ಉಗ್ರರ ದಾಳಿ, ಸಶಸ್ತ್ರ ಸೀಮಾ ಬಲದ ಹೆಡ್ ಕಾನ್ ಸ್ಟೇಬಲ್ ಹುತಾತ್ಮ
ಸಶಸ್ತ್ರ ಸೀಮಾ ಬಲದ ಕ್ಯಾಂಪ್ ಮೇಲೆ ಜಮ್ಮು-ಕಾಶ್ಮೀರದ ಬನಿಹಾಲ್ ಪ್ರದೇಶದಲ್ಲಿ ಬುಧವಾರ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಸಶಸ್ತ್ರ ಸೀಮಾ ಬಲದ ಹೆಡ್ ಕಾನ್ ಸ್ಟೇಬಲ್ ವೊಬ್ಬರು ಹುತಾತ್ಮರಾಗಿದ್ದಾರೆ. ಮತ್ತೊಬ್ಬರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಂಬನ್ ಸಮೀಪ ಉಗ್ರಗಾಮಿಗಳು ಸಶಸ್ತ್ರ ಸೀಮಾ ಬಲದ ಹದಿನಾಲ್ಕನೇ ಬೆಟಾಲಿಯನ್ ಮೇಲೆ ದಾಳಿ ನಡೆಸಿದ್ದಾರೆ. ಅಂದಹಾಗೆ ಬನಿಹಾಲ್ ಸುರಂಗದ ಸುರಕ್ಷತೆಯ ಜವಾಬ್ದಾರಿ ಸಶಸ್ತ್ರ ಸೀಮಾ ಬಲದ ಯೋಧರಿಗೆ ಇದೆ. ಸೆಪ್ಟೆಂಬರ್ ಒಂದರಂದು ಸಹ ಶ್ರೀನಗರದ ಪಂಥ ಚೌಕದ ಬಳಿ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು.

ಆಗ ಒಬ್ಬ ಪೊಲೀಸ್ ಹುತಾತ್ಮರಾಗಿ, ನಾಲ್ವರು ಗಾಯಾಳುಗಳಾಗಿದ್ದರು. ಬೆಮಿನಾದಿಂದ ಜೇವನ್ ಗೆ ಭದ್ರತಾ ಸಿಬ್ಬಂದಿಯ ಬಸ್ಸು ತೆರಳುತ್ತಿದ್ದ ವೇಳೆ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಇನ್ನು ಆಗಸ್ಟ್ ಹದಿನೈದರಂದು ತೆಂಗ್ ಪೋರಾದಲ್ಲಿ ಪೊಲೀಸ್ ಬಂಕರ್ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಒನ್ಇಂಡಿಯಾ ನ್ಯೂಸ್












Click it and Unblock the Notifications