ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಂಸತ್ತಿನಲ್ಲಿ ಕಿಡಿಕಾರಿದ ಕಾಂಗ್ರೆಸ್

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 27: ಭಾರತದ ಸಂವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್, ಜಾತ್ಯಾತೀತ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ವಿರುದ್ಧ ವಿಪಕ್ಷಗಳು ಸಂಸತ್ತಿನ ಒಳಗೂ-ಹೊರಗೂ ಕಿಡಿಕಾರಿವೆ.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿವೆ.

ಹಿಮಾಚಲದ ಸಿಎಂ ಆಗಿ ಜೈರಾಮ್ ಠಾಕೂರ್ ಪ್ರಮಾಣ ವಚನ ಸ್ವೀಕಾರ

ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಮಾತನಾಡಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ ಅವರು ಸಂಸತ್ತಿನಲ್ಲಿ ಇರಲು ಯಾವುದೇ ಅರ್ಹತೆಯಿಲ್ಲ ಎಂದು ಹೇಳಿದರು.

ಜಾತ್ಯಾತೀತರು ಅಪ್ಪ- ಅಮ್ಮನ ರಕ್ತದ ಗುರುತಿಲ್ಲದವರು: ಅನಂತಕುಮಾರ್ ಹೆಗಡೆ

ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿಜಯ್ ಗೋಯಲ್ ಅವರು ಮಾತನಾಡಿ, ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ, ಖಾಸಗಿ ಕಾರ್ಯಕ್ರಮದಲ್ಲಿ ನೀಡ ಹೇಳಿಕೆ ಇದಾಗಿದ್ದು, ಸರ್ಕಾರದ ಹೇಳಿಕೆಯಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ನರೇಂದ್ರ ಮೋದಿ ಕಲಾಪಕ್ಕೆ ಹಾಜರಿರಲಿಲ್ಲ

ನರೇಂದ್ರ ಮೋದಿ ಕಲಾಪಕ್ಕೆ ಹಾಜರಿರಲಿಲ್ಲ

ಸಂಸತ್ತಿನ ಕಲಾಪಕ್ಕೆ ತಪ್ಪದೇ ಹಾಜರಾಗುವ ಪ್ರಧಾನಿ ಮೋದಿ ಅವರು ಇಂದು ಜೈರಾಮ್ ಠಾಕೂರ್ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ತೆರಳಿದ್ದರು. ಹೀಗಾಗಿ ಲೋಕಸಭೆಗೆ ಹಾಜರಿರಲಿಲ್ಲ.

ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿ, ಅನಂತ್ ಕುಮಾರ್ ಹೆಗ್ಡೆ ಅವರು ನೀಡಿದ ಹೇಳಿಕೆಗಳ ಪತ್ರಿಕೆ ಪ್ರತಿಗಳನ್ನು ಪ್ರದರ್ಶಿಸಿದರು.

ರಾಜ್ಯಸಭೆಯಲ್ಲಿ ಗುಲಾಂ ನಬಿ ಅಜಾದ್

ರಾಜ್ಯಸಭೆಯಲ್ಲಿ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ದನಿ ಎತ್ತಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಅವರು, ಸಂಸದರಾಗಿ ಅನಂತ್ ಕುಮಾರ್ ಹೆಗಡೆ ಅವರು ನೀಡಿದ ಹೇಳಿಕೆ ಸಂವಿಧಾನ ವಿರೋಧಿ ಎಂದರು.

ಕಿಡಿಕಾರಿದ ಕಾಂಗ್ರೆಸ್ ನಾಯಕರು

ಗೌರವ್ ಗೊಗಾಯಿ ಹಾಗೂ ಖುಷ್ಬು ಸುಂದರ್ ಪ್ರತಿಕ್ರಿಯೆ ನೀಡಿ, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opposition ruckus today forced the adjournment of Lok Sabha proceedings twice as members of the Congress vociferously raised the issue of union minister Ananthkumar Hegde's controversial remarks on secularism and the Constitution.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ