ರಾಜ್ಯದ ಯು. ಆರ್ ರಾವ್ ಸೇರಿದಂತೆ ಎಂಟು ಸಾಧಕರಿಗೆ ಪದ್ಮ ಪ್ರಶಸ್ತಿ

Posted By:
Subscribe to Oneindia Kannada

ನವದೆಹಲಿ, ಜನವರಿ 25: ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಒಟ್ಟು 89 ಸಾಧಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕದಿಂದ ವಿಜ್ಞಾನಿ ಯು. ಆರ್ ರಾವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಎಂಟು ಮಂದಿಗೆ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೇರಳ ಮೂಲದ ಶಾಸ್ತ್ರ್ರೀಯ ಗಾಯಕ ಕೆ ಜೆ ಯೇಸುದಾಸ್ ಸೇರಿದಂತೆ ಏಳು ಮಂದಿ ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗುತ್ತಿದೆ.

Padma awards 2017 full list

ಎಲೆಮರೆಯ ಸಾಧಕರು'(unsung heroes) ಎಂಬ ವಿಭಾಗದಿಂದ ಪದ್ಮ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಮೂಲಕ ಜನಪ್ರಿಯತೆಯಿಂದ ದೂರವುಳಿದಿರುವ ಸಾಧಕರನ್ನು ಗುರುತಿಸಲು ಆಯ್ಕೆ ಸಮಿತಿ ಮುಂದಾಗಿದೆ. ಈ ವಿಭಾಗದಿಂದ ಕರ್ನಾಟಕದ ಹಾಲಕ್ಕಿ ಒಕ್ಕಲಿಗ ಸಮುದಾಯದ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಪದ್ಮವಿಭೂಷಣ :
* ಉಡುಪಿ ರಾಮಚಂದ್ರ ರಾವ್ -ವಿಜ್ಞಾನ ಮತ್ತು ಇಂಜಿನಿಯರಿಂಗ್
ಪದ್ಮಶ್ರೀ:
* ಭಾರತಿ ವಿಷ್ಣುವರ್ಧನ್- ಕಲೆ ಹಾಗೂ ಸಂಗೀತ
* ಸುಕ್ರಿ ಬೊಮ್ಮಗೌಡ-ಕಲೆ ಹಾಗೂ ಸಂಗೀತ
* ಪ್ರೊ.ಜಿ ವೆಂಕಟಸುಬ್ಬಯ್ಯ- ಸಾಹಿತ್ಯ ಮತ್ತು ಶಿಕ್ಷಣ
* ಗಿರೀಶ್ ಭಾರದ್ವಾಜ್- ಸಾಮಾಜಿಕ ಸೇವೆ
* ಶೇಖರ್ ನಾಯ್ಕ್-ಕ್ರೀಡೆ-ಕ್ರಿಕೆಟ್
* ವಿಕಾಸ್ ಗೌಡ-ಕ್ರೀಡೆ-ಡಿಸ್ಕಸ್ ಥ್ರೋ
* ಸಂಸ್ಕೃತ ವಿದ್ವಾಂಸ ಚ.ಮೂ. ಕೃಷ್ಣಶಾಸ್ತ್ರಿ, ಸಾಹಿತ್ಯ ಮತ್ತು ಶಿಕ್ಷಣ
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Padma awards 2017 full list :This year the President of India has approved conferment of Padma Awards to 89 persons. The list of awardees from Karnataka includes Padma Vibhushan for UR Rao and 7 Padma Shri Awardees.
Please Wait while comments are loading...