• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ಬೆಲೆ ಏರಿಕೆಯಾಗ್ತಿದ್ದಂತೆ ಸೃಷ್ಟಿಯಾಯ್ತು ಬಗೆಬಗೆಯ ಮಿಮ್ಸ್, ಜೋಕ್ಸ್

|
Google Oneindia Kannada News

ನವದೆಹಲಿ, ಅಕ್ಟೋಬರ್ 23: ದೇಶದಲ್ಲಿ ಈರುಳ್ಳಿ ಬೆಲೆ 100ರ ಗಡಿ ದಾಟಿದ್ದು, ಗ್ರಾಹಕರಲ್ಲಿ ಕಣ್ಣಲ್ಲಿ ನೀರು ತರಿಸುತ್ತಿದೆ. ಇಷ್ಟು ದಿನ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೆ, ಈಗ ಈರುಳ್ಳಿ ಕೊಳ್ಳುವಾಗಲೇ ನೀರು ಬರುತ್ತಿದೆ. ಕಾರಣ ಈರುಳ್ಳಿ ಬಲೆ ಅಷ್ಟು ಗಗನಕ್ಕೇರಿದೆ. ಇದರ ಬೆನ್ನಲ್ಲೇ ವಿವಿಧ ಮೀಮ್ಸ್‌ಗಳ ಸೃಷ್ಟಿಯೂ ಆಗಿದೆ.

ಸಾಕಷ್ಟು ಮಂದಿ ಟ್ವಿಟ್ಟರ್‌ನಲ್ಲಿ ಅನೇಕ ಮೀಮ್ಸ್‌ಗಳನ್ನು ಮಾಡುತ್ತಿದ್ದಾರೆ. ಜನರಿಗೆ ನಗು, ಅಳು ಎರಡೂ ಒಂದೇ ಸಮಯಕ್ಕೆ ಬರುತ್ತಿದೆ. ಅಕ್ಟೋಬರ್ 21 ರಂದು ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಕೆಲವು ಕಡೆ 51 ರೂ ಇದ್ದರೆ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ 100ರ ಗಡಿ ದಾಟಿದೆ.

ಕರ್ನಾಟಕದಲ್ಲಿ ಕೆ.ಜಿ ಈರುಳ್ಳಿ ಬೆಲೆ ಬರೋಬ್ಬರಿ 120 ರೂ., ಮತ್ತಷ್ಟು ಏರಿಕೆ ಸಾಧ್ಯತೆಕರ್ನಾಟಕದಲ್ಲಿ ಕೆ.ಜಿ ಈರುಳ್ಳಿ ಬೆಲೆ ಬರೋಬ್ಬರಿ 120 ರೂ., ಮತ್ತಷ್ಟು ಏರಿಕೆ ಸಾಧ್ಯತೆ

ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಕೈಗೊಂಡಿದ್ದು, ಈರುಳ್ಳಿ ಆಮದಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಮದಿನ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ.

ಬುಧವಾರದಿಂದ ಫ್ಯುಮಿಗೇಷನ್ ಮತ್ತು ಹೆಚ್ಚುವರಿ ಫೈಟೋಸ್ಯಾನಟರಿ ಘೋಷಣಾ ಪ್ರಮಾಣಪತ್ರ ಸಲ್ಲಿಕೆ ಷರತ್ತುಗಳಿಂದ ಪ್ಲಾಂಟ್ ಕ್ವಾರಂಟೈನ್ ಆದೇಶ 2020ರ ಡಿಸೆಂಬರ್ 15ರ ವರೆಗೆ ಆಮದಿಗೆ ವಿನಾಯಿತಿ ನೀಡಿದೆ.

ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಅವು ಆಯಾ ದೇಶಗಳ ವರ್ತಕರನ್ನು ಸಂಪರ್ಕಿಸಿ, ಭಾರತಕ್ಕೆ ಹೆಚ್ಚಿನ ಪ್ರಮಾಣದ ಈರುಳ್ಳಿ ಆಮದಿಗೆ ಉತ್ತೇಜನ ನೀಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಬಂದರುಗಳಿಗೆ ಆಮದಾಗುವ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ- ಯಾವುದೇ ಫುಮಿಗೇಷನ್ ಮತ್ತು ಸ್ವೀಕೃತಿ ಬೇಕಾಗಿಲ್ಲ. ಪ್ರಮಾಣೀಕೃತ ಸಂಸ್ಕರಣಾದಾರರಿಂದ ಭಾರತವೇ ಅದರ ಫ್ಯುಮಿಗೇಷನ್ ಮಾಡಿಸಲಿದೆ. ಅದರ ಕಾಂಡ ಮತ್ತು ಬಳ್ಳಿ (ಡಿಟಿಲೆಂಚಸ್ ಡಿಪ್ಪಾಸಿ) ಅಥವಾ ಈರುಳ್ಳಿ ಮ್ಯಾಗಟ್ (ಹಿಲಿಮಿಯ ಆಂಟಿಕ್ವಾ)ಗಳನ್ನು ಫ್ಯುಮುಗೇಷನ್ ಮೂಲಕ ಪತ್ತೆ ಹಚ್ಚಿ ತೆಗೆದುಹಾಕಲಾಗುವುದು ಮತ್ತು ಕನ್ಸೈನ್ ಮೆಂಟ್ ಗಳನ್ನು ಹೆಚ್ಚುವರಿ ತಪಾಸಣಾ ಶುಲ್ಕವಿಲ್ಲದೆ ಬಿಡುಗಡೆ ಗೊಳಿಸಲಾಗುವುದು.

ಆಮದುದಾರರಿಂದ ಈರುಳ್ಳಿಯನ್ನು ಕೇವಲ ಬಳಕೆಗಾಗಿ ಉಪಯೋಗಿಸಲಾಗುವುದು ಮತ್ತು ಬೀಜಗಳಾಗಿ ಬಳಸುವುದಿಲ್ಲ ಎಂದು ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗುವುದು. ಅಂತಹ ಈರುಳ್ಳಿ ಕನ್ಸೈನ್ ಮೆಂಟ್ ಗಳಿಗೆ ಪಿಕ್ಯೂ ಆದೇಶ 2003ರ ಅನ್ವಯ ಆಮದು ನಿಬಂಧನೆಗೆ ಒಳಪಟ್ಟಂತೆ ನಾಲ್ಕು ಪಟ್ಟು ಹೆಚ್ಚುವರಿ ತಪಾಸಣಾ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈರುಳ್ಳಿಯ ಬೆಲೆ 100 ಎಂದಾಗ ನಾನು:

ಈರುಳ್ಳಿ ಚಿನ್ನದ ಅಂಗಡಿಯಲ್ಲಿ ಸಿಗುತ್ತೆ

ಈರುಳ್ಳಿ ತಿನ್ನದೇ ಇರೋ ಜನ ಹೀಗಿರ್ತಾರೆ

ಒಂದೊಮ್ಮೆ ನೀವು ಸಲಾಡ್‌ನಲ್ಲಿ ಈರುಳ್ಳಿ ಕೇಳಿದಾಗ

English summary
The netizens are having the time of their lives right now as the news of onion price hike started to trended online. Several netizens took to Twitter to share hilarious memes and jokes about the same and how they are coping with it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X