ಒಂದು ಡೋಸ್ ಲಸಿಕೆ ಸೋಂಕು ಹರಡುವಿಕೆ ಪ್ರಮಾಣವನ್ನು ಅರ್ಧದಷ್ಟು ತಡೆಯಲಿದೆ
ನವದೆಹಲಿ, ಏಪ್ರಿಲ್ 29: ಒಂದು ಡೋಸ್ ಕೊರೊನಾ ಲಸಿಕೆ ಕೊರೊನಾ ಸೋಂಕಿನ ಹರಡುವಿಕೆಯನ್ನು ಅರ್ಧದಷ್ಟು ತಡೆಯಬಲ್ಲದು ಎಂದು ನ್ಯೂ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ನಡೆಸಿದ್ದ ಅಧ್ಯಯನವೊಂದು ಸಾಬೀತು ಮಾಡಿದೆ.
ಆಸ್ಟ್ರಾಜೆನೆಕಾ ಅಥವಾ ಭಾರತ್ ಬಯೋಟೆಕ್‌ನ ಈ ಎರಡು ಲಸಿಕೆಗಳಲ್ಲಿ ಯಾವುದಾದರೂ ಒಂದು ಲಸಿಕೆಯ ಒಂದು ಡೋಸ್ ಪಡೆದುಕೊಂಡರೆ, ಲಸಿಕೆ ಪಡೆದ ಮೂರು ವಾರಗಳ ನಂತರ ಸೋಂಕು ಹರಡುವ ಸಾಧ್ಯತೆಯು ಶೇ 38 ರಿಂದ 49ರ ಮಟ್ಟಿಗೆ ಕಡಿಮೆಯಾಗುತ್ತದೆ ಎನ್ನಲಾಗಿದೆ.
ಲಸಿಕೆ ಪಡೆದ 14 ದಿನಗಳ ನಂತರ ಸೋಂಕನ್ನು ತಡೆಗಟ್ಟುವ ಶಕ್ತಿಯು ವೃದ್ಧಿಯಾಗುತ್ತದೆ ಎಂದು ತಿಳಿಸಿದೆ.

ಮನೆಯಲ್ಲೇ ಹರಡಬಹುದಾದ ಸೋಂಕಿನ ಪ್ರಮಾಣವನ್ನು ಲಸಿಕೆ 50%ವರೆಗೂ ತಡೆಯಬಲ್ಲದು ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹಾಂಕಾಕ್ ತಿಳಿಸಿದ್ದಾರೆ.
ಈ ಪ್ರಯೋಗವನ್ನು ಸುಮಾರು 57 ಸಾವಿರ ಮಂದಿ ಮೇಲೆ ನಡೆಸಿದ್ದು, ಲಸಿಕೆ ಪಡೆಯದ ಒಂದು ದಶಲಕ್ಷ ಜನರೊಂದಿಗೆ ಹೋಲಿಸಿ ಈ ಅಧ್ಯಯನ ನಡೆಸಲಾಗಿದೆ. ಕೊರೊನಾದಿಂದ ದೂರವಾಗಿ ಮತ್ತೆ ಸಹಜ ಜೀವನಕ್ಕೆ ಮರಳಲು ಲಸಿಕೆಗಳು ಸಹಾಯ ಮಾಡುತ್ತವೆ. ಕೊರೊನಾ ಸೋಂಕಿನ ಗಂಭೀರತೆಯನ್ನು ಲಸಿಕೆಗಳು ತಗ್ಗಿಸಿ ಪ್ರತಿನಿತ್ಯ ಸಂಭವಿಸುವ ಸಾವಿನ ಸಂಖ್ಯೆಯನ್ನೂ ತಗ್ಗಿಸುತ್ತವೆ. ಇದು ನಮ್ಮಿಂದ ಇತರರಿಗೂ ಸೋಂಕು ಹರಡುವುದನ್ನು ತಪ್ಪಿಸಲು ಕಾರಣವಾಗುತ್ತದೆ ಎಂದಿದೆ ಅಧ್ಯಯನ.












Click it and Unblock the Notifications