Darshanam Mogilaiah: ಬದುಕು ಕಟ್ಟಲು ಕಟ್ಟಡ ಕಾರ್ಮಿಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದರ್ಶನಂ ಮೊಗಿಲಯ್ಯ!
ಹೈದರಾಬಾದ್, ಮೇ. 03 : ಪದ್ಮಶ್ರೀ ಪುರಸ್ಕೃತರಾದ ದರ್ಶನಂ ಮೊಗಿಲಯ್ಯ ಅವರು ಅಪರೂಪದ ಸಂಗೀತ ವಾದ್ಯ 'ಕಿನ್ನೆರ'ಕ್ಕೆ ಮರುಜೀವ ಕೊಟ್ಟವರು. ಕಿನ್ನೆರಗೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು, ಈಗ ಹೈದ್ರಾಬಾದ್ ಬಳಿಯಲ್ಲಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ.
ಹೌದು... 2022 ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಕಿನ್ನೆರ ಮೊಗಿಲಯ್ಯ ಎಂದೇ ಖ್ಯಾತರಾದ ದರ್ಶನಂ ಮೊಗಿಲಯ್ಯ ಅವರಿಗೆ ಕಳೆದ ಐದು ತಿಂಗಳಿನಿಂದ ರಾಜ್ಯ ಸರ್ಕಾರದಿಂದ ಮಾಸಿಕ ರೂ 10,000 ಪಿಂಚಣಿ ಬರುತ್ತಿಲ್ಲ ಎಂದು ದೂರಿದ್ದಾರೆ. ಇದರಿಂದಾಗಿ ಅವರು ತೀವ್ರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಕ್ಕಳ ಮದುವೆ, ಸೈಟ್ ಕೊಳ್ಳಲು ಹಣ ಖರ್ಚು
73 ವರ್ಷದ ಕಲಾವಿದ ಕಿನ್ನೇರ ಮೊಗಿಲಯ್ಯ ಅವರು ತೆಲಂಗಾಣ ಸರ್ಕಾರದಿಂದ ಪಡೆದ 1 ಕೋಟಿ ಹಣವನ್ನು ಕುಟುಂಬದ ತುರ್ತು ಪರಿಸ್ಥಿತಿಗಳಿಗೆ ಖರ್ಚು ಮಾಡಿದ್ದಾರೆ. "ನಾನು ಆ ಹಣವನ್ನು (1 ಕೋಟಿ ರಾಜ್ಯ ಅನುದಾನ) ನನ್ನ ಮಕ್ಕಳ ಮದುವೆಗೆ ಬಳಸಿದ್ದೇನೆ. ನಾನು ಹೈದರಾಬಾದ್‌ನ ಹೊರವಲಯದಲ್ಲಿರುವ ತುರ್ಕಯಂಜಲ್‌ನಲ್ಲಿ ಒಂದು ತುಂಡು ಭೂಮಿಯನ್ನು ಸಹ ಖರೀದಿಸಿದೆ. ನಾನು ಮನೆ ನಿರ್ಮಿಸಲು ಪ್ರಾರಂಭಿಸಿದೆ ಆದರೆ ನನ್ನ ಹಣದ ಕೊರತೆಯಿಂದಾಗಿ ಮಧ್ಯದಲ್ಲಿ ನಿಲ್ಲಿಸಬೇಕಾಯಿತು" ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಹೈದರಾಬಾದ್‌ನ ಎಲ್‌ಬಿ ನಗರದಲ್ಲಿ 600 ಗಜ ಮನೆ ನಿವೇಶನ ನೀಡುವುದಾಗಿ ಬಿಆರ್‌ಎಸ್ ಸರ್ಕಾರ ಭರವಸೆ ನೀಡಿ ಜಿಒ ಹೊರಡಿಸಿದ್ದರೂ ಇದುವರೆಗೆ ಕಂದಾಯ ಅಧಿಕಾರಿಗಳು ಭೂಮಿಯನ್ನು ನೀಡಿಲ್ಲ. ಮೊಗಿಲಯ್ಯ ಅವರಿಗೆ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಮನೆ ನಿವೇಶನ ನೀಡುವಂತೆ ಅಂದಿನ ಬಿಆರ್‌ಎಸ್ ಶಾಸಕ ಗುವ್ವಾಲ ಬಾಲರಾಜು ಸರ್ಕಾರಕ್ಕೆ ಮನವಿ ಮಾಡಿದ್ದರು.

ಆದರೆ, ಸರಕಾರ ಎಲ್ ಬಿ ನಗರದಲ್ಲಿ ಮಾತ್ರ 600 ಗಜ ನೀಡುವುದಾಗಿ ಹೇಳಿದೆ. "ಕಳೆದ ಒಂದು ವರ್ಷದಿಂದ ನಾನು ಸ್ಥಳೀಯ ಸಾಹಿತಿಗಳ ಸಹಾಯದಿಂದ ರಂಗಾರೆಡ್ಡಿ ಜಿಲ್ಲೆಯ ಸತತ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಆದರೆ, ಅಧಿಕಾರಿಗಳು ಇನ್ನೂ ಭೂಮಿಯನ್ನು ಒದಗಿಸಿಲ್ಲ" ಎಂದು ದರ್ಶನಂ ಮೊಗಿಲಯ್ಯ ಹೇಳಿದ್ದಾರೆ.
"ನನ್ನ ಮಗ ಮೂರ್ಛೆಯಿಂದ ಮಾತನಾಡಲು ಸಾಧ್ಯವಾಗದೆ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದಾಗ, ಆಗಿನ ಸರ್ಕಾರಿ ಸಲಹೆಗಾರ ಕೆ.ವಿ. ರಮಣಾಚಾರಿ ಅವರು ಎರಡು ಲಕ್ಷ ರೂ. ನೀಡಿದರು. ನಂತರ ನಾನು ಆಸ್ಪತ್ರೆಯ ಶುಲ್ಕವನ್ನು ಪಾವತಿಸಿದ್ದೇನೆ. ನನ್ನ ಒಬ್ಬ ಮಗ ಮೂರ್ಛೆ ರೋಗದಿಂದದ ಬಳಲುತ್ತಿದ್ದಾನೆ. ನನಗೆ ಮಧುಮೇಹವಿದೆ. ನಮ್ಮಿಬ್ಬರಿಗೆ ಔಷಧಿ ಖರೀದಿಸಲು ತಿಂಗಳಿಗೆ ಕನಿಷ್ಠ 12,000 ರೂಪಾಯಿ ಬೇಕಾಗುತ್ತದೆ" ಎಂದಿದ್ದಾರೆ.
ಹಿರಿಯ ಪತ್ರಕರ್ತೆ ಸುಚೇತಾ ದಲಾಲ್ ಅವರು ಪದ್ಮಶ್ರೀ ಪುರಸ್ಕೃತರ ಕಥೆಯನ್ನು ಹೈಲೈಟ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇನ್ನು, ರ್ಚ್ 31 ರ ಪಿಂಚಣಿಯನ್ನು ತಮ್ಮ ಖಾತೆಗೆ ಜಮಾ ಮಾಡಲಾಗಿದೆ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ತಳ್ಳಿಹಾಕಿದ್ದು, "ನಾನು ಮಾಸಿಕ ಪಿಂಚಣಿ ಪಡೆಯುತ್ತಿಲ್ಲ, ಅದನ್ನು ಸಾಬೀತುಪಡಿಸಲು ನಾನು ಸಿದ್ಧನಿದ್ದೇನೆ" ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Heart Breaking: Padma Shri Awardee Mogulaiah Now a Daily Wager.
— Sudhakar Udumula (@sudhakarudumula) May 3, 2024
He says his monthly honorarium stopped, and although all respond positively, they do nothing.
Mogulaiah was seen working at a construction site in Turkayamanjal near Hyderabad.
Darshanam Mogulaiah was honoured… pic.twitter.com/Zru4If7h0x
ಭಾರತ್ ರಾಷ್ಟ್ರ ಸಮಿತಿ (BRS) ನಾಯಕ ಕೆಟಿ ರಾಮರಾವ್ ಅವರು ಸುಚೇತಾ ದಲಾಲ್ ಪೋಸ್ಟ್ ಅನ್ನು ಗಮನಿಸಿ ಪ್ರತಿಕ್ರಿಯಿಸಿದ್ದಾರೆ. "ಧನ್ಯವಾದಗಳು, ಈ ಸುದ್ದಿಯನ್ನು ನನ್ನ ಗಮನಕ್ಕೆ ತಂದಿದ್ದಕ್ಕಾಗಿ ಸುಚೇತಾ ಜೀ... ನಾನು ಮೊಗುಲಿಯಾ ಅವರ ಕುಟುಂಬವನ್ನು ವೈಯಕ್ತಿಕವಾಗಿ ನೋಡಿಕೊಳ್ಳುತ್ತೇನೆ. ನನ್ನ ತಂಡ ಅವರನ್ನು ತಕ್ಷಣವೇ ತಲುಪುತ್ತದೆ" ಎಂದಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications