ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಕ್ಷಿತ ಸ್ಥಳಕ್ಕಾಗಿ ಹುಡುಕುತ್ತಿದ್ದರೇ ಪಾಕ್ ದುರುಳರು?

By ವಿಕ್ಕಿ ನಂಜಪ್ಪ
|
Google Oneindia Kannada News

ಪೋರಬಂದರ್(ಗುಜರಾತ್) ಜ. 2: ಸ್ವತಃ ಸ್ಫೋಟಿಸಿಕೊಂಡ ಪಾಕಿಸ್ತಾನ ಬೋಟ್‌ನಲ್ಲಿದ್ದ ನಾಲ್ವರು ಶಂಕಿತ ಭಯೋತ್ಪಾದಕರು ಸ್ಥಳಾನ್ವೇಷಣೆಯಲ್ಲಿ ತೊಡಗಿದ್ದರು ಎಂದು ಇಂಟೆಲಿಜೆನ್ಸ್ ಬ್ಯೂರೊ ಶಂಕೆ ವ್ಯಕ್ತಪಡಿಸಿದೆ.

ಈ ನಾಲ್ವರೂ ಭಾರತದ ಕೋಸ್ಟ್ ಗಾರ್ಡ್ ಪಡೆ ಎದುರಾದ ತಕ್ಷಣ ತಮ್ಮಲ್ಲಿದ್ದ ಶಸ್ತ್ರಗಳನ್ನು ಕೆಳಹಾಕಲು ಯತ್ನಿಸುತ್ತಿದ್ದರು. ಇದು ಅವರು ಭವಿಷ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದರು ಎಂಬುದಕ್ಕೆ ಸಾಕ್ಷಿ ಎಂದು ಐಬಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. [ಪಾಕಿಸ್ತಾನದ ಬೋಟ್ ಸ್ಫೋಟ]

boat

ಮೊದಲೇ ಮಾಹಿತಿ ಬಂದಿತ್ತು : ಆದರೆ, ಇಂತಹ ಸಂಭವನೀಯ ದಾಳಿಯ ಕುರಿತು 2014ರ ನವೆಂಬರ್ ತಿಂಗಳಿನಲ್ಲಿಯೇ ಗೂಢಚರ ಏಜೆನ್ಸಿಗಳು ಎಚ್ಚರಿಕೆ ನೀಡಿದ್ದವು. ಭಯೋತ್ಪಾದಕರು ಕೋಲ್ಕೊತಾ ಬಂದರು ಪ್ರದೇಶದ ಮೇಲೆ ದಾಳಿ ನಡೆಸಲು ಯೋಜಿಸಿದ್ದಾರೆ. ಭಾರತದ ಬಂದರು ಪ್ರದೇಶಗಳ ಮೇಲೆ ದಾಳಿ ನಡೆಸಲು ಚಿಕ್ಕ ಬೋಟ್‌ಗಳನ್ನು ಉಪಯೋಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. [ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?]

ಅದೇ ತಿಂಗಳಲ್ಲಿ ಬಂದಿದ್ದ ಮತ್ತೊಂದು ಮಾಹಿತಿ ಪಾಕಿಸ್ತಾನದ ನೌಕಾದಳವು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರಿಗೆ ಭಾರತದ ಮೇಲೆ ದಾಳಿ ನಡೆಸಲು ಸಹಾಯ ಮಾಡುತ್ತಿದೆ ಎಂದು ಎಚ್ಚರಿಸಿತ್ತು. ಪಾಕಿಸ್ತಾನ ನೌಕಾಪಡೆಯ ಮಾಜಿ ಅಧಿಕಾರಿಗಳು ಹಲವು ಲಷ್ಕರ್ ಉಗ್ರರಿಗೆ ತರಬೇತಿ ನೀಡುತ್ತಿದ್ದಾರೆ. ಉಗ್ರರು ಭಾರತದ ಮೇಲೆ ಸಮುದ್ರದ ಮೂಲಕ ದಾಳಿ ನಡೆಸಿ ಮತ್ತೊಂದು 26/11 ರೀತಿಯ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬುದು ಮಾಹಿತಿಯ ಸಾರಾಂಶವಾಗಿತ್ತು. ಆದ್ದರಿಂದ ಎಲ್ಲ ಬಂದರುಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

English summary
Intelligence Bureau sources says that four persons who blew themselves up on the Pakistan boat were on a possible reconnaissance mission. They tried to drop off arms and this indicates that they were planning a terror strike in the days to come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X