ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರಿಗೆ ಕೊರೊನಾ ವೈರಸ್
ನವದೆಹಲಿ, ಆಗಸ್ಟ್ 21: ಭಾರತದಲ್ಲಿ ನಾಲ್ವರಲ್ಲಿ ಕನಿಷ್ಠ ಒಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಸರ್ಕಾರವು ತಿಳಿಸುವ ಅಂಕಿ ಅಂಶಗಳಿಗಿಂತಲೂ ಇದು ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಮುಂಚೂಣಿ ಖಾಸಗಿ ಲ್ಯಾಬೊರೇಟರಿಯೊಂದು ಹೇಳಿದೆ.
Recommended Video
ತಮ್ಮ ಕಂಪೆನಿ ಥೈರೋಕೇರ್ ಭಾರತದಾದ್ಯಂತ ಸುಮಾರು 2.70 ಲಕ್ಷ ಜನರ ಆಂಟಿಬಾಡಿ ಪರೀಕ್ಷೆ ಮಾಡಿದ್ದು, ಅದರ ವಿಶ್ಲೇಷಣೆಯಡಿ, ಸರಾಸರಿ ಶೇ 26 ಮಂದಿಯಲ್ಲಿ ಪ್ರತಿಕಾಯಗಳು ಇರುವುದು ಕಂಡುಬಂದಿದೆ. ಇದರ ಅರ್ಥ ಅವರೆಲ್ಲರೂ ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಡಾ. ಎ. ವೇಲುಮಣಿ ಹೇಳಿದ್ದಾರೆ.
'ಇದು ನಾವು ನಿರೀಕ್ಷೆ ಮಾಡಿರುವುದಕ್ಕಿಂದಲೂ ಹೆಚ್ಚಿನ ಪ್ರಮಾಣದಲ್ಲಿದೆ. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಗುಂಪುಗಳಲ್ಲಿಯೂ ಈ ಪ್ರತಿಕಾಯಗಳ ಅಸ್ತಿತ್ವ ಏಕರೂಪದ್ದಾಗಿವೆ' ಎಂದು ವೇಲುಮಣಿ ಹೇಳಿದ್ದಾರೆ.

ಮುಂಬೈನಂತಹ ನಗರಗಳಲ್ಲಿ ಸರ್ಕಾರ ನಡೆಸಿರುವ ಸಮೀಕ್ಷೆಗಳಂತೆಯೇ ಥೈರೋ ಕೇರ್ ಸಮೀಕ್ಷೆ ಹಲವು ಸಂಗತಿಗಳನ್ನು ತೆರೆದಿಟ್ಟಿದೆ. ಜನನಿಬಿಡ ಕೊಳೆಗೇರಿಗಳಲ್ಲಿ ಶೇ 57ರಷ್ಟು ಜನಸಂಖ್ಯೆ ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದೆ ಎಂದು ಅದು ತಿಳಿಸಿದೆ.
ಹಣ ಪಾವತಿಸಿ ಪರೀಕ್ಷೆಗೆ ಒಳಗಾದ ರೋಗಿಗಳನ್ನು ಸಹ ಥೈರೋ ಕೇರ್ ಸಮೀಕ್ಷೆ ಒಳಗೊಂಡಿದೆ. ಕಳೆದ ಏಳು ವಾರಗಳಲ್ಲಿ ದೇಶದ 600 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಡಿಸೆಂಬರ್ ಅಂತ್ಯದೊಳಗೆ ಪ್ರತಿಕಾಯ ಹೊಂದಿರುವ ಭಾರತೀಯರ ಜನಸಂಖ್ಯೆ ಶೇ 40ಕ್ಕೆ ಏರಲಿದೆ ಎಂದು ವೇಲುಮಣಿ ಹೇಳಿದ್ದಾರೆ.












Click it and Unblock the Notifications