Get Updates
Get notified of breaking news, exclusive insights, and must-see stories!

ಒಡಿಶಾದ ಖ್ಯಾತ ಗಾಯಕ ಮುರಳಿ ಪ್ರಸಾದ್ ಮಹಾಪಾತ್ರ ನಿಧನ: ಲೈವ್ ಕಾರ್ಯಕ್ರಮದಲ್ಲಿ ಹೃದಯಾಘಾತ

ಬಾಲಿವುಡ್ ಖ್ಯಾತ ಗಾಯಕ ಕೃಷ್ಣಕುಮಾರ್ (ಕೆಕೆ) ಅವರ ನಿಧನ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಾಗಲೇ ಕೆಕೆ ಅವರಂತೇ ಮತ್ತೊಬ್ಬ ಗಾಯಕರು ಅಗಲಿದ್ದಾರೆ. ಒಡಿಶಾ ಗಾಯಕ ಮುರಳಿ ಪ್ರಸಾದ್ ಮಹಾಪಾತ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಲೈವ್ ಕಾರ್ಯಕ್ರಮದ ಸಮಯದಲ್ಲಿ ಅವರು ಸಾವನ್ನಪ್ಪಿದರು. ಭಾನುವಾರ ರಾತ್ರಿ ಒಡಿಶಾದ ಜೇಪೋರ್ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ನೇರ ಪ್ರದರ್ಶನ ನೀಡುತ್ತಿದ್ದರು. ಆಗ ಹಠಾತ್ತನೆ ಕುರ್ಚಿಯ ಮೇಲೆ ಕುಳಿತಿದ್ದ ಅವರು ಕೆಳಗೆ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವನು ನಿಧನರಾಗಿದ್ದಾರೆಂದು ಘೋಷಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಮೊಹಾಪಾತ್ರ ಅವರು ದುರ್ಗಾ ಪೂಜೆಗಾಗಿ ಕೊರಾಪುಟ್ ಜಿಲ್ಲೆಯ ಜೇಪೋರ್ ಪಟ್ಟಣದ ರಾಜನಗರದಲ್ಲಿ ನೇರ ಪ್ರದರ್ಶನ ನೀಡುತ್ತಿದ್ದರು. ಈ ಸಂದರ್ಭದಲ್ಲಿ, ಅವರು ಹೃದಯಾಘಾತದಿಂದ ನಿಧನರಾದರು. ಒಂದೋ ಎರಡೋ ಹಾಡು ಹಾಡಿದ ನಂತರ ಕುರ್ಚಿಯ ಮೇಲೆ ಕುಳಿತು ಇತರ ಗಾಯಕರನ್ನು ಪ್ರೋತ್ಸಾಹಿಸುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕುಟುಂಬದ ಮೂಲಗಳು ಸುದ್ದಿಯಲ್ಲಿ ತಿಳಿಸಿವೆ. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಇದೇ ವೇಳೆ ಮುರಳಿ ಅವರ ಹಿರಿಯ ಸಹೋದರ ವಿಭೂತಿ ಪ್ರಸಾದ್ ಮಹಾಪಾತ್ರ ಅವರ ಹೇಳಿಕೆಯೂ ಹೊರಬಿದ್ದಿದ್ದು, 'ಅವರು ಬಹಳ ದಿನಗಳಿಂದ ಹೃದ್ರೋಗ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಅವರು ತಮ್ಮ 59 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು'.

Odishas famous singer Murali Prasad Mahapatra passes away: heart attack at live show

ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಸಂತಾಪ-

ಮುರಳಿ ಮಹಾಪಾತ್ರ ಅವರ ನಿಧನಕ್ಕೆ ಒಡಿಶಾ ಮುಖ್ಯಮಂತ್ರಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಪೋಸ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಗಾಯಕ ಮುರಳಿ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಬರೆದಿದ್ದಾರೆ. ಅವರ ಮಧುರ ಕಂಠ ಕೇಳುಗರ ಹೃದಯದಲ್ಲಿ ಸದಾ ಅನುರಣಿಸುತ್ತದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಇದರೊಂದಿಗೆ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

Odishas famous singer Murali Prasad Mahapatra passes away: heart attack at live show

ಈ ಹಿಂದೆ ಲೈವ್ ಕನ್ಸರ್ಟ್ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಕೆಕೆ ಕೂಡ ಸಾವನ್ನಪ್ಪಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಕೋಲ್ಕತ್ತಾದಲ್ಲಿ ನೇರ ಪ್ರದರ್ಶನದಲ್ಲಿ ಕೆಕೆ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಅವರ ಹಠಾತ್ ನಿಧನದಿಂದ ಬಾಲಿವುಡ್ ಬೆಚ್ಚಿಬಿದ್ದಿದೆ. ಅವರ ಸಾವು ಎಲ್ಲರಿಗೂ ಆಘಾತ ತಂದಿದೆ. ಅಭಿಮಾನಿಗಳು ತುಂಬಾ ದುಃಖಿತರಾಗಿದ್ದರು. ಒಡಿಶಾ ಸಿಂಗರ್‌ನ ಸಾವು ಜನರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಜೊತೆಗೆ ಈ ಘಟನೆ ಕೆಕೆ ಅವರ ದುಃಖದಿಂದ ಎಲ್ಲರೂ ಹೊರಬರುತ್ತಿರುವಾಗ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+