ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ ಬಾನಟ್ ಮೇಲೆ ಕಾರ್ಮಿಕನನ್ನು 4ಕಿಮೀ ಹೊತ್ತೊಯ್ದ ಅಧಿಕಾರಿ!

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಅಧಿಕಾರಿಯ ಕಾರಿಗೆ ಮುತ್ತಿಗೆ ಹಾಕಿ, ಕಾರಿನ ಬಾನೆಟ್ ಹತ್ತಿದ್ದ ಪ್ರತಿಭಟನಾಕಾರರನ್ನು ಬರೋಬ್ಬರಿ 4 ಕಿ.ಮೀ ದೂರ ಹೊತ್ತು ಸಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇತ್ತೀಚೆಗೆ ರಾಮನಗರ್ ಜಿಲ್ಲೆಯ ಅಭಿವೃದ್ಧಿ ಅಧಿಕಾರಿ ಪಂಕಜ್ ಕುಮಾರ್ ಗೌತಮ್ ಅವರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಈ ವೇಳೆ ಅಧಿಕಾರಿ ಪಂಕಜ್ ಕುಮಾರ್ ಅಲ್ಲಿಂದ ನುಣುಚಿಕೊಳ್ಳಲು ಯತ್ನಿಸಿದ್ದರು.

ಅಡೆತಡೆ ದಾಟಿ ಸುರಕ್ಷಿತವಾಗಿ ದೇಗುಲ ತಲುಪಿದ ಆಂಜನೇಯ ಅಡೆತಡೆ ದಾಟಿ ಸುರಕ್ಷಿತವಾಗಿ ದೇಗುಲ ತಲುಪಿದ ಆಂಜನೇಯ

ಪಂಕಜ್ ಕುಮಾರ್ ಕಾರು ಹತ್ತುತ್ತಿದ್ದಂತೆಯೇ ಪ್ರತಿಭಟನಾಕಾರರು ಅವರ ಕಾರು ತಡೆದರು. ಈ ವೇಳೆ ಕಪ್ಪು ಅಂಗಿ ತೊಟ್ಟಿದ್ದ ಪ್ರತಿಭಟನಾಕಾರನೋರ್ವ ಕಾರಿನ ಬಾನೆಟ್ ಹತ್ತಿದ್ದ. ಇದರಿಂದ ಆಕ್ರೋಶಗೊಂಡ ಪಂಕಜ್ ಕುಮಾರ್ ಕೆಳೆಗ ಇಳಿಯುವಂತೆ ಆಕ್ರೋಶದಿಂದು ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಮೂಲಗಳ ಪ್ರಕಾರ ಪೂರ್ವ ಉತ್ತರ ಪ್ರದೇಶ ರಾಮ್ ನಗರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ರಾಮನಗರ್ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತ ಶೌಚಾಲಯಗಳ ನಿರ್ಮಾಣ ಮಾಡಿತ್ತು. ಆದರೆ, ಈ ಸಂಬಂಧ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿತ್ತು. ಸರ್ಕಾರದ ಈ ಧೋರಣೆಯಿಂದ ಕಾರ್ಮಿಕರು ಬೇಸತ್ತಿದ್ದರು.

ಆದರೆ ಇದಕ್ಕೆ ಸೊಪ್ಪು ಹಾಕದ ಪ್ರತಿಭಟನಾ ನಿರತ ವ್ಯಕ್ತ ಹೀಗೆ ಇರುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಪಂಕಜ್ ಕುಮಾರ್ ಹಾಗೆಯೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಸುಮಾರು 4 ಕಿ.ಮೀ ದೂರದವರೆಗೂ ಪ್ರತಿಭಟನಾ ಕಾರನನ್ನು ಪಂಕಜ್ ಕುಮಾರ್ ಹೊತ್ತೊಯ್ದಿದ್ದು ಮಾತ್ರವಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದಾರೆ.

ಮಾರ್ಗ ಮಧ್ಯೆ ಪಂಕಜ್ ಹಾಗೂ ಪ್ರತಿಭಟನಾ ಕಾರ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದು, ಕಾರು ಸುಮಾರು 4 ಕಿ.ಮೀ ದೂರ ಸಾಗಿದ ಬಳಿಕ ಸ್ಪೀಡ್ ಬ್ರೇಕರ್ ಬಂದಾಗ ಕಾರು ನಿಂತಿದೆ. ಈ ವೇಳೆ ಪ್ರತಿಭಟನಾಕಾರ ಇಳಿದು ಹೋಗಿದ್ದಾನೆ.
ಅದೃಷ್ಟಲವಶಾತ್ ಆತನಿಗೇನು ಆಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅಧಿಕಾರಿಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ. ಈ ಚಿತ್ರದ ಮೂಲಕ ವೀಕ್ಷಿಸಬಹುದಾಗಿದೆ.

ಕಾರ್ ಬಾನೆಟ್ ಹತ್ತಿದ್ದ ಪ್ರತಿಭಟನಾಕಾರನನ್ನು ಹೊತ್ತೊಯ್ಯುತ್ತಿರುವುದು

ಕಾರ್ ಬಾನೆಟ್ ಹತ್ತಿದ್ದ ಪ್ರತಿಭಟನಾಕಾರನನ್ನು ಹೊತ್ತೊಯ್ಯುತ್ತಿರುವುದು

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಅಧಿಕಾರಿಯ ಕಾರಿಗೆ ಮುತ್ತಿಗೆ ಹಾಕಿ, ಕಾರಿನ ಬಾನೆಟ್ ಹತ್ತಿದ್ದ ಪ್ರತಿಭಟನಾಕಾರರನ್ನು ಬರೋಬ್ಬರಿ 4 ಕಿ.ಮೀ ದೂರ ಹೊತ್ತು ಸಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇತ್ತೀಚೆಗೆ ರಾಮನಗರ್ ಜಿಲ್ಲೆಯ ಅಭಿವೃದ್ಧಿ ಅಧಿಕಾರಿ ಪಂಕಜ್ ಕುಮಾರ್ ಗೌತಮ್ ಅವರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಈ ವೇಳೆ ಅಧಿಕಾರಿ ಪಂಕಜ್ ಕುಮಾರ್ ಅಲ್ಲಿಂದ ನುಣುಚಿಕೊಳ್ಳಲು ಯತ್ನಿಸಿದ್ದರು. ಪಂಕಜ್ ಕುಮಾರ್ ಕಾರು ಹತ್ತುತ್ತಿದ್ದಂತೆಯೇ ಪ್ರತಿಭಟನಾಕಾರರು ಅವರ ಕಾರು ತಡೆದರು.

ಮತ್ತೊಂದು ಹೆಜ್ಜೆ ಮುಂದಿಟ್ಟ ನಾವಿಕ

ಮತ್ತೊಂದು ಹೆಜ್ಜೆ ಮುಂದಿಟ್ಟ ನಾವಿಕ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಗುರುವಾರ ಐಆರ್ ಎನ್ ಎಸ್ ಎಸ್ -1ಐ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ. ನಾವಿಕ್ ಪಥದರ್ಶಕ ಉಪಗ್ರಹ ಸಮೂಹದ ಭಾಗವಾಗಿ ಉಡಾವಣೆ ಮಾಡಿದ ಎಂಟನೇ ಸಂವಹನ ಉಪಗ್ರಹ ಇದಾಗಿದೆ. ಆಂಧ್ರಪ್ರದೇಶ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 4 ಗಮಟೆಗೆ ಪಿಎಸ್ಎಲ್ ವಿಸಿ-41 ಮೂಲಕ ಉಡಾವಣೆ ಮಾಡಲಾಯಿತು. ಈ ಮೊದಲು ಉಡಾವಣೆ ಮಾಡಿದ್ದ ಐಆರ್ ಎನ್ ಎಸ್ ಎಸ್ -1ಎ ಉಪಗ್ರಹದ ರೂಬಿಡಿಯಂ ಪರಮಾಣು ಗಡಿಯಾರ ಎರಡು ವರ್ಷಗಳ ಹಿಂದೆ ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಆ ಉಪಗ್ರಹಕ್ಕೆ ಪರ್ಯಾಯವಾಗಿ ಐಆರ್ ಎನ್ ಎಸ್ ಎಸ್ -1ಐ ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆಯಾಗಿದೆ.

ಬಿಹು ಆಚರಣೆ ಕಂಡುಬಂದಿದ್ದು ಹೀಗೆ

ಬಿಹು ಆಚರಣೆ ಕಂಡುಬಂದಿದ್ದು ಹೀಗೆ

ಬಿಹು ಅಸ್ಸಾಂ ರಾಜ್ಯದ ಮೂರು ಸಾಂಸ್ಕೃತಿಕ ಹಬ್ಬಗಳನ್ನು ಪ್ರತಿನಿಧಿಸುತ್ತದೆ. ಪ್ರಾಚೀನ ರೀತಿ ರಿವಾಜುಗಳು ಇದರ ಮೂಲವಾಗಿದ್ದರೂ ಕೂಡ ಇದು ನಗರ ಪ್ರದೇಶ ನಿರ್ದಿಷ್ಟ ಗುಣಗಳನ್ನು ಸೇರಿಸಿಕೊಂಡಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಅತ್ಯಂತ ಜನಪ್ರಿಯ ಹಬ್ಬವಾಗಿ ರೂಪುಗೊಂಡಿದೆ.

ಗ್ರಾಮಸ್ಥರಿಂದ ಮೀನು ಹಿಡಿಯುವ ಸ್ಪರ್ಧೆ

ಗ್ರಾಮಸ್ಥರಿಂದ ಮೀನು ಹಿಡಿಯುವ ಸ್ಪರ್ಧೆ

ಬೊಗಲಿ ಬಿಹು ಹಬ್ಬದ ಪ್ರಯುಕ್ತ ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮೂನು ಹಿಡಿಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು, ಮೀನು ಹಿಡಿಯುವುದರಲ್ಲಿ ನಿರತರಾಗಿರುವ ಗ್ರಾಮಸ್ಥರು ಕಂಡು ಬಂದಿದ್ದು ಹೀಗೆ. ಬೋಗ್ -ಭಾರಿ ಬೋಜನ ಮಾಡುವುದು ಎಂದರ್ಥ, ಇದು ಸುಗ್ಗಿಯ ಹಬ್ಬವಾಗಿದ್ದು ಕೊಯ್ಲು ಕಾಲವು ಮುಕ್ತಾಯೌಆಗುವುದನ್ನು ಸೂಚಿಸುತ್ತದೆ.ಉರುಕ ಎನ್ನುವ ದಿನದಂದು ಪುರುಷರು ಪ್ರಮುಖವಾಗಿ ನದಿಯ ಹತ್ತಿರವಿರುವ ಹೊಲ-ಗದ್ದೆಗಳನ್ನು ಆಯ್ಕೆ ಮಾಡಿಕೊಂಡು ಹೋಗುತ್ತಾರೆ. ಅದರಲ್ಲಿ ಮೀನು ಹಡಿಇಯುವ ಸ್ಪರ್ಧೆಯೂ ಕೂಡ ಒಂದಾಗಿದೆ.

ಮಹಿಳಾ ದೌರ್ಜನ್ಯದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ನಾಯಕಿ

ಮಹಿಳಾ ದೌರ್ಜನ್ಯದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ನಾಯಕಿ

ದೇಶದಲ್ಲಿ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ದೆಹಲಿಯ ಇಂಡಿಯಾಗೇಟ್ ನಲ್ಲಿ ಗುರುವಾರ ರಾತ್ರಿ ನಡೆದ ಕ್ಯಾಂಡಲ್ ಲೈಟ್ ಪ್ರದರ್ಶನದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು.

ತ್ರಿಪುರಾದಲ್ಲಿ ಚಕ್ಮಾ ಸಮುದಾಯದವರಿಂದ ನದಿಗೆ ಪೂಜೆ

ತ್ರಿಪುರಾದಲ್ಲಿ ಚಕ್ಮಾ ಸಮುದಾಯದವರಿಂದ ನದಿಗೆ ಪೂಜೆ

ಬೆಂಗಾಲಿಗರು ಹೊಸ ವರ್ಷಾಚರಣೆ ಹಬ್ಬವಾದ ಚಕ್ಮಾ ಸಮುದಾಯದ ಬಿಹು ಹಬ್ಬದ ಅಂಗವಾಗಿ ಪಂಚರ್ತಲಾದ ಚಕ್ಮಾ ಸಮುದಾಯದ ಯುವತಿಯೊಬ್ಬಳು ನದಿಗೆ ಹೂವುಗಳನ್ನು ಅರ್ಪಿಸುವ ಮೂಲಕ ಗಮನ ಸೆಳೆದಳು

English summary
In a strange incident district development officer Pankajkumar of Ramnagar district in Uttara pradesh has towed away a labour about four kilo meters. Who was on strike seeking his weigh for construction of government toilets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X