ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್, ಹಫೀಜ್ ಅನ್ನು ಯಾವಾಗ ಹಸ್ತಾಂತರಿಸುವಿರಿ: ಪಾಕ್ ಅಧಿಕಾರಿ ಸೈಲೆಂಟ್!

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ದಾವೂದ್ ಇಬ್ರಾಹಿಂ ಹಾಗೂ ಪರಾರಿ ಆಗಿರುವ ಹಫೀಜ್ ಸಯೀದ್ ಅನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮುಖ್ಯಸ್ಥ ಮೊಹ್ಸಿನ್ ಬಟ್ ಮೌನವಾಗಿದ್ದರು.

ಇಂಟರ್‌ಪೋಲ್‌ನ 90ನೇ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಗೆ ಆಗಮಿಸಿರುವ ಬಟ್, ಮಂಗಳವಾರ ದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಯಿಂದ ಅವರು ಅವಕ್ಕಾದರು. ಕೊನೆಯ ಕ್ಷಣದವರೆಗೂ ಪ್ರಗತಿ ಮೈದಾನದ ಪ್ಲೀನರಿ ಹಾಲ್‌ಗೆ ಪ್ರವೇಶಿಸುವುದರಿಂದ ದೂರ ಉಳಿದರು.

ದಾವೂದ್ ಗ್ಯಾಂಗಿನ ರಿಯಾಜ್ ಭಾಟಿ, ಸಲೀಂ ಫ್ರೂಟ್ ಬಂಧನವೇಕೆ?ದಾವೂದ್ ಗ್ಯಾಂಗಿನ ರಿಯಾಜ್ ಭಾಟಿ, ಸಲೀಂ ಫ್ರೂಟ್ ಬಂಧನವೇಕೆ?

ಇಬ್ಬರು ಸದಸ್ಯರ ಪಾಕಿಸ್ತಾನದ ನಿಯೋಗದ ನೇತೃತ್ವದ ಅಧಿಕಾರಿ, ಊಟದ ವ್ಯವಸ್ಥೆ ಮಾಡಲಾದ ಡೈನಿಂಗ್ ಹಾಲ್‌ನಲ್ಲೇ ಉಳಿದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಬಗ್ಗೆ ಘೋಷಿಸುತ್ತಿದ್ದಂತೆ ಪಾಕಿಸ್ತಾನದ ಈ ಅಧಿಕಾರಿಗಳು ವೇದಿಕೆಯನ್ನು ಪ್ರವೇಶಿಸಿದರು.

Pakistan FIA Chief Mohsin Butt Silent after India Ask to hand over Dawood Ibrahim, Hafiz Saeed

ಪಾಕಿಸ್ತಾನ ಅಧಿಕಾರಿ ಮೇಲೆ ಪ್ರಶ್ನೆಗಳ ಸುರಿಮಳೆ:

ಪ್ರಧಾನಿ ಮೋದಿಯವರ ಭಾಷಣ ಮುಗಿದ ನಂತರ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟ 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂನ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಬಯಸಿದ ವರದಿಗಾರರು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮುಖ್ಯಸ್ಥ ಮೊಹ್ಸಿನ್ ಬಟ್ ಅನ್ನು ಸುತ್ತುವರಿದರು.

ಭಾರತಕ್ಕೆ ಬೇಕಾಗಿರುವ ಜೈಶ್-ಎ-ಮುಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು 9/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರಂತಹ ಇತರ ಭಯೋತ್ಪಾದಕರನ್ನು ಯಾವಾಗ ಹಸ್ತಾಂತರಿಸುತ್ತೀರಿ ಎಂದು ಪ್ರಶ್ನೆ ಮಾಡಲಾಯಿತು.

ಮೌನಕ್ಕೆ ಜಾರಿದ ಪಾಕಿಸ್ತಾನದ ಅಧಿಕಾರಿ ಬಟ್:

ಭಾರತಕ್ಕೆ ಭಯೋತ್ಪಾದಕರ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮುಖ್ಯಸ್ಥ ಮೊಹ್ಸಿನ್ ಬಟ್ ಮೇಲೆ ಪ್ರಶ್ನೆಗಳ ಸುರಿಮಳೆಗೈದರು. ಆದರೆ ಇದೆಲ್ಲದಕ್ಕೂ ಯಾವುದೇ ರೀತಿ ಪ್ರತಿಕ್ರಿಯೆ ನೀಡದ ಬಟ್, ಮೌನವಾಗಿ ಅಲ್ಲಿಂದ ಜಾರಿಕೊಂಡರು. ಈ ಮಧ್ಯೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ಆಗಿ ತುಟಿಗಳ ಮೇಲೆ ಬೆರಳು ಇಟ್ಟುಕೊಂಡು ಮೌನದ ಚಿಹ್ನೆಯನ್ನು ತೋರಿದರು.

ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಭಯೋತ್ಪಾದಕರು:

2022ರ ಜುಲೈನಲ್ಲಿ ಇಂಟರ್‌ಪೋಲ್‌ನೊಂದಿಗೆ ಸಮನ್ವಯಗೊಳಿಸಲು ಪಾಕಿಸ್ತಾನದ ರಾಷ್ಟ್ರೀಯ ಕೇಂದ್ರ ಬ್ಯೂರೋ ಆಗಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ) ಮಹಾನಿರ್ದೇಶಕರಾಗಿ ಮೊಹ್ಸಿನ್ ಬಟ್ ಅನ್ನು ನೇಮಿಸಲಾಗಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆಪಾದಿತ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಇಬ್ಬರೂ ಭಾರತೀಯ ಭದ್ರತಾ ಏಜೆನ್ಸಿಗಳಿಂದ ಭಯೋತ್ಪಾದಕರು 'ಮೋಸ್ಟ್ ವಾಂಟೆಡ್' ಎಂದು ಗುರುತಿಸಲ್ಪಟ್ಟಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

English summary
Chief of Pakistan's Federal Investigation Agency Mohsin Butt Silent after India Ask to hand over Dawood Ibrahim, Hafiz Saeed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X