Online Game: ಆನ್‌ಲೈನ್‌ ಆಟದಿಂದ ಲಕ್ಷ ರೂ. ಗಳಿಸುವ ಆಸೆಗೆ ಮನೆ ಬಿಟ್ಟ ಬಾಲಕ; ಮುಂದೆ ಆಗಿದ್ದು ಮಾತ್ರ ವಿಚಿತ್ರ!

ಆನ್‌ಲೈನ್ ಮೊಬೈಲ್ ಗೇಮ್‌ನಲ್ಲಿ ಹಣ ಗಳಿಸುವ ಆಸೆಗೆ ಬಿದ್ದ 14 ವರ್ಷದ ಬಾಲಕನೊಬ್ಬ ಮನೆ ಬಿಟ್ಟು ನೂರಾರು ಕಿಲೋಮೀಟರ್ ದೂರ ಹೋಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶದ ಫಿರೋಜಾಬಾದ್‌ನ 8ನೇ ತರಗತಿ ವಿದ್ಯಾರ್ಥಿಗೆ ಆನ್‌ಲೈನ್ ಗೇಮಿಂಗ್ ಟಾಸ್ಕ್ ಪೂರ್ಣಗೊಳಿಸಿದರೆ 1 ಲಕ್ಷ ರೂ. ಹೆಚ್ಚು ಹಣ ಸಿಗುತ್ತದೆ ಎಂದು ನಂಬಿ, ಮೋಸವೋಗಿದ್ದಾನೆ. ಗೇಮ್‌ನ ಟಾಸ್ಕ್ ಪೂರ್ಣಗೊಳಿಸುವ ಉದ್ದೇಶದಿಂದ ಮನೆಯಿಂದ ಹೊರಟಿದ್ದಾನೆ. ಆದರೆ ದಾರಿ ಮಧ್ಯೆ ಮೋಸ ಹೋಗಿರುವುದು ಅರಿವಾಗಿದ್ದು, ಕೊನೆಗೆ ಮಥುರಾದಲ್ಲಿ ಪತ್ತೆಯಾಗಿದ್ದಾನೆ. ಆದರೆ, ಇದಕ್ಕೆಲ್ಲವೂ ಕಾರಣವಾಗಿರುವುದು ಅವರ ತಂದೆಯ ಸಾವು!

ಆನ್‌ಲೈನ್ PUBG ಗೇಮ್ ನಂಬಿಕೊಂಡು ಬಾಲಕನೊಬ್ಬ ಮಾಡಿಕೊಂಡ ಎಡವಟ್ಟು ಇದೀಗ ಸುದ್ದಿಯಾಗುತ್ತಿದೆ. ಬಾಲಕ ಗ್ವಾಲಿಯರ್‌ಗೆ ಹೋದ್ದಾನೆ. ಆದರೆ ದಾರಿ ತಪ್ಪಿ ಮೊದಲು ಇಂದೋರ್‌ಗೆ ಮತ್ತು ನಂತರ ಮಥುರಾಗೆ ಪ್ರಯಾಣ ಬೆಳೆಸಿದ್ದಾನೆ. ಕಾಣೆಯಾದ ಎರಡು ದಿನಗಳ ಕಾಲ ನಂತರ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಕಣ್ಗಾವಲು ಸಹಾಯದಿಂದ ಆ ಯುವಕನ್ನು ಪತ್ತೆಹಚ್ಚಲಾಗಿದೆ. ಮಥುರಾದ ಸುರಕ್ಷಿತವಾಗಿ ಬಾಲಕ ಪತ್ತೆಯಾಗಿದ್ದಾನೆ.

Online Game Boy Leaves Home to Earn 1 Lakh What Happened Next Will Surprise You

Online Game: 1 ಲಕ್ಷ ರೂ. ಗಳಿಸುವ ಆಸೆಯಿಂದ ಆನ್‌ಲೈನ್ ಗೇಮ್ ಮೊರೆ

ಬಾಲಕ 1 ಲಕ್ಷ ರೂ. ಆದಾಯ ಗಳಿಸುವ ಆಸೆಯಿಂದ ಆನ್‌ಲೈನ್ ಗೇಮ್ ಮೊರೆ ಹೋಗಿದ್ದಾನೆ. ಬಾಲಕ ಅವರ ತಂದೆಯ ಮರಣದ ನಂತರ ತನ್ನ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದ್ದಾನೆ. ಆನ್‌ಲೈನ್ ಗೇಮ್ PUBG ವ್ಯಸನಿಯಾಗಿದ್ದಾನೆ. ವಿದ್ಯಾರ್ಥಿಯು ಆಟಕ್ಕೆ ಸಂಬಂಧಿಸಿದ ಟಾಸ್ಕ್ ಪಡೆದ ನಂತರ, 1 ಲಕ್ಷ ರೂ. ಗೆಲ್ಲುವ ಭರವಸೆಯೊಂದಿಗೆ ಗ್ವಾಲಿಯರ್‌ಗೆ ಪ್ರಯಾಣಿಸಲು ನಿರ್ಧರಿಸಿದ್ದಾನೆ ಅಂತ ಹೇಳಲಾಗಿದೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ, ಅವನು ತನ್ನ ಶಾಲಾ ಬ್ಯಾಗ್‌ನೊಂದಿಗೆ ಮನೆಯಿಂದ ಹೊರಟವನು ವಾಪಸ್ ಬಂದಿಲ್ಲ. ಬಾಲಕನ್ನು ಹುಡುಕುವುದಕ್ಕೆ ಕುಟುಂಬದವರು ಪ್ರಯತ್ನಿಸಿದರಾದರೂ, ಎಷ್ಟೇ ಹುಡುಕಿದರೂ ಪತ್ತೆ ಆಗಿಲ್ಲ.

4ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಲಾಗಿದೆ ಎಂದು ಶಂಕಿಸಿ, ಆತನ ಕುಟುಂಬದವರು ಪೊಲೀಸ್ ದೂರು ನೀಡಿದ್ದಾರೆ. ಶಾಲೆಯಲ್ಲಿ ಒಂದು ದಿನದ ಹಿಂದೆ ಕಿರಿಯ ಸಹೋದರನೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಯ ಸಹಪಾಠಿಯ ತಂದೆಯ ವಿರುದ್ಧ ಕುಟುಂಬದವರು ದೂರು ದಾಖಲಿಸಿದ್ದಾರೆ. ಆದರೆ ಬಾಲಕನೇ ಸ್ವಂತ ಇಚ್ಛೆಯಿಂದ ಓಡಿ ಹೋಗಿದ್ದಾನೆ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.

ಓಡಿ ಹೋದ ಬಾಲಕ ಪತ್ತೆ ಆಗಿದ್ದು ಹೇಗೆ ?

ಬಾಲಕ ಕಾಣೆಯಾಗಿದ್ದಾನೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಶೋಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ವಿವಿಧ ತಂಡವಾಗಿ, ಹುಡುಗ ಕಾಣೆಯಾದ ಸ್ಥಳದ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬಾಲಕ ಜೈನ ದೇವಾಲಯದ ಬಳಿ ಆಟೋದಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ನಂತರ ಪೊಲೀಸರು ಆತನ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಲು ಮೊಬೈಲ್ ಕಣ್ಗಾವಲು / ಮೊಬೈಲ್ ಟ್ರ್ಯಾಪ್ ಬಳಸಿದ್ದಾರೆ. ಅಂತಿಮವಾಗಿ ಆತ ಮಥುರಾದಲ್ಲಿ ಬಸ್‌ನಲ್ಲಿರುವುದು ಪತ್ತೆ ಮಾಡಿದ್ದಾರೆ.

ವಿದ್ಯಾರ್ಥಿ ಪ್ರಾರಂಭದಲ್ಲಿ ಮೊದಲು ಗ್ವಾಲಿಯರ್‌ಗೆ ಪ್ರಯಾಣಿಸಲು ಉದ್ದೇಶಿಸಿದ್ದ, ಆದರೆ ತಪ್ಪಾಗಿ ಇಂದೋರ್‌ಗೆ ಹೋಗಿದ್ದಾನೆ. ತಪ್ಪಾದ ಜಾಗಕ್ಕೆ ಬಂದಿದ್ದೇನೆ ಅಂತ ತಿಳಿದ ಕೂಡಲೇ ಅವನು ಮತ್ತೊಂದು ಬಸ್ ಹತ್ತಿದ್ದಾನೆ. ಪ್ರಯಾಣದ ಸಮಯದಲ್ಲಿ ಅವನು ನಿದ್ರಿಸಿದ್ದ ಮತ್ತು ಮರುದಿನ ಬೆಳಿಗ್ಗೆ ಮಥುರಾದಲ್ಲಿ ಎಚ್ಚರವಾಗಿದೆ.

ಮನೆಗೆ ಹಿಂದಿರುಗುವ ಬದಲು, ಅವನು ಗೇಮ್‌ನ ಟಾಸ್ಕ್‌ ಮುಗಿಸಲು ಪ್ರಯತ್ನಿಸಿದ್ದಾನೆ. ಅಲ್ಲದೆ ಮಥುರಾದಿಂದ ಗ್ವಾಲಿಯರ್‌ಗೆ ಬಸ್ ಹತ್ತಿದ್ದಾನೆ. ಅವನು ಬಸ್‌ನಲ್ಲಿದ್ದಾಗ ಪೊಲೀಸರು ಮೊಬೈಲ್ ಕಣ್ಗಾವಲು ಮೂಲಕ ಆ ಹುಡುಗ ಇರುವ ಸ್ಥಳವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಅವನನ್ನು ವಶಕ್ಕೆ ಪಡೆದಿದ್ದಾರೆ. 8 ನೇ ತರಗತಿಯ ವಿದ್ಯಾರ್ಥಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+