ಆಂಧ್ರ, ಚಂಡೀಗಢದಲ್ಲಿ 2 ಓಮಿಕ್ರಾನ್ ದೃಢ: ದೇಶದ ಸಂಖ್ಯೆ 35 ಕ್ಕೆ ಏರಿಕೆ
ಆಂಧ್ರಪ್ರದೇಶ, ಡಿಸೆಂಬರ್ 12: ಭಾರತದಲ್ಲಿ ಮತ್ತೆರಡು ಓಮಿಕ್ರಾನ್ ಪ್ರಕರಣಗಳು ವರದಿ ಆಗಿದೆ. ಆಂಧ್ರಪ್ರದೇಶದಲ್ಲಿ ಹಾಗೂ ಪಂಜಾಬ್ ರಾಜ್ಯದ ಚಂಡೀಗಢದಲ್ಲಿ ಓಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಎರಡು ರಾಜ್ಯದಲ್ಲಿ ಇದು ಮೊದಲನೇ ಓಮಿಕ್ರಾನ್ ಪ್ರಕರಣ ಇದಾಗಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್ ಪ್ರಕರಗಳ ಸಂಖ್ಯೆಯು 35 ಕ್ಕೆ ಏರಿಕೆ ಆಗಿದೆ.
ಆಂಧ್ರಪ್ರದೇಶದ ಸರ್ಕಾರವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ, 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಇನ್ನು ಚಂಡೀಗಢದಲ್ಲಿ 20 ವರ್ಷದ ಯುವಕನಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಇನ್ನು ಈ ಇಬ್ಬರು ಓಮಿಕ್ರಾನ್ ಸೋಂಕಿತರಲ್ಲಿ ಯಾವುದೇ ಕೋವಿಡ್ ಲಕ್ಷಣಗಳು ಇಲ್ಲ.
ಈ ಓಮಿಕ್ರಾನ್ ರೂಪಾಂತರದ ಬಗ್ಗೆ ಅಧಿಕ ಅಧ್ಯಯನವು ವಿಶ್ವದಾಂದ್ಯತ ನಡೆಯುತ್ತಿದೆ. ಈವರೆಗೆ ದೊರೆತ ಅಧ್ಯಯನ ಆಧಾರಿತ ಮಾಹಿತಿ ಪ್ರಕಾರ, ಓಮಿಕ್ರಾನ್ ರೂಪಾಂತರವು ಒಂದು ಹೊಸ ಬೆದರಿಕೆ ಆಗಿದೆ, ಆದರೆ ಈ ರೂಪಾಂತರವು ಹೆಚ್ಚು ಗಂಭೀರ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ದೇಶಗಳು ಕೋವಿಡ್ ಲಸಿಕೆ ನೀಡಿಕೆಯನ್ನು ಅಧಿಕಗೊಳಿಸುವಂತೆ ಹೇಳಿದೆ.

ಆಂಧ್ರ ಪ್ರದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ
ಆಂಧ್ರ ಪ್ರದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲು ಆಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರವು ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿಯು ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆತನ ಕೋವಿಡ್ ವರದಿಯು ನೆಗೆಟಿವ್ ಆಗಿದ್ದವು. ಈ ನಿಟ್ಟಿನಲ್ಲಿ ಈ ವ್ಯಕ್ತಿಗೆ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. 27 ರಂದು ಆತ ವಿಶಾಖಪಟ್ಟಣಕ್ಕೆ ತೆರಳಿದ್ದಾನೆ. ಆ ಬಳಿಕ ಆತನ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಜಿನೋಮ್ ಸಿಕ್ವೆಂನ್ಸಿಗ್‌ಗೆ ಕಳುಹಿಸಿದಾಗ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಆತನಲ್ಲಿ ಯಾವುದೇ ಕೋವಿಡ್ ಲಕ್ಷಣಗಳು ಇಲ್ಲ. 11 ರಂದು ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಆಗಿದೆ. ಆಂಧ್ರ ಪ್ರದೇಶದಲ್ಲಿ ಈ ಒಂದು ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಓಮಿಕ್ರಾನ್ ಪ್ರಕರಣ ವರದಿ ಆಗಿಲ್ಲ. ಇದು ಆಂಧ್ರ ಪ್ರದೇಶದ ಮೊದಲ ಓಮಿಕ್ರಾನ್ ಪ್ರಕರಣವಾಗಿದೆ. ಈಗಾಗಲೇ 15 ಮಂದಿಯ ಕೋವಿಡ್ ವರದಿ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆ ಜಿನೋಮ್ ಸಿಕ್ವೆಂನ್ಸಿಂಗ್‌ಗೆ ಕಳುಹಿಸಲಾಗಿದೆ.
ಚಂಡೀಗಢದಲ್ಲಿಯೂ ಮೊದಲ ಓಮಿಕ್ರಾನ್ ಪ್ರಕರಣ
ಪಂಜಾಬ್‌ನ ಚಂಡೀಗಢದಲ್ಲಿಯೂ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿದೆ. ಚಂಡೀಗಢದಲ್ಲಿ ತನ್ನ ಸಂಬಂಧಿಕರನ್ನು ಭೇಟಿ ಆಗಲು ಇಟಲಿಯಿಂದ ಬಂದ 20 ವರ್ಷದ ಯುವಕನಲ್ಲಿ ಓಮಿಕ್ರಾನ್ ದೃಢಪಟ್ಟಿದೆ. ನವೆಂಬರ್ 22 ರಂದು ಇಟಲಿಯಿಂದ ಬಂದ ಬಳಿಕ, ಆತ ಹೋಮ್ ಕ್ವಾರಂಟೈನ್‌ನಲ್ಲಿ ಇದ್ದ, ಬಳಿಕ ಡಿಸೆಂಬರ್ 1 ರಂದು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಜಿನೋಮ್ ಸಿಕ್ವೆಂನ್ಸಿಂಗ್‌ನಲ್ಲಿ ಓಮಿಕ್ರಾನ್ ದೃಢಪಟ್ಟಿದೆ. ಈತನಲ್ಲಿ ಯಾವುದೇ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ. ಹಾಗೆಯೇ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದಿಲ್ಲ. ಪ್ರಸ್ತುತ ಆತ ಇನ್ಸಿಟ್ಯೂಟಿಷನಲ್ ಕ್ವಾರಂಟೈನ್‌ನಲ್ಲಿ ಇದ್ದಾನೆ. ಆತನ ಏಳು ಮಂದಿ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರಿಗೂ ಕೋವಿಡ್ ನೆಗೆಟಿವ್ ಬಂದಿದೆ. ಇಂದು ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ದೇಶದಲ್ಲಿ ಈವರೆಗೆ ದೇಶದಲ್ಲಿ ದೆಹಲಿ, ರಾಜಸ್ಥಾನ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರದಲ್ಲಿ ಅಧಿಕ ಓಮಿಕ್ರಾನ್ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ ಒಂಬತ್ತು, ಗುಜರಾತ್‌ನಲ್ಲಿ ಮೂರು, ಕರ್ನಾಟಕದಲ್ಲಿ ಎರಡು ಮತ್ತು ದೆಹಲಿಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಗ ಆಂಧ್ರ ಪ್ರದೇಶದಲ್ಲಿ ಒಂದು ಹಾಗೂ ಚಂಡೀಗಢದಲ್ಲಿ ಒಂದು ಓಮಿಕ್ರಾನ್ ಪ್ರಕರಣ ದಾಖಲು ಆಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆಯು ಸದ್ಯ 35 ಕ್ಕೆ ಏರಿಕೆ ಆಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications