'ಎನ್‌ಕೌಂಟರ್‌ಗಳಿಂದ ಅಪರಾಧಗಳ ಸಂಖ್ಯೆ ಇಳಿಕೆ'- ಯುಪಿ ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ ಜೂನ್ 2: ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌ಗಳು ಅಪರಾಧಗಳನ್ನು ಕಡಿಮೆ ಮಾಡಲಾಗಿದೆ, ಆದರೆ ವಿರೋಧ ಪಕ್ಷಗಳು ಹೆಚ್ಚು ಎನ್‌ಕೌಂಟರ್‌ಗಳಾಗಿವೆ ಎಂದು ಆರೋಪಿಸಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದಾದ ನಂತರ 2022ರ ಕೊನೆಯ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು. ಇದಾದ ಬಳಿಕ ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಹೀಗಿರುವಾಗ ಬಿಜೆಪಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 6 ವರ್ಷಗಳ ಸಂಭ್ರಮದಲ್ಲಿದ್ದಾರೆ. ಏಕೆಂದರೆ ಈ ಮೊದಲು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರು ಯಾರೂ ಸತತ 6 ವರ್ಷಗಳ ಕಾಲ ಅಧಿಕಾರ ನಡೆಸಿರಲಿಲ್ಲ.

ಹಾಗಾಗಿ ಯೋಗಿ ಆದಿತ್ಯನಾಥ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಹೀಗಾಗಿ ಬಿಜೆಪಿ ಯೋಗಿ ಆಡಳಿತದ ಸಾಧನೆಗಳನ್ನು ಜನರ ಬಳಿಗೆ ಹೆಚ್ಚು ಕೊಂಡೊಯುತ್ತಿದ್ದಾರೆ. ಆದರೆ ಸಿಎಂ ಯೋಗಿ ಆದಿತ್ಯನಾಥ್ ಮೇಲೆ ವಿರೋಧ ಪಕ್ಷಗಳು ಪ್ರಮುಖ ಆರೋಪ ಮಾಡಿವೆ. ಅಂದರೆ ಯೋಗಿ ಅಧಿಕಾರದ 6 ವರ್ಷಗಳಲ್ಲಿ ಸುಮಾರು 10,713 ಎನ್‌ಕೌಂಟರ್‌ಗಳು ನಡೆದಿವೆ ಮತ್ತು 178 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿವೆ. ಈ ಕುರಿತು ವಿವರಣೆ ನೀಡಿರುವ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದಲ್ಲಿ ಮಾಫಿಯಾಗಳ ಆಡಳಿತವನ್ನು ಹತ್ತಿಕ್ಕಲಾಗಿದೆ ಎಂದು ಹೇಳಿದ್ದಾರೆ.
"ಈ ಎನ್‌ಕೌಂಟರ್‌ನಿಂದ ರಾಜ್ಯದಲ್ಲಿ ಅತ್ಯಾಚಾರ, ಕೊಲೆ, ದರೋಡೆ ಮತ್ತು ಮಹಿಳೆಯರ ಮೇಲಿನ ಹಲ್ಲೆಯಂತಹ ಅಪರಾಧಗಳು ಕಡಿಮೆಯಾಗಿದೆ. ಅದೇ ರೀತಿ ಸಮಾಜ ವಿರೋಧಿ ಶಕ್ತಿಗಳಿಂದ 4,500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯವನ್ನು ಆಧುನೀಕರಿಸಲಾಗಿದೆ. ಕಟ್ಟುನಿಟ್ಟಾಗಿ ಇದಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯವು ಪ್ರಸ್ತುತ 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ'' ಎಂದು ಹೇಳಿದರು.
'ಹಿಂದಿನ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ದರೋಡೆ, ಕೊಲೆ, ಲೈಂಗಿಕ ದೌರ್ಜನ್ಯ ಮತ್ತು ಅಪಹರಣದ ಘಟನೆಗಳು ಸಾಮಾನ್ಯವಾಗಿದ್ದವು. ಆದರೆ ಬಿಜೆಪಿ ಆಡಳಿತದಲ್ಲಿ ಈ ಅಪರಾಧಗಳು ಕಡಿಮೆಯಾಗಿವೆ. ಇದಕ್ಕೆ ಸಂಪೂರ್ಣ ಕಾರಣ ಎನ್‌ಕೌಂಟರ್‌ಗಳು. ಈಗ ಮಾಫಿಯಾಗಳು ಜೀವ ಭಯದಲ್ಲಿದ್ದು, ಪೊಲೀಸರಿಗೆ ಶರಣಾಗುತ್ತಿದ್ದಾರೆ' ಎಂದು ವಿರೋಧ ಪಕ್ಷಗಳಿಗೆ ಉತ್ತರ ಕೊಟ್ಟಿದ್ದಾರೆ.
ಯುಪಿ ಎನ್‌ಕೌಂಟರ್‌ಗಳು
ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್‌ರವರು ನೇಮಕಗೊಂಡ ನಂತರ ಪ್ರತಿ 15 ದಿನಕ್ಕೊಬ್ಬರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲೆಯಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಪ್ರಕಟಿಸಿದೆ. 2017ರ ಮಾರ್ಚ್ ನಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ, ಉತ್ತರ ಪ್ರದೇಶ ರಾಜ್ಯವು 178 ಎನ್‌ಕೌಂಟರ್‌ಗಳಿಗೆ ಸಾಕ್ಷಿಯಾಗಿದೆ. ಅಂದರೆ ಪ್ರತಿ 15 ದಿನಗಳಿಗೊಮ್ಮೆ ಪೊಲೀಸ್ ಎನ್‌ಕೌಂಟರ್ ನಡೆದಿದೆ ಎಂದು ವರದಿ ಹೇಳಿದೆ.
2016 ಮತ್ತು 2022 ರ ನಡುವೆ, ಅಪರಾಧ ಸಂಖ್ಯೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಅಧಿಕೃತ ದಾಖಲೆಗಳ ಪ್ರಕಾರ ದರೋಡೆ, ಕಳ್ಳತನದ 82% ಮತ್ತು ಕೊಲೆಯಂತಹ ಪ್ರಕರಣಗಳಲ್ಲಿ 37% ಇಳಿಕೆ ಕಂಡುಬಂದಿದೆ ಎಂದು ಹೇಳುತ್ತಾರೆ.
ಆದರೆ ಉತ್ತರ ಪ್ರದೇಶದ ಅಪರಾಧ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಜೊತೆ ಮಾತಾನಾಡಿ "ಘೋರ ಅಪರಾಧಗಳನ್ನು ನಿಯಂತ್ರಿಸುವ ಅಥವಾ ಕಠಿಣ ಅಪರಾಧಿಗಳ ಮೇಲೆ ನಿಗಾ ಇರಿಸಲು ಎಂದಿಗೂ ಪೊಲೀಸ್ ಎನ್‌ಕೌಂಟರ್‌ಗಳು ಪರಿಹಾರವಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications