ಮೋದಿ ಸರ್ಕಾರಕ್ಕೆ ಒಂದು ವರ್ಷ, ಓದುಗರ ಅಭಿಪ್ರಾಯ

ಬೆಂಗಳೂರು, ಮೇ 26 : ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 365 ದಿನಗಳು ಕಳೆದು ಹೋಗಿವೆ. ಒಂದು ವರ್ಷ ಯಾವುದೇ ಸರ್ಕಾರದ ಸಾಧನೆಗಳನ್ನು ಅಳೆಯಲು ದೊಡ್ಡ ಮಾಪನವಾಗುವುದಿಲ್ಲ. ಆದರೆ, ಅಪಾರ ನಿರೀಕ್ಷೆ ಇಟ್ಟು ಮತ ಹಾಕಿದ್ದ ಜನರು ಸರ್ಕಾರದ ಬಗ್ಗೆ ಏನು ಹೇಳುತ್ತಾರೆ?. ಒನ್ ಇಂಡಿಯಾ ಕನ್ನಡದ ಓದುಗರ ಪ್ರಕಾರ ಸರ್ಕಾರ ಸೂಪರೋ ಸೂಪರ್.

ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಒನ್ ಇಂಡಿಯಾ ಕನ್ನಡ 'ಒಂದು ವರ್ಷದ ನರೇಂದ್ರ ಮೋದಿ ಸರ್ಕಾರ ಹೇಗಿತ್ತು?' ಎಂಬ ಪ್ರಶ್ನೆಯೊಂದಿಗೆ ಓದುಗರ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. [ಮಥುರಾ: ಮೋದಿಯಿಂದ ಶ್ರೀಕೃಷ್ಣನ 'ಕರ್ಮಯೋಗ' ಪಾಠ]

ಇದುವರೆಗೂ 5,703 ಜನರು ಮತ ಹಾಕಿದ್ದಾರೆ. 2,955 ಜನರು ಮೋದಿ ಸರ್ಕಾರ 'ಸೂಪರೋ ಸೂಪರ್' ಎಂದು ಮತ ಹಾಕಿದ್ದಾರೆ. 1,340 ಜನರು 'ಬರೀ ಶೋ ಅಫ್' ಎಂದು ಅಭಿಪ್ರಾಯಪಟ್ಟಿದ್ದಾರೆ. ಫಿಫ್ಟಿ ಫಿಫ್ಟಿ ಎಂದು 1,408 ಜನರು ಮತವನ್ನು ಹಾಕಿದ್ದಾರೆ. [ಸಿದ್ದರಾಮಯ್ಯ ಸರಕಾರ 'ಫೇಲ್' ಎಂದರು ನಮ್ಮ ಓದುಗರು]

ಓದುಗರು ಮತದಾನ ಮಾಡುವ ಜೊತೆಗೆ ಒನ್ ಇಂಡಿಯಾದ ಫೇಸ್‌ಬುಕ್ ಪುಟ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ವರ್ಷದ ಸಾಧನೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮತ ಹಾಕಿದ ಎಲ್ಲಾ ಓದುಗರಿಗೂ ಒನ್ ಇಂಡಿಯಾ ಕನ್ನಡ ಧನ್ಯವಾದ ಅರ್ಪಿಸುತ್ತದೆ. ಕೆಲವು ಓದುಗರ ಅಭಿಪ್ರಾಯವನ್ನು ಕೆಳಗೆ ನೀಡಲಾಗಿದೆ.

ಓದುಗರು ನೀಡಿರುವ ಫಲಿತಾಂಶ ಇಲ್ಲಿದೆ

ಓದುಗರು ನೀಡಿರುವ ಫಲಿತಾಂಶ ಇಲ್ಲಿದೆ

* ಸೂಪರೋ ಸೂಪರ್ ಎಂದು ಶೇ 51.81 ಓದುಗರು ಮತ ಹಾಕಿದ್ದಾರೆ
* ಫಿಫ್ಟಿ ಫಿಫ್ಟಿ ಎಂಬುದು 24.69ರಷ್ಟು ಓದುಗರ ಅಭಿಪ್ರಾಯ
* ಬರೀ ಶೋ ಆಫ್ ಎಂದು ಶೇ 23.5 ರಷ್ಟು ಜನರು ಮತ ಹಾಕಿದ್ದಾರೆ

ಮೋಹನ್ ಎನ್ನುವವರ ಅಭಿಪ್ರಾಯ

ಮೋಹನ್ ಎನ್ನುವವರ ಅಭಿಪ್ರಾಯ

'ನಾವು ಕಾಂಗ್ರೆಸ್ ಸರ್ಕಾರಕ್ಕೆ 57 ವರ್ಷಗಳನ್ನು ಕೊಟ್ಟಿರುವಾಗ ಮೋದಿಯವರಿಗೆ ಕೇವಲ 1 ವರ್ಷದಲ್ಲಿ ಬದಲಾವಣೆ ಬೇಕು ಅಂತ ಬಡ್ಕೊಂಡ್ರೆ ಯಾವ ನ್ಯಾಯ ಹೇಳಿ ನೀವೇ. 57 ವರ್ಷದಲ್ಲಿ ಸಾಧಿಸಲು ಸಾಧ್ಯ ಆಗದಿರೋದನ್ನ 1 ವರ್ಷದಲ್ಲಿ ಮಾಡಿ ಅಂದ್ರೆ ಹೇಗೆ?. ಇನ್ನು 4 ವರ್ಷ ಕಳೆದಮೇಲೆ ಮುಂದಿನ ಚುನಾವಣೆಗೆ ಉತ್ತರ ಕೊಡುವ ಗೆಳೆಯರೇ. ಕಾಂಗ್ರೆಸ್ ನವರು ಬರೀ ಅಡ್ಡಗಾಲು ಹಾಕೋದು ಬಿಟ್ಟು ಸಮಸ್ಯೆ ಪರಿಹರಿಸಲು ಸಹಾಯ ಮಾಡಿ'.

ಓದುಗ ಸುನೀಲ್ ಅಭಿಪ್ರಾಯವಿದು

ಓದುಗ ಸುನೀಲ್ ಅಭಿಪ್ರಾಯವಿದು

'ನರೇಂದ್ರ ಮೋದಿ ಒಬ್ಬ ಉತ್ತಮ ಮನುಷ್ಯ. ಭಾರತದ ಒಳಿತಿಗಾಗಿ ನಿಜವಾದ ಕಾಳಜಿಯಿಂದ ಪರಿಶ್ರಮಿಸುತ್ತಿದ್ದಾರೆ. ಉತ್ತಮ ದಿನಗಳು ಬಂದೇ ಬರುವವೆಂಬ ನಂಬಿಕೆ ನನಗಂತೂ ಇದೆ. ಎಷ್ಟೆಲ್ಲಾ ವರುಷಗಳು ಇರುವ ಪರಿಸ್ಥಿತಿಯ ಜೊತೆ ಹೇಗೋ ಹೊಂದಿಕೊಂಡು ಬಂದಿರುವ ನಾವು, ಇಂತಹ ಉತ್ತಮ ಮನುಷ್ಯನಿಗೆ ತನ್ನ ಸಾಧನೆಯನ್ನು ರುಜುವಾತುಪಡಿಸಲು ಸಮಯಾವಕಾಶ ನೀಡಲೇಬೇಕು'.

ಓದುಗ ಅನಿಲ್ ಕುಮಾರ್ ನೀಡಿದ ಅಂಕ

ಓದುಗ ಅನಿಲ್ ಕುಮಾರ್ ನೀಡಿದ ಅಂಕ

ಅನಿಲ್ ಕುಮಾರ್ ಎಂಬ ಓದುಗರು ಮೋದಿ ಸರ್ಕಾರಕ್ಕೆ ಕೊಟ್ಟಿರುವ ಅಂಕ 'ಬಿ'

'ಮೋದಿ ಮೇಲೆ ನಂಬಿಕೆ ಇದೆ'

'ಮೋದಿ ಮೇಲೆ ನಂಬಿಕೆ ಇದೆ'

ಯೋಗರಾಜ್ ಎನ್ನುವ ಓದುಗರು 'ನರೇಂದ್ರ ಮೋದಿಯವರ ಮೇಲೆ ಜನ ತುಂಬ ನಂಬಿಕೆ ಇಟ್ಟಿದ್ದಾರೆ. ಅದನ್ನು ಅವರು ಉಳಿಸಿಕೊಳುತ್ತಾರೆ ಎಂಬ ನಂಬಿಕೆ ನಮಗೆ ಇದೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+