ಹಿಮಾಚಲ ಪ್ರದೇಶದಲ್ಲಿ ಬಹಿರಂಗ ಪ್ರಚಾರ ಅಂತ್ಯ, ಕಣದಲ್ಲಿ 338 ಅಭ್ಯರ್ಥಿಗಳು

Subscribe to Oneindia Kannada

ಶಿಮ್ಲಾ, ನವೆಂಬರ್ 7: ಇಂದು ಸಂಜೆ 5 ಗಂಟೆಗೆ ಹಿಮಾಚಲ ಪ್ರದೇಶದಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಇನ್ನೇನಿದ್ದರೂ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಬಹುದಾಗಿದೆ.

ಗುಜರಾತ್ ನಲ್ಲಿ ಮನೆ ಮನೆ ಪ್ರಚಾರ ಅಭಿಯಾನಕ್ಕೆ ಶಾ ಚಾಲನೆ

ಇದೀಗ ಸ್ಪರ್ಧಾ ಕಣದಲ್ಲಿ 338 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ 19 ಮಹಿಳಾ ಅಭ್ಯರ್ಥಿಗಳೂ ಸೇರಿದ್ದಾರೆ. ಧರ್ಮಶಾಲಾದಲ್ಲಿ ಅತೀ ಹೆಚ್ಚಿನ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಝಂಡುಟಾ ಮೀಸಲು ಕ್ಷೇತ್ರದಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Outdoor campaign ends in Himachal Pradesh

ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಇನ್ನು 112 ಪಕ್ಷೇತರ ಅಭ್ಯರ್ಥಿಗಳೂ ಸ್ಪರ್ಧೆಯಲ್ಲಿದ್ದಾರೆ. ಬಿಎಸ್ಪಿ 42, ಸಿಪಿಐಎಂ 14, ಸಿಪಿಐ 3, ಎಸ್ಪಿ ಮತ್ತು ಎನ್ಸಿಪಿ ತಲಾ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ನವೆಂಬರ್ 9ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು ಒಟ್ಟು 50.2 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಇವರಲ್ಲಿ 25.68 ಪುರುಷ ಮತದಾರರು ಹಾಗೂ 24.57 ಮಹಿಳಾ ಮತದಾರರು ಸೇರಿದ್ದಾರೆ.

ಮತದಾನಕ್ಕಾಗಿ ಒಟ್ಟು 7,525 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Himachal Pradesh public campaign ended at 5 pm today. Anyway, candidates can campaign house to house.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ