OLA Scooter: ಕೆಟ್ಟುನಿಂತ ‘ಓಲಾ’ ಸ್ಕೂಟರ್ಸ್, ಖರೀದಿ ಮಾಡಿದವರಿಗೆ ಆಘಾತ?
ಭಾರತದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿ ಮಾಡ್ಕೊಂಡು ಭಾರಿ ಹವಾ ಇಟ್ಟಿರುವ 'ಓಲಾ' ಸಂಸ್ಥೆ, ತನ್ನ ಎಲೆಕ್ಟ್ರಿಕ್ ಸ್ಕೂಟರ್ಸ್ ಮೂಲಕ ಸಂಚಲನ ಸೃಷ್ಟಿಸಿತ್ತು. ಆರಂಭದಲ್ಲಿ 'ಇ ಸ್ಕೂಟರ್' ಖರೀದಿಗೆ ಗ್ರಾಹಕರು ಮುಗಿಬಿದ್ದರು. ಆದರೆ ಇದೀಗ ಅದೇ ಎಲೆಕ್ಟ್ರಿಕ್ ಸ್ಕೂಟರ್ ಕೆಟ್ಟು ನಿಲ್ಲುತ್ತಿರುವ ಆರೋಪ ಕೇಳಿಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗುತ್ತಿದ್ದು, ಸಂಚಲನ ಸೃಷ್ಟಿಸಿದೆ.
ಹೌದು, ಓಲಾ ಸಂಸ್ಥೆ S1 ಸ್ಕೂಟರ್ಸ್ ಬಿಡುಗಡೆ ಮಾಡಿ ಹವಾ ಇಟ್ಟಿತ್ತು. ಹಾಗೇ ಉತ್ತಮ ಬೆಲೆಗೂ ಎಲೆಕ್ಟ್ರಿಕ್ ಸ್ಕೂಟರ್ಸ್ ಮಾರಾಟ ಮಾಡಿತ್ತು. ಆದ್ರೆ ಹೀಗೆ ಮಾರಾಟ ಮಾಡಿರುವ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ರಿಪೇರಿಗೆ ಅಂತಾ, ಸರ್ವಿಸ್ ಸೆಂಟರ್‌ಗೆ ಬರುತ್ತಿವೆಯಂತೆ. ಈ ಬಗ್ಗೆ ಸರ್ವಿಸ್ ಸೆಂಟರ್ ಫೋಟೋ ಸಾಕ್ಷಿ ಉಲ್ಲೇಖಿಸಿ ರಾಯಿಟರ್ಸ್ ವರದಿ ಪ್ರಕಟಿಸಿದೆ ಈ ಮೂಲಕ ಹಲ್‌ಚಲ್ ಎಬ್ಬಿಸಿದೆ. ಹಾಗಾದರೆ ನಿಜವಾಗೂ 'ಓಲಾ' ಸ್ಕೂಟರ್ಸ್ ದೋಷ ಎದುರಿಸುತ್ತಿವೆಯಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಎಲೆಕ್ಟ್ರಿಕ್ ಸ್ಕೂಟರ್ಸ್ ಕೊಂಡವರಿಗೆ ಶಾಕ್?
ಅಂದಹಾಗೆ ಮನುಷ್ಯ ಭೂಮಿ ಮೇಲೆ ಸ್ವಚ್ಛ ಇಂಧನ ಬಳಸಲು ಪ್ರಮುಖವಾಗಿ ಎಲೆಕ್ಟ್ರಿಕ್ ಸ್ಕೂಟರ್ಸ್ ದೊಡ್ಡ ಕೊಡುಗೆ ನೀಡಬಲ್ಲವು. ಈ ಕಾರಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ಸ್ ಬಳಕೆಗೆ ಕೇಂದ್ರ ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಭಾರಿ ತಾಂತ್ರಿಕ ದೋಷ ಇದೆ, ಅದರಲ್ಲೂ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತೆ ಎಂಬುದಾಗಿ ಅನೇಕ ಗ್ರಾಹಕರು ಆರೋಪ ಮಾಡುತ್ತಿದ್ದಾರೆ.
ಗ್ರಾಹಕರ ಆರೋಪಕ್ಕೆ ಪುರಾವೆ ಎನ್ನುವಂತೆ ದೇಶಾದ್ಯಂತ ಹಲವಾರು ಎಲೆಕ್ಟ್ರಿಕ್ ಸ್ಕೂಟರ್ ಈ ರೀತಿ ಬೆಂಕಿಗೆ ಆಹುತಿ ಆಗಿವೆ. ಸ್ಥಿತಿ ಹೀಗಿದ್ದಾಗಲೇ ಸರ್ವಿಸ್ ಸೆಂಟರ್‌ನಲ್ಲಿ ರಿಪೇರಿಗಾಗಿ ನಿಂತ 'ಓಲಾ' ಸ್ಕೂಟರ್‌ಗಳ ರಾಶಿಯೇ ಕಂಡುಬಂದಿದೆ ಎಂದು ಆರೋಪ ಮಾಡಲಾಗಿದೆ. ಹಾಗಾದರೆ ಈ ಕುರಿತು ಈಗ ಪ್ರಕಟವಾಗಿರುವ ವರದಿ ಹೇಳಿದ್ದು ಏನು? ಮುಂದೆ ಓದಿ.
Ola Electric's Service Woes
— Aditya Kalra (@adityakalra) November 28, 2023
This picture is from an Ola workshop near Mumbai. 100+ e-scooters waiting for repairs, gathering dust & littered with bird droppings. A @Reuters deep dive into India's biggest e-scooter maker & its challenges.
Read: https://t.co/O8NL7iq9J1 #Thread🧵
400 ಸರ್ವಿಸ್ ಸೆಂಟರ್‌ಗಳು!
ದೇಶದ ವಿವಿಧ ಭಾಗದಲ್ಲಿ 'ಓಲಾ' ಸ್ಕೂಟರ್‌ಗಳ ಆರೋಗ್ಯ ತಪಾಸಣೆಗೆ ಅಂದರೆ ಸರ್ವಿಸ್ ನೀಡಲು, ಸುಮಾರು 400 ಸರ್ವಿಸ್ ಸೆಂಟರ್‌ಗಳು ಇವೆ. ಈ ಪೈಕಿ ಇದೀಗ ರಾಯಿಟರ್ಸ್‌ನ ಸಿಬ್ಬಂದಿ ಸುಮಾರು 35 ಸರ್ವಿಸ್ ಸೆಂಟರ್‌ಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಇಲ್ಲೆಲ್ಲ ಭೇಟಿ ನೀಡಿದ ಸಮಯದಲ್ಲಿ, 'ಓಲಾ' ಸಿಬ್ಬಂದಿ ಜೊತೆಗೂ ಮಾತನಾಡಿದ್ದಾರೆ. ಅವರಿಂದ ಮಾಹಿತಿ ಸಂಗ್ರಹ ಮಾಡಿದ್ದೂ ಅಲ್ಲದೆ, ಆ ಸರ್ವಿಸ್ ಸೆಂಟರ್‌ಗಳಲ್ಲಿ ನಿಂತಿರುವ ಎಲೆಕ್ಟ್ರಿಕ್ ಸ್ಕೂಟರ್ಸ್ ಫೋಟೋಗಳನ್ನ ಕೂಡ ತೆಗೆದುಕೊಳ್ಳಲಾಗಿದೆ. ಒಂದೊಂದು ಸರ್ವಿಸ್ ಸೆಂಟರ್ ಪರಿಶೀಲನೆ ಮಾಡಿದಾಗಲೂ ಈ ರೀತಿ ರಿಪೇರಿಗಾಗಿ ನಿಂತಿದ್ದ ಹಲವು ಎಲೆಕ್ಟ್ರಿಕ್ ಸ್ಕೂಟರ್ಸ್ ಕಂಡುಬಂದಿವೆ ಎನ್ನಲಾಗಿದೆ.

ಗ್ರಾಹಕರ ಪ್ರಶ್ನೆ ಏನು ಗೊತ್ತಾ?
ಒಟ್ನಲ್ಲಿ ಈ ಆರೋಪಗಳ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ, ಹೀಗಾಗಿಯೇ ಕುತೂಹಲ ಕೂಡ ದುಪ್ಪಾಟ್ಟಾಗಿದೆ. ಮತ್ತೊಂದು ಕಡೆ, 'ಓಲಾ' ಎಲೆಕ್ಟ್ರಿಕ್ ಸ್ಕೂಟರ್‌ಗಳ ರಾಶಿ ಬಿದ್ದಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಉತ್ತರ ಕೂಡ ಸಿಗಬೇಕಿದೆ. ಹಾಗೇ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಳಕೆಗೆ ಸೂಕ್ತ ಉತ್ತರವೂ ಈಗ ಸಿಗಬೇಕಿದೆ ಅಂತಿದ್ದಾರೆ ಗ್ರಾಹಕರು.
ಇದೆಲ್ಲಾ ಏನೇ ಇರಲಿ ಭೂಮಿಯಲ್ಲಿ ಮಾಲಿನ್ಯ ಕಡಿಮೆ ಮಾಡಲು, ಹಾಗೂ ಪರಿಸ್ಥಿತಿಯ ನಿಯಂತ್ರಣಕ್ಕೆ ವಿದ್ಯುತ್ ಆಧರಿತ ವಾಹನಗಳ ಬಳಕೆ ಒಳ್ಳೆಯದು. ಆದರೆ ಈಗ ಎದುರಾದ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕು ಎಂಬುದು ಗ್ರಾಹಕರ ಬೇಡಿಕೆ. ಇಲ್ಲವಾದರೆ ಮತ್ತೆ ಪಳಿಯುಳಿಕೆಯ ಇಂಧನದ ವಾಹನಗಳನ್ನು ಗ್ರಾಹಕರು, ಅನಿವಾರ್ಯವಾಗಿ ಬಳಸುವ ಸ್ಥಿತಿ ಎದುರಾಗುವ ಅಪಾಯವಿದ್ದು, ಪರಿಸರಕ್ಕೂ ಮಾರಕ ಅಂತಿದ್ದಾರೆ ತಜ್ಞರು. ಈ ಕಾರಣಕ್ಕೆ, ಗ್ರಾಹಕರಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬೇಕಿದೆ.












Click it and Unblock the Notifications