 30 ಮಂಗಳವಾರದಂದು ಕಣ್ಮರೆಯಾಗಿದೆ.
ಮಂಗಳವಾರ ಮಧ್ಯಾಹ್ನ ತೇಜ್ ಪುರ್ ದ ವಾಯುನೆಲೆಯಿಂದ ಟೇಕಾಫ್ ಆದ ಬಳಿಕ 60 ಕಿ.ಮೀ ದೂರದ ನಂತರ ರೇಡಿಯೋ ಹಾಗೂ ರಡಾರ್ ಸಂಪರ್ಕ ಕಳೆದುಕೊಂಡಿದೆ. ಯುದ್ಧವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದರು ಎಂದು ತಿಳಿದು ಬಂದಿದೆ.

ಆದರೆ, ನಂತರ ಪುನಃ ಹಾರಾಟ ಆರಂಭಿಸಿ 60 ಕಿ.ಮೀ ಕ್ರಮಿಸುವಷ್ಟರಲ್ಲಿ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ವಾಯುಸೇನೆಯಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದೆ.ಚೀನಾ ಗಡಿಭಾಗ ಕೇವಲ 170 ಕಿಮೀ ಅಂತರದಲ್ಲಿ ತೇಜ್ಪುರ್ ವಾಯುನೆಲೆಯಿದೆ.












Click it and Unblock the Notifications