ಹೊಸವರ್ಷದ ಮೊದಲ ರಾತ್ರಿ ದಾಖಲೆ ಮಟ್ಟದಲ್ಲಿ OYO ಬುಕ್ಕಿಂಗ್: ಸೇಲ್ ಆದ ಕಾಂಡೋಮ್ಸ್ ಎಷ್ಟು ಗೊತ್ತಾ?
ನಾವು 2023ರನ್ನು ಮುಗಿಸಿ 2024ಕ್ಕೆ ಕಾಲಿಟ್ಟಿದ್ದೇವೆ. ಅದರಲ್ಲೂ ಹೊಸವರ್ಷದ ಮೊದಲ ರಾತ್ರಿಯಂತೂ ಎಲ್ಲೆಡೆ ಸಂಭ್ರಾಮಾಚರಣೆ ಜೋರಾಗಿಯೇ ಇತ್ತು. ಮತ್ತೊಂದೆಡೆ ಲಾಡ್ಜ್, ಪಬ್, ರೆಸ್ಟೋರೆಂಟ್‌ಗಳೆಲ್ಲವೂ ಕೂಡ ಎಲ್ಲಾ ಬುಕ್ ಆಗಿದ್ದವು. ಆದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಕೇಳಬೇಕಾ. ಅಂದೇ ರಾತ್ರಿ ಓಯೋ ದಾಖಲೆ ಮಟ್ಟದಲ್ಲಿ ಆರ್ಡರ್ ಆಗಿದ್ದವು. ಇನ್ನೂ ಈ ಒಂದೇ ರಾತ್ರಿ ಕಾಂಡೋಮ್ಸ್‌ಗಳು ಎಷ್ಟು ಸೇಲ್ ಆಗಿದ್ದವು ಗೊತ್ತಾ ಇಲ್ಲಿದೆ ಮಾಹಿತಿ.
ಹೊಸ ವರ್ಷದ ಮುನ್ನಾದಿನ ಅಂದರೆ ಡಿಸೆಂಬರ್ 31ರ ಒಂದೇ ರಾತ್ರಿ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಓಯೋ ಆರ್ಡರ್ ಆಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

2024ರ ಹೊಸ ವರ್ಷದಂದು ಅಂದರೆ ಡಿಸೆಂಬರ್ 31, 2023ರ ರಾತ್ರಿ ಒಂದೇ ದಿನ ಜೊಮಾಟೊ, ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆಹಾರ ಆರ್ಡರ್ ಮಾಡಿದರೆ, ಇನ್ನು ಒಯೋ ರೂಮ್‌ಗಳನ್ನು ಕೂಡ ಅದೇ ರೀತಿಯಲ್ಲಿ ಅತೀ ಹೆಚ್ಚಾಗಿ ಬುಕ್ ಮಾಡಿದ್ದಾರೆ. ಮತ್ತು ಫುಡ್ ಡೆಲಿವರಿ ಕಂಪನಿ ಝೊಮೆಟೋದಲ್ಲಿಯೂ ಕೂಡ ಡಿಸೆಂಬರ್ 31, 2023 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಆರ್ಡರ್‌ಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಜೊಮ್ಯಾಟೊ ಐದು ವರ್ಷಗಳ (2015-2020 ವರ್ಷದ ಆರ್ಡರ್‌ಗಳು) ದಾಖಲೆಯನ್ನು 2024ರ ಹೊಸ ವರ್ಷದ ಮುನ್ನಾದಿನವೇ ಮಾಡಿದೆ. 3.2 ಲಕ್ಷಕ್ಕೂ ಹೆಚ್ಚು ವಿತರಣಾ ಪಾಲುದಾರರು ಆರ್ಡರ್‌ಗಳನ್ನು ಸ್ವೀಕರಿಸಿ ವಿತರಿಸಿದ್ದಾರೆ ಮತ್ತು ಹೆಚ್ಚಿನ ಆರ್ಡರ್‌ಗಳನ್ನು ಮಹಾರಾಷ್ಟ್ರದಿಂದ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಂಕಿಅಂಶಗಳ ಪ್ರಕಾರ, 125 ಐಟಂಗಳನ್ನು ಲಭ್ಯವಿದ್ದು, ಹೊಸ ವರ್ಷದ ಮುನ್ನಾದಿನದಂದು ಕೋಲ್ಕತ್ತಾದಲ್ಲಿ ಜನರು ಜೊಮ್ಯಾಟೊ ಒಟ್ಟು 97 ಲಕ್ಷ ರೂಪಾಯಿ ಮೊತ್ತದ ಐಟಂಗಳನ್ನು ಖರೀದಿಸಿದ್ದಾರೆ. ಜನರು 1.47 ಲಕ್ಷ ಚಿಪ್ಸ್ ಪ್ಯಾಕೆಟ್‌ಗಳು, 68,231 ಸೋಡಾ ಬಾಟಲಿಗಳು, 2,412 ಪ್ಯಾಕೆಟ್ ಐಸ್ ಕ್ಯೂಬ್‌ಗಳು ಮತ್ತು 356 ಲೈಟರ್‌ಗಳನ್ನು ಆರ್ಡರ್ ಮಾಡಿದ್ದಾರೆ.
ಅದೇ ರೀತಿ ಜನರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಎರಡು ಲಕ್ಷ ಕಿಲೋ ಈರುಳ್ಳಿ ಮತ್ತು 1.80 ಲಕ್ಷ ಕಿಲೋ ಆಲೂಗಡ್ಡೆ ಆರ್ಡರ್ ಮಾಡಿದ್ದಾರೆ. ಇನ್ನೂ ಕೂಡ ಮಿಕ್ಸರ್‌ಗಳು ಮತ್ತು ಗ್ಲಾಸ್‌ಗಳು ಸೇರಿದಂತೆ ಇನ್ನಿತರ ಐಟಂಗಳ ಹುಡುಕಾಟವು ಹತ್ತು ಪಟ್ಟು ಹೆಚ್ಚಾಗಿದೆ. 1.04 ಲಕ್ಷ ಜನರು ಇತರರಿಗೆ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿಸಿದೆ.
ಹೋಟೆಲ್ ಬುಕಿಂಗ್‌ಗೆ ಸಂಬಂಧಿಸಿದಂತೆ, 2023ರ ಹೊಸ ವರ್ಷದ ಮುನ್ನಾದಿನದಂದು OYO ರೂಮ್‌ಗಳ ಬುಕಿಂಗ್‌ಗಳು ಶೇಕಡಾ 37 ರಿಂದ 6.2 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೆ ಡಿಸೆಂಬರ್ 30 ಮತ್ತು 31ರ ನಡುವೆ ಕೊನೆಯ ನಿಮಿಷದಲ್ಲಿ 2.3 ಲಕ್ಷ ಬುಕ್ಕಿಂಗ್‌ಗಳು ಆಗಿದ್ದು, ಇದು ದಾಖಲೆ ಆಗಿದೆ.
ಅದರಲ್ಲೂ ದೇಶದ ಕೆಲವು ಯಾತ್ರಾ ಸ್ಥಳಗಳಲ್ಲಿ ಹೆಚ್ಚು ಹೋಟೆಲ್ ರೂಂ ಬುಕಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆಯಲ್ಲಿ ಬುಕಿಂಗ್‌ನಲ್ಲಿ ಶೇಕಡಾ 70ರಷ್ಟು ಏರಿಕೆಯಾಗಿದೆ. ಗೋವಾದಲ್ಲಿ ಶೇಕಡಾ 50ರಷ್ಟು ಮತ್ತು ನೈನಿತಾಲ್‌ನಲ್ಲಿ ಶೇಕಡಾ 60ರಷ್ಟು ಏರಿಕೆಯಾಗಿದೆ.
97 ಲಕ್ಷ ರೂಪಾಯಿ ಟಿಪ್ಸ್: ಇನ್ನು ಫುಡ್ ಡೆಲಿವರಿ ಕಂಪನಿ ಝೊಮೆಟೋದಲ್ಲಿ ಡಿಸೆಂಬರ್ 31, 2023ರ ರಾತ್ರಿ ಅಂದರೆ 2024ರ ಹೊಸವರ್ಷದ ಒಂದೇ ದಿನದಲ್ಲಿ ಅತಿ ಹೆಚ್ಚು ಆರ್ಡರ್‌ಗಳನ್ನು ಮಾಡಲಾಗಿತ್ತು. ಜನರು ಹೊಸ ವರ್ಷದ ದಿನದಂದು ಅತಿ ಹೆಚ್ಚು ಟಿಪ್ಸ್ ನೀಡಿದ್ದು, ಇದು ಕೂಡ ದಾಖಲೆಯಾಗಿದೆ. ಝೊಮಾಟೊ ಸಿಇಒ ಗೋಯಲ್ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಅಂಕಿಅಂಶವನ್ನು ಹಂಚಿಕೊಂಡಿದ್ದಾರೆ.
Love you, India! You’ve tipped over ₹97 lakhs till now to the delivery partners serving you tonight ❤️❤️❤️
— Deepinder Goyal (@deepigoyal) December 31, 2023
"ಹೊಸ ವರ್ಷದ ಮುನ್ನಾದಿನದಂದು ಭಾರತೀಯರು ಡೆಲಿವರಿ ಬಾಯ್ಸ್‌ಗೆ ಅತೀ ಹೆಚ್ಚು ಟಿಪ್ಸ್ ನೀಡಿದ್ದಾರೆ. ಒಟ್ಟು 97 ಲಕ್ಷ ರೂಪಾಯಿ ಟಿಪ್ಸ್ ಆಗಿ ಸಂಗ್ರಹ ಆಗಿದೆ. ಲವ್ ಯು, ಇಂಡಿಯಾ' ಇಂದು ರಾತ್ರಿ ನಿಮಗೆ ಸೇವೆ ಸಲ್ಲಿಸುತ್ತಿರುವ ವಿತರಣಾ ಪಾಲುದಾರರಿಗೆ ನೀವು ಇಲ್ಲಿಯವರೆಗೆ ₹97 ಲಕ್ಷಗಳನ್ನು ಟಿಪ್ ಮಾಡಿದ್ದೀರಿ" ಎಂದು ಅವರು ತಮ್ಮ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹೊಸವರ್ಷದ ಮೊದಲ ರಾತ್ರಿಯಂದೇ ಇಷ್ಟು ಪ್ರಮಾಣದಲ್ಲಿ ಒಯೋ ಬುಕ್ಕಿಂಗ್ ಆಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.












Click it and Unblock the Notifications