Odisha Tata Steel: ಟಾಟಾ ಸ್ಟೀಲ್ ಪ್ಲಾಂಟ್‌ನಲ್ಲಿ ಸ್ಟೀಮ್ ಸೋರಿಕೆ, 19 ಕಾರ್ಮಿಕರಿಗೆ ಗಾಯ

ನವದೆಹಲಿ, ಜೂನ್ 13: ಒಡಿಶಾದ ಟಾಟಾ ಸ್ಟೀಲ್ ಪ್ಲಾಂಟ್‌ನಲ್ಲಿ ಸ್ಟೀಮ್ ಸೋರಿಕೆ ಉಂಟಾದ ಪರಿಣಾಮ ಹಲವು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಒಡಿಶಾ ರಾಜ್ಯದ ಮೆರಮಂಡಲಿನಲ್ಲಿನ ಟಾಟಾ ಸ್ಟೀಲ್ ಲಿಮಿಟೆಡ್ ಸ್ಥಾವರದಲ್ಲಿ ನೂರಾರು ಕಾರ್ಮಿಕರು ಎಂದಿನಂತೆ ಮಂಗಳವಾರ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಕೈಗಾರಿಕಾ ತಪಾಸಣೆ ವೇಳೆ ಸ್ಥಾವರದ ಸ್ಟೀಮ್ ಸೋರಿಕೆ ಆಗಿದೆ. ಇದರಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದ ಸುಮಾರು 19 ಮಂದಿಗೆ ಗಾಯಗಳಾಗಿವೆ ಎಂದು ವರದಿ ಆಗಿದೆ.

Odisha: Steam Leak In Tata Steel Meramandali Plant, 19 labours Injured

ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಕುರಿತು ಟಾಟಾ ಸಂಸ್ಥೆ ಅಧಿಕೃತ ಮಾಹಿತಿ ನೀಡಬೇಕಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆ ಘಟನಾ ಸ್ಥಳದಲ್ಲಿ ಅಗತ್ಯ ಸೌಲಭ್ಯ, ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಷ್ಟೇ ಮಾಹಿತಿ ನೀಡಿದೆ.

ಒಡಿಶಾದ ಧೆಂಕನಾಲ್‌ನಲ್ಲಿರುವ ಟಾಟಾ ಸ್ಟೀಲ್ ಮೆರಮಂಡಲಿನ ಆವರಣದ BFPP2 ವಿದ್ಯುತ್ ಸ್ಥಾವರದಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ತಪಾಸಣಾ ಕಾರ್ಯದ ಸಂದರ್ಭದಲ್ಲಿ ಸ್ಟೀಮ್ ಸೋರಿಕೆ ಆಗಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆತಂಕಕ್ಕೀಡಾದರು. ಸದ್ಯ ಸ್ಥಾವರದ ಸುತ್ತಮುತ್ತ ನಿಗಾ ವಹಿಸಲಾಗಿದೆ ಎಂದು ಟಾಟಾ ಸ್ಟೀಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗಾಯಾಳು ಕುಟುಂಬದ ಜತೆ ಟಾಟಾ ಸ್ಟೀಲ್

ಗಾಯಾಳುಗಳ ಪೈಕಿ ಕೆಲವರನ್ನು ಹತ್ತಿರದ ಆಸ್ಪತ್ರೆಗೆ ಇನ್ನೂ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ಗೆ ಆಸ್ಪತ್ರೆಗೆ ಕಂಪನಿಯ ಆಂಬುಲೇನ್ಸ್‌ ನಲ್ಲಿ ರವಾನಿಸಲಾಗಿದೆ. ಟಾಟಾ ಸ್ಟೀಲ್ ಕಂಪನಿಯು ಗಾಯಗೊಂಡ ಸಂತ್ರಸ್ತ ಉದ್ಯೋಗಿಗಳ ಕುಟುಂಬ ಜೊತೆ ನಿಂತಿದೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದೆ.

Odisha: Steam Leak In Tata Steel Meramandali Plant, 19 labours Injured

ಉನ್ನತ ಅಧಿಕಾರಿಗಳ ಜೊತೆಗೆ ಚರ್ಚಿಸಿರುವ ಕಂಪನಿಯು ಏಕಾಎಕಿ ಸೋರಿಕೆಯಾಗಲು ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿದೆ. ಈಗಾಗಲೇ ಆಂತರಿಕ ತನಿಖೆ ಆರಂಭಿಸಲಾಗಿದೆ. ಅದಕ್ಕೂ ಮೊದಲು ನಮಗೆ ನಮ್ಮ ಕಾರ್ಮಿಕರ ಸುರಕ್ಷತೆ ಮುಖ್ಯ. ಮುಂದೆ ಇಂತಹ ಘಟನೆಗಳು ಆಗದಂತೆ ಅಗತ್ಯ ಎಚ್ಚರಿಕೆ ವಹಿಸುವುದಾಗಿ ಟಾಟಾ ಸ್ಟೀಲ್ ಕಂಪನಿ ಮಾಹಿತಿ ನೀಡಿದೆ ಎಂದು ಎನ್‌ಡಿಟಿ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+