ನಿಯಮ ಉಲ್ಲಂಘಿಸಿದ ಪಾಕ್ ಹೆಲಿಕಾಪ್ಟರ್ ಭಾರತದ ಗಡಿಯಲ್ಲಿ ಹಾರಾಟ
ನವದೆಹಲಿ, ಸೆಪ್ಟೆಂಬರ್ 30: ಪಾಕಿಸ್ತಾನದ ಹೆಲಿಕಾಪ್ಟರ್ ವೊಂದು ಭಾನುವಾರ ಭಾರತದ ವಾಯು ಗಡಿಯನ್ನು ಮೀರಿ ಹಾರಾಟ ನಡೆಸಿದೆ. ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣದ ರೇಖೆ ಬಳಿ ಪಾಕಿಸ್ತಾನಿ ಹೆಲಿಕಾಪ್ಟರ್ ಹಾರಾಟ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮು ಮೂಲದ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಮಾತನಾಡಿ, ಮಧ್ಯಾಹ್ನ 12.10ರ ವೇಳೆಗೆ ಪಾಕ್ ನ ಹೆಲಿಕಾಪ್ಟರ್ ವಾಯ ಗಡಿಯನ್ನು ಉಲ್ಲಂಘಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಕೃತ ಮೂಲಗಳು ನೀಡುವ ಮಾಹಿತಿ ಪ್ರಕಾರ, ಬಿಳಿ ಬಣ್ಣದ ಪಾಕಿಸ್ತಾನಕ್ಕೆ ಸೇರಿದ ಹೆಲಿಕಾಪ್ಟರ್ ಭಾರತ ಗುಲ್ಪುರ್ ವಲಯದಲ್ಲಿ ಕೆಲ ಕಾಲ ಹಾರಾಟ ನಡೆಸಿ, ಆ ನಂತರ ಹಿಂತಿರುಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿದ್ದರು. 1991ರಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಯುದ್ಧ ವಿಮಾನಗಳು, ಬಾಂಬರ್ಸ್ ಮತ್ತು ಇತರ ವಿಮಾನಗಳನ್ನು ಭಾರತ ಹಾಗೂ ಪಾಕ್ ನ ವಾಯು ಗಡಿಯ ಹತ್ತು ಕಿಲೋಮೀಟರ್ ದೂರವನ್ನು ದಾಟುವಂತಿಲ್ಲ.
#WATCH A Pakistani helicopter violated Indian airspace in Poonch sector of #JammuAndKashmir pic.twitter.com/O4QHxCf7CR
— ANI (@ANI) September 30, 2018












Click it and Unblock the Notifications