ಭಾರತದ ಗಡಿ ಪ್ರವೇಶಿಸಿದ ಪಾಕಿಸ್ತಾನ ಡ್ರೋನ್: ಬಿಎಸ್‌ಎಫ್‌ನಿಂದ ತಕ್ಕಪಾಠ
ಅಮೃತಸರ ನವೆಂಬರ್ 29: ಪಾಕಿಸ್ತಾನ ಡ್ರೋನ್‌ವೊಂದು ಭಾರತದ ಗಡಿಯನ್ನು ಪ್ರವೇಶಿಸಿದ್ದು ಅಮೃತಸರದಲ್ಲಿ ಪತ್ತೆಯಾಗಿರುವುದು ತಿಳಿದು ಬಂದಿದೆ. ಗಡಿಯಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇದನ್ನು ನಾಶಪಡಿಸಿದೆ. ಬಿಎಸ್‌ಎಫ್ "ಸೋಮವಾರ ಭಾರತ-ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ ಸಿಬ್ಬಂದಿ ಅಮೃತಸರದ ಚಹರ್‌ಪುರ ಬಳಿ ಶಂಕಿತ ಡ್ರೋನ್ ಅನ್ನು ಪತ್ತೆ ಮಾಡಿಡಿದ್ದು ಅದನ್ನು ಹೊಡೆದುರುಳಿಸಿದ್ದಾರೆ. ಇದರಿಂದಾಗಿ ಪಾಕ್ ಭಯೋತ್ಪಾದಕರು ಇಡೀ ಪ್ರದೇಶವನ್ನು ಸುತ್ತುವರೆದಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಎಚ್ಚರಿಕೆ ವಹಿಸಲು ಪೊಲೀಸರು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ರವಾನಿಸಲಾಗಿದೆ.
ಬಿಎಸ್ಎಫ್ ತಂಡ 1 ಹೆಕ್ಸಾಕಾಪ್ಟರ್ ಅನ್ನು ಬಿಳಿ ಬಣ್ಣದ ಪಾಲಿಥಿನ್‌ನಲ್ಲಿನ ಅನುಮಾನಾಸ್ಪದ ವಸ್ತುಗಳೊಂದಿಗೆ ಭಾಗಶಃ ಹಾನಿಗೊಳಗಾದ ಸ್ಥಿತಿಯಲ್ಲಿ ವಶಪಡಿಸಿಕೊಂಡಿದೆ. ಚಹರ್‌ಪುರ ಗಡಿ ಬೇಲಿ ಬಳಿಯ ಕೃಷಿ ಹೊಲದಲ್ಲಿ ಅನುಮಾನಾಸ್ಪದವಾಗಿ ಈ ವಸ್ತು ಪತ್ತೆಯಾಗಿತ್ತು.

ವರದಿಯ ಪ್ರಕಾರ, ಗಡಿಯಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬ್ಬಂದಿ ಅಮೃತಸರದ ಚಹರ್‌ಪುರದ ಬಳಿ ಪಾಕಿಸ್ತಾನದಿಂದ ಭಾರತದ ಕಡೆಗೆ ಪ್ರವೇಶಿಸುವ ಶಂಕಿತ ಡ್ರೋನ್‌ನ ಸದ್ದು ಕೇಳಿದೆ. ಅದರ ನಂತರ ಯೋಧರು ಗುಂಡು ಹಾರಿಸುವ ಮೂಲಕ ಶಂಕಿತ ಡ್ರೋನ್ ಅನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಬುಲೆಟ್ ಡ್ರೋನ್‌ಗೆ ತಗುಲಿದೆ. ಅದು ನೆಲದ ಮೇಲೆ ಬಿದ್ದಿದೆ.
Amritsar, Punjab | Further, BSF recovered 1 Hexacopter in partial damaged condition along with suspected item in white colour polyethene attached underneath lying in a farming field on own side of border fencing near Village - Chaharpur: PRO BSF
— ANI (@ANI) November 29, 2022
ಇದಕ್ಕೆ ಕೇವಲ ಎರಡು ದಿನಗಳ ಮೊದಲು(ನವೆಂಬರ್ 26 ರಂದು) ಪಂಜಾಬ್‌ನ ಅಮೃತಸರದಲ್ಲಿರುವ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿತು. ಶುಕ್ರವಾರ ಸಂಜೆ 7:45 ರ ಸುಮಾರಿಗೆ ಅಮೃತಸರ ನಗರದ ನೈರುತ್ಯಕ್ಕೆ 34 ಕಿಮೀ ದೂರದಲ್ಲಿರುವ ದಾವೋಕ್ ಗ್ರಾಮದ ಬಳಿ ಬಿಎಸ್‌ಎಫ್ ಪಡೆಗಳು ಭಾರತದ ಭೂಪ್ರದೇಶಕ್ಕೆ ಒಳನುಗ್ಗುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿದರು. ವರದಿಯ ಪ್ರಕಾರ, ಯೋಧರು ಗುಂಡು ಹಾರಿಸುವ ಮೂಲಕ ಶಂಕಿತ ಡ್ರೋನ್ ಅನ್ನು ತಡೆಯಲು ಪ್ರಯತ್ನಿಸಿದರು. ಡ್ರೋನ್ ಅನ್ನು ಹೊಡೆದುರುಳಿಸಲು ಬಿಎಸ್‌ಎಫ್ ತನ್ನ ಐಎನ್‌ಎಸ್‌ಎಎಸ್ ರೈಫಲ್‌ನಿಂದ ಆರು ಸುತ್ತು ಗುಂಡು ಹಾರಿಸಿತು.












Click it and Unblock the Notifications