ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದ ಕಾರ್ಯವೈಖರಿಯ ಸಮೀಕ್ಷೆ: ಅಖಿಲೇಶ್ ಮುಖಕ್ಕೆ ಮಂಗಳಾರತಿ

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಲೋಕಲ್ ಸರ್ಕಲ್ಸ್ ಎನ್ನುವ ಸಂಸ್ಥೆ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ, ಉತ್ತರಪ್ರದೇಶದ ಜನತೆ ಸಿಎಂ ಅಖಿಲೇಶ್ ಯಾದವ್ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

|
Google Oneindia Kannada News

ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರಪ್ರದೇಶದಲ್ಲಿ ನಾಲ್ಕು ಪ್ರಮುಖ ಪಕ್ಷಗಳಾದ ಬಿಜೆಪಿ, ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಾರ್ಟಿಗಳ ನಾಯಕರ ಭರಾಟೆ ಹೇಳತೀರದು.

ಕಳೆದ ಅಕ್ಟೋಬರ್ ನಿಂದ ಮೊನ್ನೆಮೊನ್ನೆಯವರೆಗಿನ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿ ಮತ್ತು ಎಸ್ಪಿ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆಯಾದರೂ, ಆನ್ಲೈನ್ ಸಮೀಕ್ಷೆಯೊಂದರಲ್ಲಿ ಜನ ಸಿಎಂ ಅಖಿಲೇಶ್ ಯಾದವ್ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. (ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕಷ್ಟಕಷ್ಟ)

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಲೋಕಲ್ ಸರ್ಕಲ್ಸ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಲಕ್ಷಕ್ಕೂ ಹೆಚ್ಚು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಪ್ರಮುಖವಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸರಕಾರ ಭ್ರಷ್ಟಾಚಾರ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

'ಕಾಂ ಬೋಲ್ತಾ ಹೇ'(ಕೆಲಸ ಮಾತನಾಡುತ್ತದೆ) ಎಂದು ಜನರ ಬಳಿ ಮತಯಾಚಿಸುತ್ತಿರುವ ಅಖಿಲೇಶ್ ಯಾದವ್ ಗೆ ಸಮೀಕ್ಷೆಯಲ್ಲಿ ಜನ ಮಂಗಳಾರತಿ ಮಾಡಿರುವುದು, ಮುಂದಿನ ಚುನಾವಣೆಯ ಫಲಿತಾಂಶದ ದಿಕ್ಸೂಚಿ ಎಂದೇ ಸಮೀಕ್ಷೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಪಟ್ಟಿದ್ದಾರೆ.

ನೆಲಕಚ್ಚಿದ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಮೀಕ್ಷೆಯ ಇತರ ಅಂಶಗಳು, ಮುಂದೆ ಓದಿ..

 ನೀವು ಮತ್ತು ನಿಮ್ಮ ಕುಟುಂಬ ಉತ್ತರಪ್ರದೇಶದಲ್ಲಿ ಸುರಕ್ಷಿತರೇ?

ನೀವು ಮತ್ತು ನಿಮ್ಮ ಕುಟುಂಬ ಉತ್ತರಪ್ರದೇಶದಲ್ಲಿ ಸುರಕ್ಷಿತರೇ?

ಹೌದು - ಶೇ. 3
ತಕ್ಕಮಟ್ಟಿಗೆ - ಶೇ. 15
ಇಲ್ಲ - ಶೇ. 45
ಇಲ್ಲವೇ ಇಲ್ಲ - ಶೇ. 37

 ಸರಕಾರದ ಯಾವ ಇಲಾಖೆ ಅತ್ಯಂತ ಭ್ರಷ್ಟ?

ಸರಕಾರದ ಯಾವ ಇಲಾಖೆ ಅತ್ಯಂತ ಭ್ರಷ್ಟ?

ರಾಜ್ಯ ತೆರಿಗೆ ಇಲಾಖೆ - ಶೇ. 10
ಪೊಲೀಸ್ ಇಲಾಖೆ - ಶೇ. 37
ಮುದ್ರಣ ಮತ್ತು ನೊಂದಣಿ - ಶೇ. 37
ಮುನ್ಸಿಪಲ್ ಕಚೇರಿ - ಶೇ. 16

 ರಾಜ್ಯದ ಆರೋಗ್ಯ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ?

ರಾಜ್ಯದ ಆರೋಗ್ಯ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ?

ಉತ್ತಮ ಮೂಲಸೌಕರ್ಯ ಮತ್ತು ಸೇವೆ - ಶೇ. 2
ಕಳಪೆ ಮೂಲಸೌಕರ್ಯ ಮತ್ತು ಕಳಪೆ ಸೇವೆ - ಶೇ. 70
ಉತ್ತಮ ಮೂಲಸೌಕರ್ಯ ಮತ್ತು ಕಳಪೆ ಸೇವೆ - ಶೇ. 19
ಕಳಪೆ ಮೂಲಸೌಕರ್ಯ ಮತ್ತು ಉತ್ತಮ ಸೇವೆ - ಶೇ. 9

 ರಾಜ್ಯದಲ್ಲಿ ಉದ್ಯೋಗಾವಕಾಶ ಹೇಗಿದೆ?

ರಾಜ್ಯದಲ್ಲಿ ಉದ್ಯೋಗಾವಕಾಶ ಹೇಗಿದೆ?

ವಿಪುಲ ಉದ್ಯೋಗಾವಕಾಶ - ಶೇ. 9
ನಿಯಮಿತ ಉದ್ಯೋಗಾವಕಾಶ - ಶೇ. 33
ಉದ್ಯೋಗಾವಕಾಶ ಇಲ್ಲವೇ ಇಲ್ಲ - ಶೇ. 58

 ಕಳೆದ 5ವರ್ಷಗಳಲ್ಲಿ ರಾಜ್ಯದ ಮೂಲಭೂತ ಸೌಕರ್ಯದಲ್ಲಿ ಅಭಿವೃದ್ದಿಯಾಗಿದೆಯೇ?

ಕಳೆದ 5ವರ್ಷಗಳಲ್ಲಿ ರಾಜ್ಯದ ಮೂಲಭೂತ ಸೌಕರ್ಯದಲ್ಲಿ ಅಭಿವೃದ್ದಿಯಾಗಿದೆಯೇ?

ತೀರಾ ಹದೆಗೆಟ್ಟಿದೆ - ಶೇ. 20
ಯಾವುದೇ ಬದಲಾವಣೆಯಾಗಿಲ್ಲ - ಶೇ. 22
ಉತ್ತಮ ಬದಲಾವಣೆಯಾಗಿದೆ - ಶೇ. 18
ತಕ್ಕಮಟ್ಟಿನ ಸುಧಾರಣೆಯಾಗಿದೆ - ಶೇ. 40

English summary
An online survey, conducted by social engagement platform LocalCircles, indicates that despite Akhilesh's claims, people in UP rated government performance in all front is below average.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X